Advertisement
ಆ ಚಿತ್ರದಲ್ಲಿ ಇಬ್ಬರು ಪಾಕ್ ಸೈನಿಕರಿದ್ದು ಅವರ ಮುಖಭಾಗ ಮತ್ತು ಸಮವಸ್ತ್ರದಲ್ಲಿ ಹೆಸರಿರುವ ಭಾಗವನ್ನು ಮರೆಮಾಚಲಾಗಿದೆ. ಅವರಲ್ಲಿ ಒಬ್ಬ ಯೋಧ ಪತನಗೊಂಡ ವಿಮಾನದ ಅವಶೇಷವೊಂದರ ಮೇಲೆ ನಿಂತು ‘ಚಿಯರ್ ಅಪ್’ ಸಿಂಬಲ್ ಅನ್ನು ತೋರಿಸುತ್ತಿದ್ದಾನೆ. ಈ ಫೊಟೋವನ್ನು ‘ಪಾಕಿಸ್ಥಾನ್ ಡಿಫೆನ್ಸ್’ ತನ್ನ ಅಧಿಕೃತ ಟ್ವಿಟ್ಟರ್ ಅಕೌಂಟ್ ನಲ್ಲಿ ಬುಧವಾರದಂದು ಪ್ರಕಟಿಸಿದೆ. ‘ಶಕ್ತಿಶಾಲಿ ಅಲ್ಲಾಹುವಿನ ಕೃಪೆ ದೊಡ್ಡದು. ಭಾರತದ ಯುದ್ಧ ವಿಮಾನಗಳು ಪಾಕಿಸ್ಥಾನದ ವಾಯುಪ್ರದೇಶದೊಳಗೆ 21 ನಿಮಿಷ ಹಾರಲಿ, ಆಮೇಲಿನದ್ದನ್ನು ನಾವು ನೋಡಿಕೊಳ್ಳುತ್ತೇವೆ’ ಎಂದು ಈ ಟ್ವೀಟ್ ನಲ್ಲಿ ಬರೆದುಕೊಳ್ಳಲಾಗಿದೆ.’
ಮೊನ್ನೆಯಿಂದೀಚೆಗೆ ಹಳೆಯ ಫೊಟೋ, ತಿರುಚಿದ ಫೊಟೋಗಳನ್ನೇ ಹಾಕಿ ನಗೆಪಾಟಲಿಗೆ ಗುರಿಯಾಗುತ್ತಿರುವ ಪಾಕ್ ಈ ಬಾರಿಯೂ ಯಾವುದಾದರೂ ಹಳೇ ಫೊಟೋವನ್ನು ಪೋಸ್ಟ್ ಮಾಡಿ ಉತ್ತರನ ಪೌರುಷ ತೋರಿಸುತ್ತಿದೆಯೇ ಎಂಬ ಸಂದೇಹವೂ ವ್ಯಕ್ತವಾಗುತ್ತಿದೆ.