Advertisement

ಭಾರತಕ್ಕೆ ಬರುತ್ತಿದ್ದ ಹಿಂದೂಗಳ ತಡೆದ ಪಾಕಿಸ್ತಾನ !

07:49 PM Feb 08, 2023 | Team Udayavani |

ಇಸ್ಲಾಮಾಬಾದ್‌ : ಪಾಕಿಸ್ತಾನದಲ್ಲಿ ಅಲ್ಪಸಸಂಖ್ಯಾತರಾಗಿರುವ ಹಿಂದೂಗಳ ಮೇಲೆ ನಡೆಯುತ್ತಿರುವ ನಿರಂತರ ಕಿರುಕುಳ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಆ ದೇಶ ತೊರೆದು ಭಾರತದತ್ತ ಹೊರಟಿದ್ದ 190 ಹಿಂದೂಗಳ ಕುಟುಂಬ ಸದಸ್ಯರನ್ನು ಪಾಕಿಸ್ತಾನದ ವಲಸೆ ಅಧಿಕಾರಿಗಳು ತಡೆದಿದ್ದಾರೆ.

Advertisement

ಯಾವ ಕಾರಣಕ್ಕಾಗಿ ನೆರೆಯ ದೇಶದತ್ತ ಪ್ರಯಾಣ ನಡೆಸುತ್ತಿದ್ದಾರೆ ಎಂಬ ಬಗ್ಗೆ ಅಧಿಕಾರಿಗಳು ಪ್ರಶ್ನಿಸಿದಾಗ ಅವರು ಸೂಕ್ತ ಉತ್ತರ ನೀಡಲಿಲ್ಲ. ಈ ಕಾರಣಕ್ಕಾಗಿ ಅವರನ್ನು ತಡೆಯಲಾಗಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ.

ಹೆಂಗಸರು ಮಕ್ಕಳು ಸೇರಿದಂತೆ ಸಿಂಧ್‌ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದ ಹಿಂದೂ ಕುಟುಂಬಗಳು ಧಾರ್ಮಿಕ ಯಾತ್ರೆ ವೀಸಾದ ಮೂಲಕ ಭಾರತ ಪ್ರವೇಶಿಸಲು ಪಂಜಾಬ್‌ನ ವಾಘಾ ಗಡಿಗೆ ಧಾವಿಸಿದ್ದಾರೆ. ಈ ವೇಳೆ ಪಾಕ್‌ ವಲಸೆ ಪ್ರಾಧಿಕಾರದ ಅಧಿಕಾರಿಗಳು ಅವರನ್ನು ತಡೆ ಹಿಡಿದಿದ್ದಾರೆ.

ಪಾಕ್‌ನ ಒಟ್ಟು ಜನಸಂಖ್ಯೆಯಲ್ಲಿ ಕೇವಲ ಶೇ.1.18 ರಷ್ಟು ಹಿಂದೂಗಳಿದ್ದು, ಅಲ್ಪಸಂಖ್ಯಾತರಾಗಿರುವ ಹಿಂದೂಗಳನ್ನು ಪಾಕ್‌ ಸರ್ಕಾರ ಅತ್ಯಂತ ನಿಷ್ಕೃಷ್ಟವಾಗಿ ನಡೆಸಿಕೊಳ್ಳುತ್ತಿದೆ. ಈ ಹಿನ್ನೆಲೆ ಧಾರ್ಮಿಕ ವೀಸಾ ಪಡೆದು ಭಾರತಕ್ಕೆ ಆಗಮಿಸುವ ಪಾಕ್‌ನ ಹಿಂದೂಗಳು ಇಲ್ಲಿಯೇ ಉಳಿದುಬಿಟ್ಟಿರುವ ನಿದರ್ಶನಗಳೂ ಇವೆ. ರಾಜಸ್ಥಾನ ಹಾಗೂ ದೆಹಲಿಯ ನಿರಾಶ್ರಿತ ಶಿಬಿರಗಳಲ್ಲಿ ಇಂಥ ಸಾಕಷ್ಟು ಪಾಕ್‌ ಹಿಂದೂಗಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next