Advertisement

ಐಸಿಸ್‌ ದಾಳಿ ಬಳಿಕ ಅನಿರ್ದಿಷ್ಟಾವಧಿಗೆ ತೋರ್ಖಾಂ ಗಡಿ ಮುಚ್ಚಿದ ಪಾಕ್‌

11:08 AM Feb 17, 2017 | udayavani editorial |

ಇಸ್ಲಾಮಾಬಾದ್‌ : ಅಫ್ಘಾನಿಸ್ಥಾನ ಜತೆಗಿನ ತನ್ನ ಅತ್ಯಂತ ಪ್ರಮುಖ ತೋರ್ಖಾಂ ಗಡಿಯನ್ನು ಪಾಕಿಸ್ಥಾನ ನಿನ್ನೆ ಗುರುವಾರ ತಡರಾತ್ರಿ ಅನಿರ್ದಿಷ್ಟಾವಧಿಗೆ ಮುಚ್ಚಿದೆ. 

Advertisement

ದೇಶದ ದಕ್ಷಿಣ ಭಾಗದಲ್ಲಿನ ಸೆಹವಾನ್‌ ಎಂಬಲ್ಲಿನ ಸೂಫಿ ಪ್ರಾರ್ಥನಾ ಮಂದಿರದ ಮೇಲೆ ನಡೆದ ಉಗ್ರ ಬಾಂಬ್‌ ದಾಳಿಯಲ್ಲಿ ಕನಿಷ್ಠ 70 ಜನರು ಬಲಿಯಾಗಿದ್ದು ಈ ದಾಳಿಯ ಹೊಣೆಗಾರಿಕೆಯನ್ನು ಐಸಿಸ್‌ ಉಗ್ರ ಸಂಘಟನೆ ಹೊತ್ತಿದೆ. ಅಂತೆಯೇ ಈ ಬೆಳವಣಿಗೆಯನ್ನು ಅನುಸರಿಸಿ ಪಾಕಿಸ್ಥಾನ, ಅಫ್ಘಾನ್‌ ಜತೆಗಿನ ತನ್ನ ತೋರ್ಖಾಂ ಗಡಿಯನ್ನು ಭದ್ರತೆಯ ದೃಷ್ಟಿಯಿಂದ ಅನಿರ್ದಿಷ್ಟಾವಧಿಗೆ ಮುಚ್ಚಿದೆ.

ತೋರ್ಖಾಂ ಗಡಿಯು ಅಪಾ^ನಿಸ್ಥಾನದ ನಂಗರ್‌ಹಾರ್‌ ಪ್ರಾಂತ್ಯವನ್ನು ಪಾಕಿಸ್ಥಾನವನ್ನು ಅದರ ಕೇಂದ್ರಾಡಳಿತೆಯ ಬುಡಕಟ್ಟು ಪ್ರಾಂತ್ಯ ಹಾಗೂ ಖೈಬರ್‌ ಫ‌ಕೂ¤ನ್‌ ಖ್ವಾ ಪ್ರಾಂತ್ಯದೊಂದಿಗೆ ಸಂಪರ್ಕಿಸುತ್ತದೆ. ಉಭಯ ದೇಶಗಳ ನಡುವಿನ ಅತ್ಯಂತ ದಟ್ಟನೆಯ ಗಡಿ ಪ್ರವೇಶ ದ್ವಾರ ಇದಾಗಿದೆ. ಅಂತೆಯೇ ಇದು ಉಭಯ ದೇಶಗಳಿಗೆ ನೆಲ, ಜಲ ಸಂಪರ್ಕ ಕಲ್ಪಿಸುವ ಪ್ರಮುಖ ವ್ಯೂಹತ್ಮಾಕ ತಾಣವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next