ಲಾಹೋರ್: ಪಾಕಿಸ್ಥಾನ ಕ್ರಿಕೆಟ್ ತಂಡ ನ್ಯೂಜಿಲ್ಯಾಂಡ್ ಪ್ರವಾಸಕ್ಕೆ ಸಜ್ಜಾಗಿದೆ. ಜ. 6-28ರ ನಡುವಿನ ಅವಧಿಯಲ್ಲಿ ಕಿವೀಸ್ ವಿರುದ್ಧ 5 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಆಡಲಿದೆ.
ಇದಕ್ಕೂ ಮುನ್ನ ಪಾಕಿಸ್ಥಾನ ಪಡೆ 50 ಓವರ್‌ಗಳ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಇಲೆವೆನ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಜ. 3ರಂದು ನೆಲ್ಸನ್‌ನ “ಸ್ಯಾಕ್ಸ್‌ಟನ್ ಓವಲ್’ನಲ್ಲಿ ನಡೆಯಲಿದೆ.
ಪ್ರವಾಸಿ ಪಾಕಿಸ್ಥಾನವನ್ನು ಎದುರಿಸುವುದು ನ್ಯೂಜಿಲ್ಯಾಂಡಿಗೆ ದೊಡ್ಡ ಸವಾಲು ಎಂಬುದಾಗಿ ಕಿವೀಸ್ ಆಯ್ಕೆಗಾರ ಗೆವಿನ್ ಲಾರ್ಸೆನ್ ಅಭಿಪ್ರಾಯಪಟ್ಟಿದ್ದಾರೆ. ಪಾಕಿಸ್ಥಾನ ಐಸಿಸಿ ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡವಾಗಿದ್ದು, ಅತ್ಯಂತ ಬಲಾಡ್ಯವೆನಿಸಿದ ಏಕದಿನ ತಂಡವಾಗಿದೆ ಎಂದು ಲಾರ್ಸೆನ್ ಹೇಳಿದ್ದಾರೆ.
“ಪಾಕಿಸ್ಥಾನದ ವೇಗದ ಬೌಲಿಂಗ್ ವಿಭಾಗ ವಿಶ್ವದಲ್ಲೇ ಅತ್ಯಂತ ಬಲಿಷ್ಠವಾಗಿದೆ. ಹೀಗಾಗಿ ನ್ಯೂಜಿಲ್ಯಾಂಡ್ ಟ್ರ್ಯಾಕ್‌ಗಳಲ್ಲಿ ಅವರು ಹೆಚ್ಚು ಅಪಾಯಕಾರಿಗಳಾಗಿ ಗೋಚರಿಸುವ ಸಾಧ್ಯತೆ ಇದೆ. ತಂಡದಲ್ಲಿ ಸಾಕಷ್ಟು ಮಂದಿ ಮ್ಯಾಚ್ ವಿನ್ನರ್ ಇದ್ದಾರೆ. ಹೀಗಾಗಿ ವಿಶ್ವ ದರ್ಜೆಯ ಪಾಕಿಸ್ಥಾನ ವಿರುದ್ಧದ ಸರಣಿ ನ್ಯೂಜಿಲ್ಯಾಂಡಿಗೆ ದೊಡ್ಡ ಸವಾಲಾಗಲಿದೆ’ ಎಂದು ಲಾರ್ಸೆನ್ ಹೇಳಿದರು.
ಆದರೆ ಪಾಕಿಸ್ಥಾನ ವೇಗಿ ಜುನೇದ್ ಖಾನ್ ಹಾಗೂ ಸ್ಪಿನ್ನರ್ ಇಮಾದ್ ವಾಸಿಮ್ ಸೇವೆಯಿಂದ ವಂಚಿತವಾಗಿದೆ. ಇನ್ನೊಂದೆಡೆ ಶಾದಾಬ್ ಖಾನ್ ಮತ್ತು ಫಾಹೀಮ್ ಅಶ್ರಫ್ ಆಗಮನದಿಂದ ಬಲಿಷ್ಠಗೊಂಡಿದೆ.
ಭಾರತೀಯ ಮೂಲದ ಆಟಗಾರರು
ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಇಲೆವೆನ್ ತಂಡವನ್ನು ಫ್ರೆàಸರ್ ಕಾಲ್ಸನ್ ಮುನ್ನಡೆಸಲಿದ್ದಾರೆ. ಈ ತಂಡದಲ್ಲಿ ಭಾರತೀಯ ಮೂಲದ ಅನಿಕೇತ್ ಪಾರೀಖ್ ಮತ್ತು ಭರತ್ ಪೋಪ್ಲಿ ಕೂಡ ಸ್ಥಾನ ಪಡೆದಿದ್ದಾರೆ.
ನ್ಯೂಜಿಲ್ಯಾಂಡ್ ಇಲೆವೆನ್ ತಂಡ: ಫ್ರೆàಸರ್ ಕಾಲ್ಸನ್ (ನಾಯಕ), ಜೇಮ್ಸ್ ಬೇಕರ್, ಮೈಕಲ್ ಬರ್ರಿ, ಬೆನ್ ಬೀಕ್ರಾಫ್ಟ್, ಮಾರ್ಕ್ ಕ್ರೆಗ್, ಜಾಕ್ ಬಾಯ್ಲ, ಮೈಕಲ್ ಡೇವಿಡ್‌ಸನ್, ಲ್ಯಾಶಿ ಜಾನ್ಸ್, ಮ್ಯಾಟ್ ಮೆಕ್‌ಇವಾನ್, ಅನಿಕೇತ್ ಪಾರೀಖ್, ಭರತ್ ಪೋಪ್ಲಿ, ಮೈಕಲ್ ರೇ.