Advertisement

Kolkata Police; ಪಾಕ್‌ಗೆ ಮಾಹಿತಿ: ವ್ಯಕ್ತಿ ಬಂಧನ

08:49 PM Aug 26, 2023 | Team Udayavani |

ಕೋಲ್ಕತ್ತಾ: ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ಮಾಡುತ್ತಿದ್ದಾನೆಂದು ಆರೋಪಿಸಲಾಗಿರುವ ಬಿಹಾರದ ನಿವಾಸಿಯನ್ನು ಕೋಲ್ಕತ್ತದಲ್ಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.

Advertisement

ಆತನಿಂದ ಕೆಲ ಸೂಕ್ಷ್ಮದಾಖಲೆಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಆತ ದೇಶದ ಭದ್ರತಾ ಹಿತಾಸಕ್ತಿಗೆ ತೊಡಕಾಗಿರುವ ಕೃತ್ಯಗಳಲ್ಲಿ ನೇರವಾಗಿ ಭಾಗಿಯಾಗಿರುವುದು ತಿಳಿದುಬಂದಿದೆ.

ಆತನ ಫೋನ್‌ನಲ್ಲಿರುವ ವಿಡಿಯೊ, ಫೋಟೋ ಮತ್ತು ಆನ್‌ಲೈನ್‌ ಚಾಟ್‌ಗಳಲ್ಲಿ ಕೆಲ ಸೂಕ್ಷ್ಮ ಮಾಹಿತಿಗಳು ಸಿಕ್ಕಿದ್ದು, ಅವುಗಳನ್ನು ಪಾಕಿಸ್ತಾನ ಮೂಲದ ಗುಪ್ತಚರ ಸಂಸ್ಥೆಗಳಿಂದ ಕಳುಹಿಸಿರುವ ಶಂಕೆ ವ್ಯಕ್ತವಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next