ಇಸ್ಲಾಮಾಬಾದ್: ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ಹೈರಾಣವಾಗಿರುವ ಪಾಕಿಸ್ತಾನ ಇದೀಗ ಪೆಟ್ರೋಲ್ ದರವನ್ನು ಹೆಚ್ಚಳ ಮಾಡಲು ನಿರ್ಧರಿಸಿರುವುದಾಗಿ ಜಿಯೋ ನ್ಯೂಸ್ ಶನಿವಾರ (ಮಾರ್ಚ್ 30) ವರದಿ ಮಾಡಿದೆ.
ಇದನ್ನೂ ಓದಿ:Desi Swara:ಅಮೆರಿಕದ ರಾಜಧಾನಿಯಲ್ಲೊಂದು ಸುತ್ತು : ಚೆರ್ರಿ ಬ್ಲಾಸೂಮ್ ಫೆಸ್ಟಿವಲ್ ಸೊಗಡು
ಅಧಿಕಾರಿಗಳ ಮಾಹಿತಿ ಪ್ರಕಾರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಛಾ ತೈಲ ಬೆಲೆ ಏರಿಕೆಯಾದ ಪರಿಣಾಮ, ಪ್ರತಿ ಲೀಟರ್ ಪೆಟ್ರೋಲ್ ಬೆಲೆಯನ್ನು ಸುಮಾರು 10 ಪಾಕಿಸ್ತಾನಿ ರೂಪಾಯಿಯಷ್ಟು ಏರಿಕೆ ಮಾಡಲಾಗಿದೆ ವರದಿ ವಿವರಿಸಿದೆ.
ತೈಲ ಕಂಪನಿಗಳ ಪ್ರಕಾರ, ಪಾಕಿಸ್ತಾನದಲ್ಲಿ ಪ್ರಸ್ತುತ ಪೆಟ್ರೋಲ್ ಲೀಟರ್ ಬೆಲೆ 279.75 ಪಾಕ್ ರೂಪಾಯಿಯಷ್ಟಿದ್ದು, ಮುಂದಿನ 15 ದಿನಗಳಲ್ಲಿ ಲೀಟರ್ ಪೆಟ್ರೋಲ್ ಬೆಲೆಯನ್ನು 289.69 ರೂಪಾಯಿಗೆ ಏರಿಕೆಯಾಗಲಿದೆ ಎಂದು ತಿಳಿಸಿದೆ.
ಮತ್ತೊಂದೆಡೆ ಹೈಸ್ಪೀಡ್ ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್ ಗೆ 1.30 ಪಾಕ್ ರೂಪಾಯಿಯಷ್ಟು ಇಳಿಕೆ ಮಾಡಿದ್ದು, ಇದರಿಂದಾಗಿ ಹೈಸ್ಪೀಡ್ ಡೀಸೆಲ್ ಬೆಲೆ 285.86 ರೂಪಾಯಿಯಿಂದ 2,84.26 ರೂ.ಗೆ ಇಳಿಕೆಯಾಗಲಿದೆ.
ಸೀಮೆ ಎಣ್ಣೆ ಬೆಲೆಯಲ್ಲಿ ಅಲ್ಪಪ್ರಮಾಣದ ಇಳಿಕೆ ಮಾಡಿದ್ದು, ಲೀಟರ್ ಸೀಮೆಎಣ್ಣೆ ಬೆಲೆಯನ್ನು 188.66 ರೂಪಾಯಿಯಿಂದ 188.49ರೂ.ಗೆ ಇಳಿಕೆಯಾಗಿದೆ. ಅದೇ ರೀತಿ ಲೈಟ್ ಡೀಸೆಲ್ ಬೆಲೆಯನ್ನು ಲೀಟರ್ ಗೆ 168.18 ರೂಪಾಯಿಯಿಂದ 168.63 ರೂ.ಗೆ ಏರಿಕೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.