ಇಸ್ಲಾಮಾಬಾದ್ : ಉಗ್ರರಿಗೆ ಹಣಕಾಸು ನೆರವು ಆರೋಪದಲ್ಲಿ 26/11ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಸ್ಥಾಪಿಸಿರುವ ನಿಷೇಧಿತ ಉಗ್ರ ಸಂಘಟನೆ ಜಮಾತ್-ಉದ್-ದಾವಾದ 6 ಉಗ್ರರನ್ನು ಪಾಕಿಸ್ತಾನದ ನ್ಯಾಯಾಲಯವು ಶನಿವಾರ ಖುಲಾಸೆಗೊಳಿಸಿದೆ.
ಈ 6 ಮಂದಿ ಉಗ್ರರನ್ನು ದೋಷಿಗಳೆಂದು ಘೋಷಿಸಿ ವಿಚಾರಣಾ ನ್ಯಾಯಾಲಯವು ನೀಡಿದ್ದ ಆದೇಶವನ್ನು ವಜಾ ಮಾಡಿದ ಲಾಹೋರ್ ಹೈಕೋರ್ಟ್, ಎಲ್ಲ ಆರೋಪಿಗಳನ್ನೂ ದೋಷಮುಕ್ತಗೊಳಿಸಿದೆ.
ಏಪ್ರಿಲ್ ತಿಂಗಳಲ್ಲಿ ಲಾಹೋರ್‌ನ ಉಗ್ರ ನಿಗ್ರಹ ಕೋರ್ಟ್, ಜೆಯುಡಿ ಉಗ್ರರಾದ ಮಲಿಕ್ ಝಫಾರ್ ಇಕ್ಬಾಲ್, ಯಾಹ್ಯಾ ಮುಜಾಹಿದ್, ನಸಾರುಲ್ಲಾ, ಸಮೀವುಲ್ಲಾ, ಉಮರ್ ಬಹಾದೂರ್ ಎಂಬ ಐವರಿಗೆ ತಲಾ 9 ವರ್ಷಗಳ ಜೈಲು ಶಿಕ್ಷೆ, ಹಫೀಜ್‌ನ ಸಂಬಂಧಿ ಹಫೀಜ್ ಅಬ್ದುಲ್ ರೆಹಮಾನ್ ಮಕ್ಕಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
ಬೇರೆ ಬೇರೆ ಮೂಲಗಳಿಂದ ಹಣಕಾಸು ಸಂಗ್ರಹಿಸಿ, ಅದನ್ನು ಲಷ್ಕರ್ ಖಾತೆಗೆ ವರ್ಗಾಯಿಸಿ, ಕಾನೂನುಬಾಹಿರವಾಗಿ ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು ನೀಡುತ್ತಿದ್ದ ಆರೋಪ ಇವರ ಮೇಲೆ ಹೊರಿಸಲಾಗಿತ್ತು.
ಇದನ್ನೂ ಓದಿ : ಯೋಜನೆ ಜಾರಿಗೆ ಒತ್ತಾಯಿಸಿ ‘ಮೇಕೆದಾಟು’ವಿನಿಂದ ಬೆಂಗಳೂರಿಗೆ ಕಾಂಗ್ರೆಸ್ ಪಾದಯಾತ್ರೆ