Advertisement
ರಾಮದುರ್ಗನ ಕಾಂಗ್ರೆಸ್ ಮುಖಂಡ ಮಹ್ಮದ ಶಫಿ ಬೆಣ್ಣಿ ಫೇಸ್‌ಬುಕ್ ಅಕೌಂಟಿನಿಂದ ಪಾಕಿಸ್ತಾನ ಜೈ ಎಂಬ ಪೋಸ್ಟ್ ಹಾಕಿದ್ದ ಈತನ ಗೆಳೆಯ ರಾಯಬಾಗ ತಾಲೂಕಿನ ಕಂಕಣವಾಡಿಯ ನಾಗರಾಜ ಮಾಳಿಯನ್ನು ಪೊಲೀಸರು ಬಂಧಿಸಿದ್ದಾರೆ.
Related Articles
Advertisement
ಎರಡು ದಿನಗಳ ಹಿಂದೆ ರಾಮದುರ್ಗದಲ್ಲಿ ಶಫಿ ಬೆಣ್ಣಿ ಅವರ ಫೇಸ್ ಬುಕ್ ಅಕೌಂಟ್‌ನಿಂದ ಜೈ ಪಾಕಿಸ್ತಾನ್, ಜೈ ಅಶೋಕ ಅಣ್ಣಾ ಎಂಬ ಪೋಸ್ಟ್ ಹಾಕಲಾಗಿತ್ತು. ಇದು ರಾಮದುರ್ಗ ಸೇರಿದಂತೆ ಜಿಲ್ಲಾದ್ಯಂತ ಕೋಲಾಹಲಕ್ಕೆ ಕಾರಣವಾಗಿತ್ತು. ರಾಮದುರ್ಗ ಠಾಣೆಗೆ ಮುತ್ತಿಗೆ, ಕಲ್ಲು ತೂರಾಟ, ಶಾಸಕ ಮಹಾದೇವಪ್ಪ ಯಾದವಾಡ ನೇತೃತ್ವಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಜತೆಗೆ ಸಂಸದ ಸುರೇಶ ಅಂಗಡಿ ಆರೋಪಿಯನ್ನು ಬಂಧಿಸುವಂತೆ ಎಸ್‌ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು.
ಕೇಳಿದ್ದು ಎರಡು ದಿನ; ಪತ್ತೆ ಹಚ್ಚಿದ್ದು 12 ಗಂಟೆಯಲ್ಲಿ! ವಿವಾದಾತ್ಮಕ ಪೋಸ್ಟ್ ಹಾಕಿದ್ದ ಆರೋಪಿಯನ್ನು ಬಂಧಿಸುವಂತೆ ಪಟ್ಟು ಹಿಡಿದು ಎಸ್‌ಪಿ ಕಚೇರಿ ಎದುರು ಸಂಸದ ಸುರೇಶ ಅಂಗಡಿ ಧರಣಿ ನಡೆಸಿದ್ದರು. ಒಂದೇ ತಾಸಿನಲ್ಲಿ ಬಂಧಿಸಬೇಕು, ಇಲ್ಲದಿದ್ದರೆ ವರ್ಗಾವಣೆ ಆಗಿ ಎಂದು ಎಸ್‌ಪಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ್ದ ಎಸ್‌ಪಿ ಸುಧೀರ ಕುಮಾರ ರೆಡ್ಡಿ ಅವರು, ಎರಡು ದಿನ ಕಾಲಾವಕಾಶ ಕೇಳಿದ್ದರು. ಆದರೆ 12 ಗಂಟೆಯಲ್ಲಿಯೇ ಮೂಲ ಆರೋಪಿಯನ್ನು ಬಂಧಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ದೂರು ಬಂದ ಕೂಡಲೇ ಮಹ್ಮದ ಶಫಿಯನ್ನು ಬಂಧಿಸದೇ ವಿಚಾರಣೆಗೆ ಒಳಪಡಿಸಿ ವಿವರ ಪಡೆದು ಸೈಬರ್ ಕ್ರೈಂ ಸಹಾಯದಿಂದ ಆರೋಪಿಯನ್ನು ಪತ್ತೆ ಹಚ್ಚುವ ಮೂಲಕ ಎಸ್‌ಪಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಾಮದುರ್ಗ ಪ್ರಕರಣದಲ್ಲಿ ಮಹ್ಮದ ಶಫಿ ತಪ್ಪು ಮಾಡಿಲ್ಲ ಎಂಬ ಸಂಶಯ ಬಂದಿದ್ದರಿಂದ ಸೈಬರ್ ಕ್ರೈಂ ಮೊರೆ ಹೋಗಿ ನಿಷ್ಪಕ್ಷಪಾತ ತನಿಖೆ ನಡೆಸಲಾಯಿತು. ಫೇಸ್‌ಬುಕ್ ಅಕೌಂಟ್ ನಾಲ್ಕು ಡಿವೈಸ್‌ನಲ್ಲಿ ಬಳಸಿರುವುದು ಗೊತ್ತಾಯಿತು. ಮೊದಲು ಮೂರು ಡಿವೈಸ್‌ಗಳ ಮಾಹಿತಿ ಪಡೆದ ಬಳಿಕ ನಾಲ್ಕನೇಯ ಡಿವೈಸ್ ಮೂಲಕ ಪೋಸ್ಟ್ ಆಗಿರುವುದು ಸಾಬೀತಾಗಿರುವುದು ಸಾಕ್ಷ್ಯಾ ಸಿಕ್ಕಿದೆ. ಆರೋಪಿಯನ್ನು ಬಂಧಿಸಿ, ಮೊಬೈಲ್ ವಶಪಡಿಸಿಕೊಂಡಿದ್ದೇವೆ.
ಸುಧೀರ ಕುಮಾರ ರೆಡ್ಡಿ, ಎಸ್‌ಪಿ