Advertisement

ಮಿಡತೆ ದಾಳಿ ಎದುರಿಸಲು ಕೈಜೋಡಿಸಿದ ಭಾರತ –ಪಾಕ್‌!

08:20 PM Jun 05, 2020 | Hari Prasad |

ಇಸ್ಲಾಮಾಬಾದ್‌: ಒಬ್ಬರನ್ನೊಬ್ಬರು ಕಂಡರಾಗದಷ್ಟು ದ್ವೇಷಿಸುತ್ತಿರುವ ಭಾರತ ಮತ್ತು ಪಾಕಿಸ್ಥಾನ ಈಗ ಒಂದು ವಿಚಾರದಲ್ಲಿ ಶತ್ರುತ್ವ ಮರೆತು ಕೈಜೋಡಿಸಲು ಮುಂದಾಗಿವೆಯಂತೆ! ಇದನ್ನು ಪಾಕಿಸ್ತಾನದ ಪತ್ರಿಕೆ ‘ಡಾನ್‌’ ವರದಿ ಮಾಡಿದೆ.

Advertisement

ಇತ್ತೀಚೆಗೆ ಭಾರೀ ಪ್ರಮಾಣದಲ್ಲಿ ಭಾರತ ಮತ್ತು ಪಾಕ್‌ ಮಿಡತೆ ಹಾವಳಿಗೆ ತುತ್ತಾಗಿದ್ದವು. ಸಂಪೂರ್ಣ ಬೆಳೆಗಳನ್ನು ಕಳೆದುಕೊಳ್ಳುವ ಭೀತಿ ಎದುರಿಸಿದ್ದವು. ಈ ಹಿನ್ನೆಲೆಯಲ್ಲಿ ಆಹಾರ ಮತ್ತು ಕೃಷಿ ಸಂಸ್ಥೆಯ (ಎಫ್ಎಒ) ಅಡಿಯಲ್ಲಿ ಸ್ಥಾಪಿತವಾದ ವೇದಿಕೆಯಲ್ಲಿ ಮಿಡತೆಗಳ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಎರಡೂ ದೇಶಗಳು ಸಮ್ಮತಿಸಿವೆ ಎಂದು ವರದಿ ಹೇಳಿದೆ.

ಈ ವೇದಿಕೆಯಲ್ಲಿ ಭಾರತ, ಪಾಕಿಸ್ಥಾನ, ಇರಾನ್‌, ಆಫ್ಘಾನಿಸ್ಥಾನಗಳು ಸದಸ್ಯ ರಾಷ್ಟ್ರಗಳಾಗಿವೆ. ಮಿಡತೆಗಳ ಕುರಿತ ಮಾಹಿತಿಗಳನ್ನು ಹಂಚಿಕೊಳ್ಳುವುದು ಸೇರಿದಂತೆ ಅವುಗಳ ನಿಯಂತ್ರಣಕ್ಕೆ ಮಾಡಬಹುದಾದ ಕೆಲಸಗಳ ಕುರಿತು ನಾವು ಮಾಹಿತಿಯನ್ನು ಭಾರತವೂ ಸೇರಿದಂತೆ ಸದಸ್ಯ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳಲಿದ್ದೇವೆ ಎಂದು ಪಾಕಿಸ್ಥಾನದ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ.

ಈ ಮರುಭೂಮಿಯ ಮಿಡತೆಗಳು, ಸಸ್ಯ, ಮರಗಳ ಎಲೆಗಳು, ಹೂವುಗಳು, ಹಣ್ಣುಗಳು, ಬೀಜಗಳು, ಬೆಳೆಗಳನ್ನು ತಿನ್ನುತ್ತವೆ. ಇವುಗಳ ಸಮೂಹದಲ್ಲಿ ಕೋಟ್ಯಂತರ ಮಿಡತೆಗಳಿದ್ದು, ಒಂದು ಬಾರಿ ದಾಳಿ ಮಾಡಿದರೆ 10 ಆನೆಗಳು, 25 ಒಂಟೆಗಳು ಅಥವಾ 2500 ಮಂದಿ ದಿನ್ನುವಷ್ಟು ಆಹಾರವನ್ನು ಕಬಳಿಸುತ್ತವೆ. ಇವುಗಳಿಂದಾಗುವ ಕೃಷಿ ಹಾನಿ ಯಾವುದೇ ಅಂದಾಜುಗಳನ್ನು ಮೀರಿದ್ದು ಎಂದು ಪಾಕ್‌ನ ತಜ್ಞರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next