Advertisement

ಪಾಕ್‌ ಸುಪ್ರೀಂಕೋರ್ಟ್‌ಗೆ ಮೊದಲ ಮಹಿಳಾ ಜಡ್ಜ್

10:30 PM Jan 07, 2022 | Team Udayavani |

ಇಸ್ಲಾಮಾಬಾದ್‌: ಪಾಕಿಸ್ತಾನದ ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಯಾಗಿ ಲಾಹೋರ್‌ ಹೈಕೋರ್ಟ್‌ನ ನ್ಯಾಯಮೂರ್ತಿ ಆಯೆಷಾ ಮಲಿಕ್‌ ಅವರನ್ನು ಪಾಕಿಸ್ತಾನ ನ್ಯಾಯಾಂಗ ಆಯೋಗ(ಜೆಸಿಪಿ) ಆಯ್ಕೆ ಮಾಡಿದೆ.

Advertisement

ನ್ಯಾ.ಆಯೆಷಾ ಪಾಕ್‌ ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ನ್ಯಾಯಮೂರ್ತಿಯಾಗಲಿದ್ದಾರೆ.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಸ್ಥಾನಕ್ಕಾಗಿ ಜೆಸಿಪಿ ಗುರುವಾರ ಚುನಾವಣೆ ನಡೆಸಿದೆ. ಅದರಲ್ಲಿ ನ್ಯಾ.ಆಯೆಷಾ ಬಹುಮತ ಪಡೆದಿದ್ದಾರೆ.

ಈ ಹಿಂದೆ ಕಳೆದ ಸೆಪ್ಟೆಂಬರ್‌ನಲ್ಲೂ ಒಮ್ಮೆ ಚುನಾವಣೆ ನಡೆಸಲಾಗಿತ್ತು. ಆದರೆ ಆಗ ಇಬ್ಬರು ನ್ಯಾಯಮೂರ್ತಿಗಳಿಗೆ ಸಮಾನ ಮತ ಸಿಕ್ಕಿದ್ದರಿಂದ ಆ ಚುನಾವಣೆಯನ್ನು ಪರಿಗಣಿಸಲಾಗಿರಲಿಲ್ಲ.

ಈ ಆಯ್ಕೆಗೆ ಪಾಕಿಸ್ತಾನದ ಸಂಸತ್‌ ಅನುಮೋದನೆ ನೀಡಿದ ಬಳಿಕ ಅದು ಊರ್ಜಿತಗೊಳ್ಳಲಿದೆ.

Advertisement

ಇದನ್ನೂ ಓದಿ:ಸರ್ಕಾರಿ ಶಾಲೆಯ 21ವಿದ್ಯಾರ್ಥಿಗಳು, ಓರ್ವ ಶಿಕ್ಷಕರಲ್ಲಿ ಕೋವಿಡ್ ದೃಢ : ಶಾಲೆಗೆ 7 ದಿನ ರಜೆ

 

Advertisement

Udayavani is now on Telegram. Click here to join our channel and stay updated with the latest news.

Next