Advertisement

Perth Test : ಪಾಕಿಸ್ಥಾನದ ಬ್ಯಾಟಿಂಗ್‌ ಹೋರಾಟದ ಸೂಚನೆ

11:39 PM Dec 15, 2023 | Team Udayavani |

ಪರ್ತ್‌: ಪರ್ತ್‌ ಟೆಸ್ಟ್‌ ಪಂದ್ಯದಲ್ಲಿ ಪಾಕಿಸ್ಥಾನದ ಬ್ಯಾಟಿಂಗ್‌ ಹೋರಾಟದ ಸೂಚನೆಯೊಂದು ಲಭಿಸಿದೆ. ಆಸ್ಟ್ರೇಲಿಯದ 487 ರನ್ನುಗಳ ಬೃಹತ್‌ ಮೊತ್ತಕ್ಕೆ ಜವಾಬು ನೀಡಲಾರಂಭಿಸಿರುವ ಪಾಕ್‌, ದ್ವಿತೀಯ ದಿನದಾಟದ ಅಂತ್ಯಕ್ಕೆ 2 ವಿಕೆಟಿಗೆ 132 ರನ್‌ ಗಳಿಸಿದೆ.

Advertisement

ಇಮಾಮ್‌ ಉಲ್‌ ಹಕ್‌ 38 ಮತ್ತು ಪದಾರ್ಪಣ ಟೆಸ್ಟ್‌ ಆಡುತ್ತಿರುವ, ನೈಟ್‌ ವಾಚ್‌ಮನ್‌ ಖುರ್ರಂ ಶಾಜಾದ್‌ 7 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಅಬ್ದುಲ್ಲ ಶಫೀಕ್‌ (42) ಮತ್ತು ಮೊದಲ ಸಲ ಪಾಕ್‌ ತಂಡವನ್ನು ಮುನ್ನಡೆಸುತ್ತಿರುವ ಶಾನ್‌ ಮಸೂದ್‌ (30) ಪೆವಿಲಿಯನ್‌ ಸೇರಿಕೊಂಡಿದ್ದಾರೆ.

ಆಸ್ಟ್ರೇಲಿಯ 5ಕ್ಕೆ 346 ರನ್‌ ಗಳಿಸಿದಲ್ಲಿಂದ ಶುಕ್ರವಾರದ ಆಟ ಮುಂದುವರಿಸಿತ್ತು. 15 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ಮಿಚೆಲ್‌ ಮಾರ್ಷ್‌ ಅಮೋಘ ಆಟವಾಡಿದರು. ಆದರೆ ಶತಕದಿಂದ ಸ್ವಲ್ಪವೇ ದೂರ ಉಳಿದರು. ಮಾರ್ಷ್‌ ಗಳಿಕೆ 90 ರನ್‌. 107 ಎಸೆತ ಎದುರಿಸಿದ ಮಾರ್ಷ್‌ 15 ಬೌಂಡರಿ ಹಾಗೂ ಒಂದು ಸಿಕ್ಸರ್‌ ಬಾರಿಸಿದರು. ಅಲೆಕ್ಸ್‌ ಕ್ಯಾರಿ 34 ರನ್‌ ಹೊಡೆದರು. ಪಾಕ್‌ ಮಧ್ಯಮ ವೇಗಿ ಆಮೀರ್‌ ಜಮಾಲ್‌ ಮೊದಲ ಟೆಸ್ಟ್‌ನಲ್ಲೇ ಬೌಲಿಂಗ್‌ ಕಮಾಲ್‌ ನಡೆಸಿ 6 ವಿಕೆಟ್‌ ಉರುಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next