Advertisement
ಪಾಕಿಸ್ಥಾನ ನ್ಯಾಶನಲ್ ಅಸೆಂಬ್ಲಿ ಚುನಾವಣೆಯಲ್ಲಿ ಮಾಜಿ ಪಿಎಂ ಇಮ್ರಾನ್ ಖಾನ್‌ರ ಪಾಕಿಸ್ಥಾನ್‌ತೆಹ್ರೀಕ್-ಇ-ಇನ್ಸಾಫ್ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಗಳು 103 ಸ್ಥಾನಗಳನ್ನು ಗಳಿಸಿದ್ದಾರೆ. ಆದರೆ ಸರಕಾರ ರಚಿಸಲು ಸರಳ ಬಹುಮತಕ್ಕೆ 31 ಸಂಸದರ ಕೊರತೆ ಎದುರಾಗಿದೆ. ಅಲ್ಲದೆ 73 ಸ್ಥಾನಗಳಲ್ಲಿ ಜಯ ಸಾಧಿಸಿರುವ ಮಾಜಿ ಪಿಎಂ ನವಾಜ್ ಶರೀಫ್ ನೇತೃತ್ವದ ಪಾಕಿಸ್ಥಾನ ಮುಸ್ಲಿಂ ಲೀಗ್- ನವಾಜ್ (ಪಿಎಂಎಲ್-ಎನ್) ಪಕ್ಷವು ಈಗಾಗಲೇ 54 ಸ್ಥಾನ ಗಳಲ್ಲಿ ಗೆದ್ದಿರುವ ಬಿಲಾವಲ್ ಭುಟ್ಟೋ ಜರ್ದಾರಿ ನೇತೃತ್ವದ ಪಾಕಿಸ್ಥಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಹಾಗೂ 17ರಲ್ಲಿ ಜಯ ಸಾಧಿಸಿರುವ ಕರಾಚಿ ಮೂಲದ ಮುತ್ತಾಹಿದಾ ಕ್ವಾಮಿ ಮೂವ್‌ಮೆಂಟ್- ಪಾಕಿಸ್ಥಾನ (ಎಂಕ್ಯೂಎಂ-ಪಿ) ಪಕ್ಷದೊಂದಿಗೆ ಮೈತ್ರಿ ಮಾತುಕತೆ ನಡೆಸಲಾರಂಭಿಸಿದೆ. ನವಾಜ್ ಶರೀಫ್ ಪಕ್ಷಕ್ಕೆ ಪಾಕ್‌ನ ಬಲಿಷ್ಠ ಸೇನೆಯ ಬೆಂಬಲವಿರುವ ಕಾರಣ, ಇಮ್ರಾನ್ ಖಾನ್ ಪಕ್ಷ ಸರಕಾರ ರಚಿಸುವ ಸಾಧ್ಯತೆ ಕ್ಷೀಣಿಸಿದೆ. 103 ಸ್ಥಾನಗಳನ್ನು ಗಳಿಸಿದರೂ ಸರಕಾರ ರಚಿಸಲಾಗದ ಇಮ್ರಾನ್ ಪಕ್ಷಕ್ಕೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
Related Articles
Advertisement