ಇಸ್ಲಾಮಾಬಾದ್: ಪಾಕಿಸ್ಥಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗಿಂತಲೂ ಅವರ ಪತ್ನಿಯರೇ ಹೆಚ್ಚು ಸಿರಿವಂತರಂತೆ!
ಪಾಕ್‌ನ ಚುನಾವಣ ಆಯೋಗಕ್ಕೆ ಸಲ್ಲಿಕೆಯಾಗಿರುವ ಅಫಿಡವಿಟ್‌ಗಳಿಂದ ಈ ಮಾಹಿತಿ ಹೊರಬಂದಿದೆ. 2020ರ ಜೂ.30ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ಪ್ರಧಾನಿ ಶೆಹಬಾಜ್ ಅವರ ಮೊದಲ ಪತ್ನಿ ನುಸ್ರತ್ ಶೆಹಬಾಜ್ ಸಲ್ಲಿಸಿರುವ ಆಸ್ತಿ ಮಾಹಿತಿಯಲ್ಲಿ, ತಮ್ಮ ಬಳಿ 23.02 ಕೋಟಿ ಪಾಕಿಸ್ಥಾನಿ ರೂ. ಮೌಲ್ಯದ ಆಸ್ತಿ ಇರುವುದಾಗಿ ಉಲ್ಲೇಖೀಸಿದ್ದಾರೆ.
ಜತೆಗೆ 9 ಕೃಷಿ ಭೂಮಿ, ಲಾಹೋರ್ ಮತ್ತು ಹಜಾರಾದಲ್ಲಿ ಒಂದೊಂದು ಮನೆ, ವಿವಿಧ ವಲಯಗಳಲ್ಲಿ ಭಾರೀ ಪ್ರಮಾಣದ ಹೂಡಿಕೆಯಿದ್ದು, ಸ್ವಂತ ವಾಹನ ಇಲ್ಲ ಎಂದೂ ತಿಳಿಸಿದ್ದಾರೆ.
ಆದರೆ ಪ್ರಧಾನಿ ಶೆಹಬಾಜ್ ಅವರು ಹೇಳಿಕೊಂಡಿರುವಂತೆ, ಅವರಲ್ಲಿ 10.42 ಕೋಟಿ ರೂ. ಮೌಲ್ಯದ ಆಸ್ತಿಯಿದ್ದು, 14.17 ಕೋಟಿ ರೂ.ಗಳ ಬಾಧ್ಯತೆಯಿದೆ. ಇನ್ನು ಶೆಹಬಾಜ್‌ರ 2ನೇ ಪತ್ನಿ ತೆಹ್ಮಿàನಾ ದುರಾನಿ 5.76 ದಶಲಕ್ಷ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.
Related Articles
ಇಮ್ರಾನ್ ಖಾನ್-ಪತ್ನಿ ಆಸ್ತಿ?
ಮಾಜಿ ಪ್ರಧಾನಿ ಇಮ್ರಾನ್ ಖಾನ್ 2 ಲಕ್ಷ ರೂ. ಮೌಲ್ಯದ 4 ಮೇಕೆಗಳನ್ನು ಹೊಂದಿದ್ದಾರೆ. ಲಾಹೋರ್‌ನ ಝಮಾನ್ ಪಾರ್ಕ್‌ನಲ್ಲಿರುವ ಮನೆ ಸೇರಿ 6 ಮನೆಗಳಿವೆ. ಕೃಷಿಯೇತರ ಜಮೀನು ಹೊರತುಪಡಿಸಿ 600 ಎಕರೆ ಕೃಷಿ ಭೂಮಿಯಿದೆ. ಬ್ಯಾಂಕ್ ಖಾತೆಯಲ್ಲಿ 6 ಕೋಟಿ ರೂ. ನಗದು ಹೊಂದಿದ್ದಾರೆ. ಅವರ ಪತ್ನಿ ಬುಷಾÅ ಬೀಬಿ ಬಳಿ 14.21 ಕೋಟಿ ರೂ. ಮೌಲ್ಯದ ಆಸ್ತಿಯಿದೆ. ಮೂರನೇ ಪತ್ನಿಯು ಬಾನಿಗಾಲದಲ್ಲಿರುವ ಮನೆ ಸೇರಿದಂತೆ ನಾಲ್ಕು ಆಸ್ತಿಪಾಸ್ತಿಗಳು ಮತ್ತು ಒಂದು ಕಾರನ್ನು ಹೊಂದಿದ್ದಾರೆ.