Advertisement

ಬೂದು ಪಟ್ಟಿಯಿಂದ ಪಾರು ಮಾಡುವಂತೆ ಅಮೆರಿಕಕ್ಕೆ ಗೋಗರೆದ ಪಾಕ್‌

10:17 AM Jan 22, 2020 | Team Udayavani |

ಇಸ್ಲಾಮಾಬಾದ್‌: ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು ನೀಡುತ್ತಿರುವ ಪಾಕಿಸ್ಥಾನ ಪ್ಯಾರಿಸ್‌ ಮೂಲದ ಹಣಕಾಸು ಅಕ್ರಮ ಚಟುವಟಿಕೆಗಳ ತಡೆ ಕಾರ್ಯಪಡೆಯ (ಎಫ್ಎಟಿಎಫ್) ಬೂದು ಪಟ್ಟಿಯಿಂದ ಪಾರು ಮಾಡುವಂತೆ ಅಮೆರಿಕಕ್ಕೆ ಗೋಗರೆದಿದೆ.

Advertisement

ವಿದೇಶಾಂಗ ಸಚಿವ ಖುರೇಷಿ ಪಾಕಿಸ್ಥಾನವನ್ನು ಈ ಸಂಕಟದಿಂದ ಪಾರು ಮಾಡಬೇಕೆಂದು ಒತ್ತಾಯಿಸಿದ್ದಾರೆ. ಕಾರ್ಯಪಡೆಯ ಸಭೆ ಬೀಜಿಂಗ್‌ನಲ್ಲಿ 21ರಂದು ನಡೆಯಲಿದೆ. ಅದರಲ್ಲಿ ಈ ಹಿಂದೆ ಪಾಕ್‌ಗೆ ನೀಡಲಾಗಿದ್ದ ಷರತ್ತುಗಳ ಪೈಕಿ ಎಷ್ಟು ಪಾಲನೆಯಾಗಿದೆ ಎಂಬುದನ್ನು ಪರಿಶೀಲಿಸಿ, ಪಾಕ್‌ ನಿಲುವಿನಲ್ಲಿ ಬದಲಾಗದಿದ್ದರೆ ಅದನ್ನು ನಿಷೇಧಿತ ರಾಷ್ಟ್ರಗಳ ಪಟ್ಟಿಗೆ ಸೇರಿಸಲಾಗುತ್ತದೆ.

ಕ್ರಮ ಕೈಗೊಳ್ಳಿ: ಉಗ್ರ ಸಂಘಟನೆಗಳ ವಿರುದ್ಧ ಪಾಕಿಸ್ಥಾನ ಮತ್ತಷ್ಟು ಕಠಿನ ಕ್ರಮ ಕೈಗೊಳ್ಳಬೇಕೆಂದು ಅಮೆರಿಕ ಸಲಹೆ ಮಾಡಿದೆ. ದಕ್ಷಿಣ ಏಷ್ಯಾಕ್ಕಾಗಿನ ಅಮೆರಿಕದ ವಿದೇಶಾಂಗ ಸಚಿವೆ ಅಲಿಸ್‌ ವೆಲ್ಸ್‌ ಪಾಕ್‌ ಪ್ರವಾಸದಲ್ಲಿದ್ದು, ಪ್ರಾದೇಶಿಕ ಅಸಮತೋಲನಕ್ಕೆ ಕಾರಣವಾಗಿರುವ ಉಗ್ರರು ಮತ್ತು ಉಗ್ರ ಸಂಘಟನೆಗಳ ವಿರುದ್ಧ ಕಠಿನ ಕ್ರಮ ಕೈಗೊಂಡು ಅವುಗಳನ್ನು ನಿರ್ಮೂಲನೆಗೊಳಿಸಬೇಕು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next