Advertisement

ನಿಯಂತ್ರಣ ರೇಖೆ ಸನಿಹಕ್ಕೆ ಎರಡು ಸಾವಿರ ಪಾಕ್ ಸೈನಿಕರು

10:46 AM Sep 06, 2019 | Hari Prasad |

ಹೊಸದಿಲ್ಲಿ: ಕಾಶ್ಮೀರ ವಿಚಾರದಲ್ಲಿ ಭಾರತ ವಿರುದ್ಧ ಪಾಕಿಸ್ಥಾನ ಕುದಿಯುತ್ತಿರುವಂತೆಯೇ, ಪಾಕ್ 2 ಸಾವಿರಕ್ಕೂ ಹೆಚ್ಚು ಸೈನಿಕರನ್ನು ನಿಯಂತ್ರಣ ರೇಖೆ ಸನಿಹಕ್ಕೆ ಕಳುಹಿಸಿದೆ. ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿನ ಈ ಬೆಳವಣಿಗೆಯನ್ನು ಭಾರತೀಯ ಭೂಸೇನೆ ಹದ್ದಿನ ಕಣ್ಣಿಟ್ಟು ನೋಡುತ್ತಿದೆ.

Advertisement

ನಿಯಂತ್ರಣ ರೇಖೆಯಿಂದ ಸುಮಾರು 30 ಕಿ.ಮೀ. ದೂರದಲ್ಲಿ ಅವರನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ಹೇಳಿವೆ. ಸದ್ಯದ ಮಟ್ಟಿಗೆ ಅವರನ್ನು ರಕ್ಷಣಾತ್ಮಕವಾಗಿ ನಿಯೋಜಿಸಿರುವಂತಿದೆ. ಆದರೂ ಬೆಳವಣಿಗೆಯನ್ನು ಭೂಸೇನೆ ನಿರಂತರ ಗಮನಿಸುತ್ತಿದ ಎಂದು ಹೇಳಿದೆ.

ಇನ್ನು ಈಗಾಗಲೇ ನಿಯಂತ್ರಣ ರೇಖೆಯುದ್ದಕ್ಕೂ ಉಗ್ರರನ್ನು ಛೂ ಬಿಡುವ ಶಿಬಿರಗಳನ್ನು ಪಾಕಿಸ್ಥಾನ ಮತ್ತೆ ಚಾಲೂ ಮಾಡಿದ್ದು, ಒಂದಲ್ಲ ಒಂದು ಕಡೆ ಅವರನ್ನು ಭಾರತದೊಳಕ್ಕೆ ನುಗ್ಗಿಸಲು ಯತ್ನಿಸುತ್ತಿದೆ. ಇದರೊಂದಿಗೆ ಆಪ್ಘಾನಿಸ್ಥಾನದಲ್ಲಿ ಉಗ್ರರ ನೇಮಕಾತಿಯನ್ನು ಲಷ್ಕರ್ ಎ ತೋಯ್ಬಾ ಮತ್ತು ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಗಳು ಮಾಡುತ್ತಿವೆ.

370 ರದ್ದತಿ ಬಳಿಕ ಪಾಕ್ ಈಗಾಗಲೇ 100 ಎಸ್‌.ಎಸ್‌.ಐ. ಕಮಾಂಡೋಗಳನ್ನು ನಿಯೋಜಿಸಿದ್ದು, ಅವರ ನೆರವಿನೊಂದಿಗೆ ಉಗ್ರರನ್ನು ಛೂ ಬಿಡುವ ಯತ್ನ ಮಾಡುತ್ತಿದೆ. ಆಫ್ಘನ್‌ ನಲ್ಲಿ ನೇಮಕವಾಗುವ ಉಗ್ರರನ್ನು ಸ್ಥಳೀಯ ಕಾಶ್ಮೀರಿ ಮತ್ತು ಪಾಕ್ ಉಗ್ರರ ಬದಲಿಗೆ ನಿಯೋಜಿಸಲು ಅಲ್ಲಿನ ಉಗ್ರ ಸಂಘಟನೆಗಳು ತೀರ್ಮಾನಿಸಿವೆ ಎಂದೂ ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next