ಹೊಸದಿಲ್ಲಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪ್ರಸ್ತಾಪಿಸಿದ ಹೈಬ್ರಿಡ್ ಮಾಡೆಲ್ ಒಪ್ಪಲು ಎಸಿಸಿ (ಏಷ್ಯನ್ ಕ್ರಿಕೆಟ್ ಕಮಿಟಿ) ನಿರಾಕರಿಸಿದ ಕಾರಣಕ್ಕೆ ಏಷ್ಯಾ ಕಪ್ ನಲ್ಲಿ ಆಡದೇ ಇರಲು ಪಾಕಿಸ್ತಾನ ಮುಂದಾಗಿದೆ.
ಭಾರತದ ಜತೆ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳು ಹೈಬ್ರಿಡ್ ಮಾಡೆಲ್ ಗೆ ಒಪ್ಪಿಗೆ ನೀಡಿಲ್ಲ. ಹೀಗಾಗಿ ಏಷ್ಯಾಕಪ್ ಕೂಟ ಆತಿಥ್ಯ ಪಾಕಿಸ್ಥಾನದಿಂದ ಹೊರಹೋಗುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಪಾಕಿಸ್ಥಾನ ಕೂಟದಲ್ಲಿ ಆಡದಿರಲು ನಿರ್ಧರಿಸಿದೆ ಎಂದು ವರದಿಯಾಗಿದೆ.
ಭಾರತವು ಭದ್ರತಾ ಕಾರಣಗಳಿಂದ ಪಾಕಿಸ್ಥಾನಕ್ಕೆ ತೆರಳದಿರಲು ನಿರ್ಧರಿಸಿದ ಕಾರಣ ಪಾಕ್ ಈ ಹೈಬ್ರಿಡ್ ಮಾದರಿಯನ್ನು ಪ್ರಸ್ತಾಪಿಸಿತ್ತು. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ನಜಮ್ ಸೇಥಿ ಪ್ರಸ್ತಾಪಿಸಿದ ‘ಹೈಬ್ರಿಡ್ ಮಾದರಿ’ ಪ್ರಕಾರ, ಭಾರತದ ಪಂದ್ಯಗಳು ದುಬೈನಲ್ಲಿ ನಡೆಸುವುದು ಉಳಿದ ದೇಶದ ಪಂದ್ಯಗಳನ್ನು ಪಾಕ್ ನಲ್ಲಿ ಆಡುವ ಯೋಜನೆಯನ್ನು ರೂಪಿಸಿತ್ತು. ಆದರೆ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನವು ಪಾಕಿಸ್ತಾನದಿಂದ ಟೂರ್ನಿಯನ್ನು ಸ್ಥಳಾಂತರಿಸುವ ಬಿಸಿಸಿಐನ ಒತ್ತಡವನ್ನು ಬೆಂಬಲಿಸಿದೆ ಎಂಬುದು ಈಗ ಸ್ಪಷ್ಟವಾಗಿದೆ.
ಇದನ್ನೂ ಓದಿ:ಮೊದಲ ಮಗುವಿನ ನಿರೀಕ್ಷೆಯಲ್ಲಿ ಫಹಾದ್ – ಸ್ವರಾ ಭಾಸ್ಕರ್ ದಂಪತಿ: Baby Bump ಫೋಟೋ ವೈರಲ್
Related Articles
ಸೇಥಿ ಅವರು ಈಗಾಗಲೇ ತಮ್ಮ ಕ್ರಿಕೆಟ್ ನಿರ್ವಹಣಾ ಸಮಿತಿ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದಾರೆ. ತವರಿನಲ್ಲಿ ಏಷ್ಯಾ ಕಪ್ ನ ಯಾವುದೇ ಪಂದ್ಯಗಳನ್ನು ಆಯೋಜಿಸದಿದ್ದರೆ ಪಾಕಿಸ್ತಾನದ ನಿಲುವಿನ ಬಗ್ಗೆ ಚರ್ಚಿಸಲು ಸಂಬಂಧಿತ ಸರ್ಕಾರಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
“ಪಾಕಿಸ್ತಾನಕ್ಕೆ ಕೇವಲ ಎರಡು ಆಯ್ಕೆಗಳಿವೆ. ಪಂದ್ಯಾವಳಿಯನ್ನು ತಟಸ್ಥ ಸ್ಥಳದಲ್ಲಿ ಆಡಬೇಕು ಅಥವಾ ಹಿಂದೆ ಸರಿಯಬೇಕು” ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮೂಲಗಳು ತಿಳಿಸಿವೆ.
ಪಾಕಿಸ್ತಾನ ಆಡದಿದ್ರೂ ಆ ಕೂಟವನ್ನು ಏಷ್ಯಾ ಕಪ್ ಎಂದು ಕರೆಯಲಾಗುತ್ತದೆ ಆದರೆ ಪಾಕಿಸ್ತಾನದ ಅನುಪಸ್ಥಿತಿಯಲ್ಲಿ ಪ್ರಸಾರಕರು ಒಪ್ಪಂದವನ್ನು ಮರು ಮಾತುಕತೆ ನಡೆಸುತ್ತಾರೆ. ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಭಾರತವು ತನ್ನ ನಿಲುವು ಪ್ರಕಟಿಸಿದ್ದು, ಏಷ್ಯಾ ಕಪ್ ಅನ್ನು ಪಾಕಿಸ್ತಾನ ಮತ್ತು ಇತರ ಕೆಲವು ರಾಷ್ಟ್ರಗಳಲ್ಲಿ ಆಯೋಜಿಸುವುದು ಆರ್ಥಿಕವಾಗಿ ಕಾರ್ಯ ಸಾಧ್ಯವಲ್ಲ. ಭಾರತವು ಪಾಕಿಸ್ಥಾನಕ್ಕೆ ಪ್ರಯಾಣಿಸಲು ಸಾಧ್ಯವಾಗದ ಕಾರಣ ಅದನ್ನು ಒಂದು ದೇಶದಲ್ಲಿ ಅಂದರೆ ಶ್ರೀಲಂಕಾದಲ್ಲಿ ನಡೆಸಬೇಕು ಎಂಬ ನಿಲುವನ್ನು ತೆಗೆದುಕೊಂಡಿದೆ ಎಂದು ವರದಿಯಾಗಿದೆ.
ಅಲ್ಲದೆ ಈ ವರ್ಷ ಏಷ್ಯಾ ಕಪ್ ಅನ್ನು ಸಂಪೂರ್ಣವಾಗಿ ರದ್ದುಪಡಿಸುವ ಸಾಧ್ಯತೆಯೂ ಇದೆ. ಭಾರತ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನವು ವಿಶ್ವಕಪ್ ಗೆ ಮೊದಲು 50-ಓವರ್ ಗಳ ಸ್ವರೂಪದಲ್ಲಿ ಬಹು-ತಂಡದ ಕೂಟ ನಡೆಸಬಹುದು ಎನ್ನಲಾಗಿದೆ.