ಇಸ್ಲಾಮಾಬಾದ್: ಆರ್ಥಿಕ ದುಸ್ಥಿತಿಯಿಂದ ಕಂಗೆಟ್ಟಿರುವ ಪಾಕಿಸ್ತಾನ ತನ್ನ ನಾಗರಿಕರಿಗೆ ಗಾಯದ ಮೇಲೆ ಬರೆ ಎಳೆದಂತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 35 ಪಾಕಿಸ್ತಾನ ರೂಪಾಯಿ ಏರಿಕೆ ಮಾಡಿದೆ.
ಇನ್ನೊಂದೆಡೆ, ಸೀಮೆ ಎಣ್ಣೆ ಮತ್ತು ಲೈಟ್ ಡೀಸೆಲ್ ಆಯಿಲ್ ಬೆಲೆಯನ್ನು ಲೀಟರ್‌ಗೆ 18 ಪಾಕಿಸ್ತಾನ ರೂಪಾಯಿ ಏರಿಸಲಾಗಿದೆ.
ಬೆಲೆ ಏರಿಕೆ ನಂತರ, ಪ್ರತಿ ಲೀಟರ್‌ಗೆ ಪೆಟ್ರೋಲ್ 249.80, ಹೈ ಸ್ಪೀಡ್ ಡೀಸೆಲ್ 262.80, ಸೀಮೆ ಎಣ್ಣೆ 189.83 ಮತ್ತು ಲೈಟ್ ಡೀಸೆಲ್ ಆಯಿಲ್ 187 ಪಾಕಿಸ್ತಾನ ರೂಪಾಯಿ ಆಗಲಿದೆ. ಭಾರತದ ರೂಪಾಯಿಗೆ ಹೋಲಿಸಿದರೆ ಪೆಟ್ರೋಲ್ 81.25 ರೂ. ಹಾಗೂ ಹೈಸ್ಪೀಡ್ ಡೀಸೆಲ್ 85.48 ರೂ. ಆಗಲಿದೆ.
ಸೋಮವಾರದಿಂದ ತೈಲ ಬೆಲೆಗಳು ಏರಿಕೆಯಾಗುವುದನ್ನು ತಿಳಿದ ಪಾಕ್ ನಾಗರಿಕರು ಭಾನುವಾರವೇ ತಮ್ಮ ವಾಹನಗಳು ಮತ್ತು ಕ್ಯಾನ್‌ಗಳಲ್ಲಿ ಪೆಟ್ರೋಲ್, ಡೀಸೆಲ್ ತುಂಬಿಸಿಕೊಳ್ಳಲು ಆರಂಭಿಸಿದ್ದಾರೆ. ಇದರಿಂದ ಪೆಟ್ರೋಲ್ ಬಂಕ್‌ಗಳಲ್ಲಿ ಮೀಟರ್‌ಗಟ್ಟಲೇ ಸರದಿ ಸಾಲು ಏರ್ಪಟ್ಟಿದೆ.