Advertisement

ಏಷ್ಯಾದಲ್ಲಿ ಪಾಕಿಸ್ತಾನ ಆರ್ಥಿಕತೆ ದುರ್ಬಲ: ವಿಶ್ವಬ್ಯಾಂಕ್‌

08:23 PM Jan 18, 2023 | Team Udayavani |

ವಾಷಿಂಗ್ಟನ್‌:ದಕ್ಷಿಣ ಏಷ್ಯಾದಲ್ಲಿ ಪಾಕಿಸ್ತಾನವೇ ಅತ್ಯಂತ ದುರ್ಬಲ ಅರ್ಥ ವ್ಯವಸ್ಥೆ ಎಂದು ವಿಶ್ವಬ್ಯಾಂಕ್‌ನ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Advertisement

ಪ್ರಸಕ್ತ ವರ್ಷದಲ್ಲಿ ಆ ದೇಶದ ಜಿಡಿಪಿ ಬೆಳವಣಿಗೆ ದರ ಮತ್ತಷ್ಟು ನಿಧಾನಗತಿಯಲ್ಲಿ ಸಾಗಲಿದ್ದು, ಕೇವಲ ಶೇ.2ರ ದರದಲ್ಲಿ ಬೆಳವಣಿಗೆ ಸಾಧಿಸಲಿದೆ. ಆದರೆ, ಭಾರತ, ಮಾಲ್ಡೀವ್ಸ್‌ ಮತ್ತು ನೇಪಾಳದ ಅರ್ಥ ವ್ಯವಸ್ಥೆಗಳಲ್ಲಿ ಬೆಳವಣಿಗೆಗೆ ಸಾಕಷ್ಟು ಅವಕಾಶಗಳು ಇವೆ ಎಂದು ಅಭಿಪ್ರಾಯಪಡಲಾಗಿದೆ.

ಪಾಕಿಸ್ತಾನದಲ್ಲಿ ಉಂಟಾದ ಪ್ರವಾಹ ಮತ್ತು ರಾಜಕೀಯ ಬೆಳವಣಿಗೆಗಳು ಸಂಕಷ್ಟ ತಂದೊಡ್ಡಿವೆ ಎಂದು ವಿಶ್ವಬ್ಯಾಂಕ್‌ ಹೇಳಿಕೊಂಡಿದೆ.

ಇನ್ನೊಂದೆಡೆ, ಪಾಕಿಸ್ತಾನ ಸರ್ಕಾರ ಶೀಘ್ರವೇ ನ್ಯಾಟೋ ಹೊರತಾಗಿರುವ ರಾಷ್ಟ್ರಗಳ ಸ್ಥಾನಮಾನ ಕಳೆದುಕೊಳ್ಳಲಿದೆ. ಈ ಉದ್ದೇಶಕ್ಕಾಗಿ ಅಮೆರಿಕ ಸಂಸತ್‌ನ ಕೆಳಮನೆ ಹೌಸ್‌ ಆಫ್ ರೆಪ್ರಸೆಂಟೇಟಿವ್ಸ್‌ನಲ್ಲಿ ಸಂಸದ ಆ್ಯಂಡಿ ಬಿಗ್ಸ್‌ ಮಸೂದೆಯೊಂದನ್ನು ಮಂಡಿಸಿದ್ದಾರೆ. ಅದು ಸಂಸತ್‌ನ ಕೆಳಮನೆ ಹಾಗೂ ಮೇಲ್ಮನೆ, ಸೆನೆಟ್‌ನಲ್ಲಿ ಅನುಮೋದನೆಗೊಳ್ಳಬೇಕು. ಒಂದು ವೇಳೆ ಅದಕ್ಕೆ ಅಂಗೀಕಾರ ಸಿಕ್ಕಿದರೆ, ನ್ಯಾಟೋ ಹೊರತಾಗಿರುವ ರಾಷ್ಟ್ರದ ಸ್ಥಾನಮಾನ ಕಳೆದುಕೊಳ್ಳುತ್ತದೆ.

ಖೈಬರ್‌ ಪಖ್ತುಂಖ್ವಾ ಅಸೆಂಬ್ಲಿ ವಿಸರ್ಜನೆ:
ಶೀಘ್ರದಲ್ಲಿಯೇ ಸಂಸತ್‌ ಚುನಾವಣೆ ನಡೆಯಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರು, ತಮ್ಮ ಪಕ್ಷ ಪಾಕಿಸ್ತಾನ ತೆಹ್ರೀಕ್‌-ಇ-ಇನ್ಸಾಫ್ ಆಡಳಿತದಲ್ಲಿರುವ ಖೈಬರ್‌ ಪಖು¤ಂಖ್ವಾ ಪ್ರಾಂತ್ಯದ ಸರ್ಕಾರವನ್ನು ವಿಸರ್ಜಿಸಿದೆ. ಪಾಂತ್ಯದ ರಾಜ್ಯಪಾಲರು ಸರ್ಕಾರದ ಈ ನಿರ್ಧಾರ ಅಂಗೀಕರಿಸಿರುವುದಾಗಿ ತಿಳಿಸಿದ್ದಾರೆ. ಪಾಕಿಸ್ತಾನದಲ್ಲಿ ಸಂಸತ್‌ ಚುನಾವಣೆ ಅಕ್ಟೋಬರ್‌ನಲ್ಲಿ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next