ಲಾಹೋರ್: ಪಾಕ್ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ, ವೇಗಿ ಶಾಹೀನ್ ಶಾ ಅಫ್ರಿದಿ ಸಹಿತ ಹಿರಿಯ ಆಟಗಾರರಿಗೆ ಶಾರ್ಜಾದಲ್ಲಿ ಮಾ.24ರಿಂದ ಆರಂಭವಾಗುವ ಅಫ್ಘಾನಿಸ್ಥಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ವಿಶ್ರಾಂತಿ ನೀಡಲಾಗಿದೆ.
ಆರಂಭಿಕ ಮುಹಮ್ಮದ್ ರಿಜ್ವಾನ್, ಹ್ಯಾರಿಸ್ ರಾಫ್ ಮತ್ತು ಬ್ಯಾಟ್ಸ್‌ಮನ್ ಫಕಾರ್ ಜಮಾನ್ ಅವರಿಗೂ ಕೂಡ ವಿಶ್ರಾಂತಿ ನೀಡಲಾಗಿದೆ. ಯುವ ತಂಡವನ್ನು ಆಲ್‌ರೌಂಡರ್ ಶಾದಾಬ್ ಖಾನ್ ಮುನ್ನಡೆಸಲಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಯ ರಾಷ್ಟ್ರೀಯ ಆಯ್ಕೆ ಸಮಿತಿ ತಿಳಿಸಿದೆ.
ಹೊಸಮುಖಗಳಾದ ವೇಗಿಗಳಾದ ಇಸಾನುಲ್ಲ, ಜಮಾನ್ ಖಾನ್, ಆಟಗಾರರಾದ ತಯ್ಯಬ್ ತಾಹಿರ್ ಮತ್ತು ಸೈಮ್ ಆಯುಬ್ ಅವರ ಸಹಿತ ಈ ಹಿಂದೆ ಅವಗಣಿಸಲ್ಪಟ್ಟಿದ್ದ ಅಜಮ್ ಖಾನ್, ಫಾಹೀಮ್ ಅಶ್ರಫ್ ಮತ್ತು ಇಮದ್ ವಸೀಮ್ ಅವರನ್ನು ಕೂಡ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.
Related Articles
ಪಾಕಿಸ್ತಾನ ತಂಡ: ಶಾದಾಬ್ ಖಾನ್ (ನಾಯಕ), ಅಬ್ದುಲ್ಲ ಶಫೀಕ್, ಅಜಮ್ ಖಾನ್, ಫಾಹೀಮ್ ಅಶ್ರಫ್, ಇಫ್ತಿಕಾರ್ ಅಹ್ಮದ್, ಇಸಾನುಲ್ಲ, ಇಮದ್ ವಸೀಮ್, ಮುಹಮ್ಮದ್ ಹ್ಯಾರಿಸ್, ಮುಹಮ್ಮದ್ ನವಾಜ್, ಮುಹಮ್ಮದ್ ವಸೀಮ್ ಜೂನಿಯರ್, ನಸೀಮ್ ಶಾ, ಸೈಮ್ ಆಯುಬ್, ಶಾನ್ ಮಸೂದ್, ತಯ್ಯಬ್ ತಾಹಿರ್, ಜಮಾನ್ ಖಾನ್.