ಬಸೆಟರ್/ಟರೂಬ: ಇಂಗ್ಲೆಂಡ್ ಮತ್ತು ಪಾಕಿಸ್ಥಾನ ತಂಡಗಳು ಅಂಡರ್-19 ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ.
“ಎ’ ವಿಭಾಗದ ಮುಖಾಮುಖಿಯಲ್ಲಿ ಇಂಗ್ಲೆಂಡ್ ಯುಎಇಯನ್ನು 189 ರನ್ನುಗಳ ಬೃಹತ್ ಅಂತರದಿಂದ ಪರಾಭವಗೊಳಿಸಿತು. “ಸಿ’ ವಿಭಾಗದ ಪಂದ್ಯದಲ್ಲಿ ಪಾಕಿಸ್ಥಾನ 24 ರನ್ನುಗಳಿಂದ ಅಫ್ಘಾನಿಸ್ಥಾನವನ್ನು ಕೆಡವಿತು.
ನಾಯಕ ಟಾಮ್ ಪ್ರಸ್ಟ್ ಅವರ ಪ್ರಚಂಡ 154 ರನ್ (119 ಎಸೆತ, 13 ಬೌಂಡರಿ, 4 ಸಿಕ್ಸರ್) ಸಾಹಸದಿಂದ ಇಂಗ್ಲೆಂಡ್ 6 ವಿಕೆಟಿಗೆ 362 ರನ್ ರಾಶಿ ಹಾಕಿತು.
ಜವಾಬಿತ್ತ ಯುಎಇ 38.2 ಓವರ್‌ಗಳಲ್ಲಿ 173ಕ್ಕೆ ಕುಸಿಯಿತು. ಇದರೊಂದಿಗೆ ಇಂಗ್ಲೆಂಡ್ ಗ್ರೂಪ್ ಹಂತದ ಎಲ್ಲ 3 ಪಂದ್ಯಗಳನ್ನೂ ಗೆದ್ದು ಸಂಭ್ರಮಿಸಿತು.
ಇದನ್ನೂ ಓದಿ:ಮತ್ತೆ ಎಡವಿದ ಭಾರತಕ್ಕೆ ಸರಣಿ ಸೋಲು; ಮಲಾನ್-ಡಿ ಕಾಕ್ ಭರ್ಜರಿ ಆರಂಭ
Related Articles
ಇನ್ನೊಂದು ಮುಖಾಮುಖಿಯಲ್ಲಿ ಪಾಕಿಸ್ಥಾನ 9 ವಿಕೆಟಿಗೆ 239 ರನ್ ಗಳಿಸಿದರೆ, ಅಫ್ಘಾನಿಸ್ಥಾನ 9ಕ್ಕೆ 215 ರನ್ ತನಕ ಬಂದು ಶರಣಾಯಿತು. ಇದು ಪಾಕಿಸ್ಥಾನಕ್ಕೆ ಒಲಿದ ಸತತ 2ನೇ ಜಯ.
ದಿನದ 3ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬಾಂಗ್ಲಾದೇಶ ಕೆನಡಾವನ್ನು 8 ವಿಕೆಟ್‌ಗಳಿಂದ ಮಣಿಸಿತು.