Advertisement

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ಮೂರು ದಿನಗಳ ಜಾಮೀನು

10:00 PM Aug 22, 2022 | Team Udayavani |

ಇಸ್ಲಾಮಾಬಾದ್‌: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರಿಗೆ ಇಸ್ಲಾಮಾಬಾದ್‌ ಹೈಕೋರ್ಟ್‌ 3 ದಿನಗಳ ಬಂಧನ ಪೂರ್ವ ಜಾಮೀನು ಅನ್ನು ಸೋಮವಾರ ಮಂಜೂರು ಮಾಡಿದೆ.

Advertisement

ಕಳೆದ ವಾರ ಅವರು ಕೋರ್ಟ್‌, ಸರ್ಕಾರದ ಸಂಸ್ಥೆಗಳ ವಿರುದ್ಧ ಗುರುತರ ಆರೋಪ ಮಾಡಿದ್ದರಿಂದ ಅವರ ವಿರುದ್ಧ ಉಗ್ರ ನಿಗ್ರಹ ಕಾಯ್ದೆಯ ಅನ್ವಯ ಪ್ರಕರಣ ದಾಖಲಾಗಿದೆ.

ಇಮ್ರಾನ್‌ ಬಂಧನದ ಬಗ್ಗೆ ವದಂತಿಗಳು ಹರಿದಾಡುತ್ತಿದ್ದಂತೆಯೇ ಪಾಕಿಸ್ತಾನ-ತೆಹ್ರಿಕ್‌-ಇ-ಇನ್ಸಾಫ್(ಪಿಟಿಐ) ಪಕ್ಷದ ಕಾರ್ಯಕರ್ತರು ಅವರ ನಿವಾಸದ ಮುಂದೆ ಜಮಾಯಿಸಿದ್ದಾರೆ ಮತ್ತು ಸರ್ಕಾರದ ವಿರುದ್ಧ ಎಚ್ಚರಿ ನೀಡಿದ್ದಾರೆ.

ಬೆಂಬಲದ ವಿಡಿಯೋಗಳನ್ನು ಪಿಟಿಐ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next