Advertisement

ಭಾರತದಿಂದ ಸೊಳ್ಳೆ ಪರದೆ ಖರೀದಿಗೆ ಮುಂದಾದ ಪಾಕಿಸ್ತಾನ

11:09 PM Oct 14, 2022 | Team Udayavani |

ಇಸ್ಲಾಮಾಬಾದ್‌: ಭಾರೀ ಪ್ರವಾಹದಿಂದ ಸಂಕಷ್ಟಕ್ಕೀಡಾಗಿರುವ ಪಾಕಿಸ್ತಾನದಲ್ಲಿ ಮಲೇರಿಯಾ ಪ್ರಕರಣಗಳು ಹೆಚ್ಚುತ್ತಿವೆ.

Advertisement

ರೋಗ ನಿಯಂತ್ರಣಕ್ಕಾಗಿ ಭಾರತದಿಂದ ಸೊಳ್ಳೆ ಪರದೆಗಳನ್ನು ಖರೀದಿಸಲು ಪಾಕಿಸ್ತಾನದ ಆರೋಗ್ಯ ಸಚಿವಾಲಯ ಶುಕ್ರವಾರ ಅನುಮತಿ ನೀಡಿದೆ.

ಅದರಂತೆ, ಮುಂದಿನ ಮಂಗಳವಾರ ಪಾಕಿಸ್ತಾನವು 60 ಲಕ್ಷ ಸೊಳ್ಳೆ ಪರದೆಗಳನ್ನು ಭಾರತದಿಂದ ಖರೀದಿ ಮಾಡಲಿದೆ. ಇದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯು ಪಾಕ್‌ಗೆ ಹಣಕಾಸಿನ ನೆರವು ಒದಗಿಸಲಿದೆ.

ವಾಘಾ ಗಡಿ ಮೂಲಕ ಸೊಳ್ಳೆ ಪರದೆ ರವಾನೆ ಪ್ರಕ್ರಿಯೆ ನಡೆಯಲಿದೆ.

ಈಗಿರುವ ಪರಿಸ್ಥಿತಿ ಮುಂದುವರಿದರೆ, ಪಾಕ್‌ನಲ್ಲಿ 2023ರ ವೇಳೆಗೆ 32 ಜಿಲ್ಲೆಗಳಲ್ಲಿ 27 ಲಕ್ಷ ಮಲೇರಿಯಾ ಪ್ರಕರಣಗಳು ಪತ್ತೆಯಾಗಲಿವೆ ಎಂದು ಡಬ್ಲ್ಯುಎಚ್‌ಒ ಅಂದಾಜಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next