Advertisement

ಪಾಕ್‌ನಿಂದ ಗುಜರಾತ್‌ ಮೀನುಗಾರರ ಸಿಮ್‌ ಬಳಕೆ!

09:00 PM Apr 23, 2022 | Team Udayavani |

ನವದೆಹಲಿ: ಭಾರತದ ರಕ್ಷಣಾ ವ್ಯವಸ್ಥೆಯ ಬಗ್ಗೆ ಕಳ್ಳಮಾರ್ಗದಲ್ಲಿ ಮಾಹಿತಿ ಪಡೆಯಲು ಸಾಧ್ಯವಿರುವ ಎಲ್ಲ ಕೃತ್ಯಗಳನ್ನೂ ಪಾಕಿಸ್ತಾನ ಮಾಡುತ್ತಿದೆ.

Advertisement

ಇದೀಗ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನೀಡಿರುವ ಮಾಹಿತಿಯಲ್ಲಿ ಅದರ ಇನ್ನೊಂದು ಕಳ್ಳಾಟ ಬಯಲಾಗಿದೆ. ಅದು ಗುಜರಾತ್‌ನ ಬಂಧಿತ ಮೀನುಗಾರರ ಸಿಮ್‌ ಬಳಸಿಕೊಂಡು ಭಾರತ ರಕ್ಷಣಾ ವ್ಯವಸ್ಥೆಯ ಮಾಹಿತಿ ಪಡೆಯಲು ಯತ್ನಿಸಿದೆ.

ಈ ಕುರಿತು ಎನ್‌ಐಎ ಹೈದರಾಬಾದ್‌ನ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ:ಹನುಮಾನ್ ಚಾಲೀಸಾ ಪ್ರಕರಣ : ರವಿ ರಾಣಾ, ನವನೀತ್ ಕೌರ್ ಬಂಧನ

2020ರಲ್ಲಿ ಪಾಕಿಸ್ತಾನದ ನೌಕಾದಳ ಗುಜರಾತ್‌ನ ಮೀನುಗಾರರನ್ನು ಬಂಧಿಸಿತ್ತು. ಇವರ ಸಿಮ್‌ಗಳನ್ನು ಬಳಸಿಕೊಳ್ಳಲಾಗಿದೆ. ಇದಕ್ಕೆ ಪಾಕಿಸ್ತಾನದ ವಾಸೀಮ್‌ ಹಾಗೂ ಗುಜರಾತ್‌ನ ಅಲ್ತಾಫ್ ಹುಸೇನ್‌ ಗಾಂಚಿಭಾಯ್‌ ನೆರವಾಗಿದ್ದಾರೆ ಎಂದು ಎನ್‌ಐಎ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next