Advertisement

Pakistan Cricket: ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಹೇಳಿದ ಮೊಹಮ್ಮದ್‌ ಅಮೀರ್

12:39 PM Dec 14, 2024 | Team Udayavani |

ಲಾಹೋರ್:‌ ಪಾಕಿಸ್ತಾನದ ಆಲ್‌ ರೌಂಡರ್‌ ಇಮಾದ್‌ ವಸೀಂ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಹೇಳಿದ ಬಳಿಕ ಇದೀಗ ಮತ್ತೋರ್ವ ಆಟಗಾರ ರಾಜೀನಾಮೆ ನೀಡಿದ್ದಾರೆ. ಅವರೆಂದರೆ ವೇಗಿ ಮೊಹಮ್ಮದ್‌ ಅಮೀರ್.‌

Advertisement

ಎಡಗೈ ವೇಗಿ ಮೊಹಮ್ಮದ್‌ ಅಮೀರ್‌ ಅವರು ಶನಿವಾರ (ಡಿ.14) ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ್ದಾರೆ. ವಿಶೇಷವೆಂದರೆ, ಅಮೀರ್ ಮಾರ್ಚ್ 2024 ರಲ್ಲಿ ನಿವೃತ್ತಿ ಹಿಂಪಡೆದು ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ಮರಳಿದ್ದರು. ಮೂರು ವರ್ಷ ಮತ್ತು ಎಂಟು ತಿಂಗಳ ಬಳಿಕ ನಂತರ ಅಮೀರ್‌ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರು.

ಬಳಿಕ 2024ರ ಟಿ20 ವಿಶ್ವಕಪ್ ನಲ್ಲಿ ಆಡಿದ್ದರು. ನಾಲ್ಕು ಪಂದ್ಯಗಳಿಂದ ಏಳು ವಿಕೆಟ್‌ ಗಳನ್ನು ಪಡೆದಿದ್ದರು. ಜೂನ್‌ನಲ್ಲಿ ತನ್ನ ರಾಷ್ಟ್ರಕ್ಕಾಗಿ ಕೊನೆಯದಾಗಿ ಆಡಿದ ನಂತರ, ಅಮೀರ್ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮೂಲಕ ನಿವೃತ್ತಿ ಘೋಷಿಸಿದರು.

ಈ ನಿರ್ಧಾರವನ್ನು ತೆಗೆದುಕೊಳ್ಳುವುದು ಸುಲಭವಲ್ಲ, ಆದರೆ ಮುಂದಿನ ಪೀಳಿಗೆಗೆ ವರ್ಗಾಯಿಸಲು ಇದು ಸರಿಯಾದ ಸಮಯ ಎಂದು ಎಂದು ಎಡಗೈ ಸೀಮರ್ ಹೇಳಿಕೊಂಡರು.

Advertisement

2009 ರಲ್ಲಿ ಚೊಚ್ಚಲ ಪಂದ್ಯವನ್ನಾಡಿದ ಅಮೀರ್ 271 ಅಂತರಾಷ್ಟ್ರೀಯ ವಿಕೆಟ್‌ಗಳೊಂದಿಗೆ ನಿವೃತ್ತಿ ಹೊಂದಿದರು. ಅವರು ಟೆಸ್ಟ್‌ನಲ್ಲಿ 36 ಪಂದ್ಯಗಳಿಂದ 119 ವಿಕೆಟ್‌ಗಳು, 61 ಏಕದಿನ ಪಂದ್ಯಗಳಿಂದ 81 ವಿಕೆಟ್‌ ಗಳು ಮತ್ತು 62 ಟಿ20 ಪಂದ್ಯಗಳಲ್ಲಿ 71 ವಿಕೆಟ್‌ಗಳನ್ನು ಪಡೆದರು. ಅವರು ಪಾಕಿಸ್ತಾನದ 2009 ಟಿ20 ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು. ಆದಾಗ್ಯೂ, 2010 ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್ ಹಗರಣದಿಂದ ಅವರು ಜೈಲುಪಾಲಾಗಿದ್ದರು.

ಅಮೀರ್ 5 ವರ್ಷಗಳ ನಿಷೇಧವನ್ನು ಎದುರಿಸಿದ್ದರು. ಅವರು ಅಂತಿಮವಾಗಿ 2016 ರಲ್ಲಿ ತಮ್ಮ ನಿಷೇಧವನ್ನು ಪೂರೈಸಿದ ನಂತರ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದರು. ಪಾಕಿಸ್ತಾನದ ಚಾಂಪಿಯನ್ಸ್ ಟ್ರೋಫಿ 2017 ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಅವರು ಮುಂದೆ 2019 ರ ಏಕದಿನ ವಿಶ್ವಕಪ್‌ನಲ್ಲಿ ಪಾಕ್‌ ಪರ ಪ್ರಮುಖ ವಿಕೆಟ್ ಟೇಕರ್ ಆಗಿ ಮೂಡಿ ಬಂದಿದ್ದರು. ಪಿಸಿಬಿ (ಪಾಕಿಸ್ತಾನ ಕ್ರಿಕೆಟ್ ಮಂಡಳಿ) ಆಡಳಿತದೊಂದಿಗೆ ಸಂಘರ್ಷದ ನಂತರ ಅಮೀರ್ ಡಿಸೆಂಬರ್ 2020 ರಲ್ಲಿ ನಿವೃತ್ತಿ ಘೋಷಿಸಿದರು. ಆದರೆ ಮಾರ್ಚ್ 2024 ರಲ್ಲಿ ನಿವೃತ್ತಿ ಹಿಂಪಡೆದು ಮತ್ತೆ ಆಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next