ಇಸ್ಲಾಮಾಬಾದ್: ಪಾಕಿಸ್ತಾನದ ಲಾಹೋರ್ ಸರ್ಕಾರಿ ಕಾಲೇಜು ವಿಶ್ವವಿದ್ಯಾಲಯದಲ್ಲಿ ನಡೆದ ಘಟಿಕೋತ್ಸವದಲ್ಲಿ ಪಾಕ್ ಶಿಕ್ಷಣ ಸಚಿವ ರಾಣಾ ತನ್ವೀರ್ ಹುಸೇನ್ ಅವರು ತಮ್ಮ ಭಾಷಣದಲ್ಲಿ ಅಶ್ಲೀಲ ಪದ ಪ್ರಯೋಗ ಮಾಡಿರುವುದು ಟೀಕೆಗೆ ಗುರಿಯಾಗಿದೆ. ಅವರ ಭಾಷಣದ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.
Advertisement
ಶಿಕ್ಷಣ ಸಚಿವರಾಗಿದ್ದೂ ಘಟಿಕೋತ್ಸವದಲ್ಲಿ ಹೊಲಸು ಪದ ಬಳಸಿರುವ ಬಗ್ಗೆ ಸಚಿವ ತನ್ವೀರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಫೈಸಲಾಬಾದ್ ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿ ರಾಣಾ ಇಕ್ವಾರ್ ಅವರ ಬಗ್ಗೆ ಮಾತನಾಡುವಾಗ ಅವರು ಅಶ್ಲೀಲ ಪದ ಬಳಸಿದ್ದರು. ಟೀಕೆ ವ್ಯಕ್ತವಾಗುತ್ತಿರುವಂತೆ ಸಚಿವ ತನ್ವೀರ್ ಕ್ಷಮೆ ಯಾಚಿಸಿದ್ದಾರೆ.