Advertisement

ಗೆಲುವಿನ ಓಟ ಮುಂದುವರಿಸಿದ ಪಾಕಿಸ್ಥಾನ

11:36 PM Oct 26, 2021 | Team Udayavani |

ಶಾರ್ಜಾ: ಪಾಕಿಸ್ಥಾನ ಮತ್ತೊಂದು ಸರ್ವಾಂಗೀಣ ಕ್ರಿಕೆಟ್‌ ಪ್ರದರ್ಶನ ನೀಡಿ ನ್ಯೂಜಿಲ್ಯಾಂಡಿಗೆ 5 ವಿಕೆಟ್‌ಗಳ ಸೋಲುಣಿಸಿದೆ. ಸತತ ಎರಡು ಜಯದೊಂದಿಗೆ ಓಟ ಮುಂದುವರಿಸಿದೆ.

Advertisement

ಮಂಗಳವಾರದ ಮೇಲಾಟದಲ್ಲಿ ನ್ಯೂಜಿಲ್ಯಾಂಡ್‌ 8 ವಿಕೆಟಿಗೆ 134 ರನ್ನುಗಳ ಸಾಮಾನ್ಯ ಮೊತ್ತ ಗಳಿಸಿದರೆ, ಪಾಕಿಸ್ಥಾನ 18.4 ಓವರ್‌ಗಳಲ್ಲಿ 5 ವಿಕೆಟಿಗೆ 135 ರನ್‌ ಮಾಡಿ ವಿಜಯೋತ್ಸವ ಆಚರಿಸಿತು.

ನ್ಯೂಜಿಲ್ಯಾಂಡ್‌ ಕೂಡ ಬೌಲಿಂಗ್‌ ಮೂಲಕ ತಿರುಗೇಟು ನೀಡಿತಾದರೂ ಟಾರ್ಗೆಟ್‌ ಸಣ್ಣ ದಿದ್ದುದರಿಂದ ಇದನ್ನು ಉಳಿಸಿಕೊಳ್ಳುವಲ್ಲಿ ವಿಫಲ ವಾಯಿತು. 87ಕ್ಕೆ ಪಾಕಿಸ್ಥಾನದ 5 ವಿಕೆಟ್‌ ಬಿದ್ದಾಗ ಪಂದ್ಯ ಕುತೂಹಲ ಕೆರಳಿಸಿತು. ಆದರೆ ಅನುಭವಿ ಶೋಯಿಬ್‌ ಮಲಿಕ್‌ (ಅಜೇಯ 26) ಮತ್ತು ಆಸಿಫ್‌ ಅಲಿ (ಅಜೇಯ 27) ಸೇರಿಕೊಂಡು ತಂಡವನ್ನು ದಡ ಮುಟ್ಟಿಸಿದರು. ಆರಂಭಕಾರ ರಿಜ್ವಾನ್‌ 33 ರನ್‌ ಹೊಡೆದರು.

ಕಿವೀಸ್‌ ಬ್ಯಾಟಿಂಗ್‌ ವೈಫಲ್ಯ
ಕಿವೀಸ್‌ ಸರದಿಯಲ್ಲಿ ಯಾರಿಂದಲೂ ದೊಡ್ಡ ಇನ್ನಿಂಗ್ಸ್‌ ಆಗಲೀ, ದೊಡ್ಡ ಜತೆಯಾಟವಾಗಲೀ ದಾಖಲಾಗಲಿಲ್ಲ. ತಲಾ 27 ರನ್‌ ಮಾಡಿದ ಮಿಚೆಲ್‌ ಮತ್ತು ಕಾನ್ವೆ ಅವರದೇ ಅತ್ಯಧಿಕ ವೈಯಕ್ತಿಕ ಗಳಿಕೆಯಾಗಿತ್ತು.

ಕಳೆದ ಪಂದ್ಯದಲ್ಲಿ ಭಾರತವನ್ನು ಕಾಡಿದ ಶಾಹೀನ್‌ ಅಫ್ರಿದಿ ಇಲ್ಲಿ ತಮ್ಮ ಮೊದಲ ಓವರನ್ನೇ ಮೇಡನ್‌ ಮಾಡಿ ಗಮನ ಸೆಳೆದರು. ಬಿಗ್‌ ಹಿಟ್ಟರ್‌ ಮಾರ್ಟಿನ್‌ ಗಪ್ಟಿಲ್‌ಗೆ ಈ ಓವರ್‌ನಲ್ಲಿ ಒಂದೂ ರನ್‌ ಮಾಡಲಾಗಲಿಲ್ಲ. ಬಳಿಕ ಗಪ್ಟಿಲ್‌-ಡ್ಯಾರಿಲ್‌ ಮಿಚೆಲ್‌ ಲಯ ಕಂಡುಕೊಂಡರು. 5.2 ಓವರ್‌ಗಳಲ್ಲಿ 36 ರನ್‌ ಬಂತು. ಆಗ 17 ರನ್‌ ಮಾಡಿದ ಗಪ್ಟಿಲ್‌ ಅವರನ್ನು ರವೂಫ್ ಬೌಲ್ಡ್‌ ಮಾಡಿದರು (20 ಎಸೆತ, 3 ಬೌಂಡರಿ).

Advertisement

ಗಪ್ಟಿಲ್‌ಗಿಂತ ಮಿಚೆಲ್‌ ಆಟ ಬಿರುಸಿನಿಂದ ಕೂಡಿತ್ತು. ಆದರೆ ಅವರಿಗೂ ಎದುರಿಸಲು ಸಾಧ್ಯವಾದದ್ದು 20 ಎಸೆತ ಮಾತ್ರ. ಗಳಿಸಿದ್ದು 27 ರನ್‌. 2 ಸಿಕ್ಸರ್‌ ಹಾಗೂ ಒಂದು ಬೌಂಡರಿ ಇದರಲ್ಲಿ ಒಳಗೊಂಡಿತ್ತು.

ನಾಯಕ ಕೇನ್‌ ವಿಲಿಯಮ್ಸನ್‌ ಬಿರುಸಿನ ಆಟಕ್ಕಿಳಿದರೂ ಇನ್ನಿಂಗ್ಸ್‌ ವಿಸ್ತರಿಸಲಾಗಲಿಲ್ಲ. 26 ಎಸೆತಗಳಿಂದ 25 ರನ್‌ ಮಾಡಿ ರನೌಟ್‌ ಆದರು (2 ಬೌಂಡರಿ, 1 ಸಿಕ್ಸರ್‌). ಜೇಮ್ಸ್‌ ನೀಶಮ್‌ ಒಂದೇ ರನ್‌ ಮಾಡಿ ಅನುಭವಿ ಹಫೀಜ್‌ ಮೋಡಿಗೆ ಸಿಲುಕಿದರು. ಅರ್ಧ ಆಟ ಮುಗಿಯುವಾಗ ನ್ಯೂಜಿಲ್ಯಾಂಡ್‌ 3 ವಿಕೆಟಿಗೆ 60 ರನ್‌ ಮಾಡಿತ್ತು. 15 ಓವರ್‌ ಅಂತ್ಯಕ್ಕೆ 100 ರನ್‌ ಪೂರ್ತಿಗೊಂಡಿತು.

ಡೆತ್‌ ಓವರ್‌ಗಳಲ್ಲಿ ಡೇವನ್‌ ಕಾನ್ವೆ-ಗ್ಲೆನ್‌ ಫಿಲಿಪ್ಸ್‌ ಕ್ರೀಸಿನಲ್ಲಿದ್ದರು. ಆದರೆ ಇವರಿಂದ ದೊಡ್ಡ ಲಾಭವೇನೂ ಆಗಲಿಲ್ಲ. 24 ಎಸೆತಗಳಿಂದ 25 ರನ್‌ ಒಟ್ಟುಗೂಡಿತು. ದ್ವಿತೀಯ ಸ್ಪೆಲ್‌ ದಾಳಿಗಿಳಿದ ರವೂಫ್ ಒಂದೇ ಓವರ್‌ನಲ್ಲಿ ಇವರಿ ಬ್ಬರನ್ನೂ ಪೆವಿಲಿಯನ್ನಿಗೆ ಅಟ್ಟಿದರು. ಅವರು 22ಕ್ಕೆ 4 ವಿಕೆಟ್‌ ಕಿತ್ತು ಹೆಚ್ಚಿನ ಯಶಸ್ಸು ಸಾಧಿಸಿದರು. ಅಫ್ರಿದಿಯ ಏಕೈಕ ವಿಕೆಟ್‌ ಅಂತಿಮ ಎಸೆತದಲ್ಲಿ ಬಂತು.

ಇದನ್ನೂ ಓದಿ:ವಿಂಡೀಸ್‌ ಮತ್ತೆ ಪಲ್ಟಿ; ಖಾತೆ ತೆರೆದ ದ. ಆಫ್ರಿಕಾ

ಸ್ಕೋರ್‌ ಪಟ್ಟಿ
ನ್ಯೂಜಿಲ್ಯಾಂಡ್‌
ಮಾರ್ಟಿನ್‌ ಗಪ್ಟಿಲ್‌ ಬಿ ರವೂಫ್ 17
ಡ್ಯಾರಿಲ್‌ ಮಿಚೆಲ್‌ ಸಿ ಫ‌ಕರ್‌ ಬಿ ವಾಸಿಂ 27
ವಿಲಿಯಮ್ಸನ್‌ ರನೌಟ್‌ 25
ಜೇಮ್ಸ್‌ ನೀಶಮ್‌ ಸಿ ಫ‌ಕರ್‌ ಬಿ ಹಫೀಜ್‌ 1
ಡೇವನ್‌ ಕಾನ್ವೆ ಸಿ ಬಾಬರ್‌ ಬಿ ರವೂಫ್ 27
ಗ್ಲೆನ್‌ ಫಿಲಿಪ್ಸ್‌ ಸಿ ಅಲಿ ಬಿ ರವೂಫ್ 13
ಟಿಮ್‌ ಸೀಫ‌ರ್ಟ್‌ ಸಿ ಹಫೀಜ್‌ ಬಿ ಅಫ್ರಿದಿ 8
ಮಿಚೆಲ್‌ ಸ್ಯಾಂಟ್ನರ್‌ ಬಿ ರವೂಫ್ 6
ಐಶ್‌ ಸೋಧಿ ಔಟಾಗದೆ 2
ಇತರ 8
ಒಟ್ಟು (8 ವಿಕೆಟಿಗೆ) 134
ವಿಕೆಟ್‌ ಪತನ: 1-36, 2-54, 3-56, 4-90, 5-116, 6-116, 7-125, 8-134.
ಬೌಲಿಂಗ್‌; ಶಾಹೀನ್‌ ಅಫ್ರಿದಿ 4-1-21-1
ಇಮಾದ್‌ ವಾಸಿಂ 4-0-24-1
ಹಸನ್‌ ಅಲಿ 3-0-26-0
ಹ್ಯಾರಿಸ್‌ ರವೂಫ್ 4-0-22-4
ಶದಾಬ್‌ ಖಾನ್‌ 3-0-19-0
ಮೊಹಮ್ಮದ್‌ ಹಫೀಜ್‌ 2-0-16-1
ಪಾಕಿಸ್ಥಾನ
ರಿಜ್ವಾನ್‌ ಎಲ್‌ಬಿಡಬ್ಲ್ಯು ಬಿ ಸೋಧಿ 33
ಬಾಬರ್‌ ಆಜಂ ಬಿ ಸೌಥಿ 9
ಫ‌ಕರ್‌ ಜಮಾನ್‌ ಎಲ್‌ಬಿಡಬ್ಲ್ಯು ಬಿ ಸೋಧಿ 11
ಹಫೀಜ್‌ ಸಿ ಕಾನ್ವೆ ಬಿ ಸ್ಯಾಂಟ್ನರ್‌ 11
ಶೋಹಿಬ್‌ ಮಲಿಕ್‌ ಔಟಾಗದೆ 26
ಇಮಾದ್‌ ವಾಸಿಂ ಎಲ್‌ಬಿಡಬ್ಲ್ಯು ಬಿ ಬೌಲ್ಟ್ 11
ಆಸಿಫ್ ಅಲಿ ಔಟಾಗದೆ 27
ಇತರ 7
ಒಟ್ಟು (18.4 ಓವರ್‌ಗಳಲ್ಲಿ 5 ವಿಕೆಟಿಗೆ) 135
ವಿಕೆಟ್‌ ಪತನ:1-28, 2-47, 3-63, 4-69, 5-87.
ಬೌಲಿಂಗ್‌; ಮಿಚೆಲ್‌ ಸ್ಯಾಂಟ್ನರ್‌ 4-0-33-1
ಟಿಮ್‌ ಸೌಥಿ 4-0-25-1
ಟ್ರೆಂಟ್‌ ಬೌಲ್ಟ್ 3.4-0-29-1
ಜೇಮ್ಸ್‌ ನೀಶಮ್‌ 3-0-18-0
ಐಶ್‌ ಸೋಧಿ 4-0-28-2

ಲಾಕಿ ಫ‌ರ್ಗ್ಯುಸನ್‌ ವಿಶ್ವಕಪ್‌ನಿಂದ ಔಟ್‌
ನ್ಯೂಜಿಲ್ಯಾಂಡಿನ ವೇಗಿ ಲಾಕಿ ಫ‌ರ್ಗ್ಯುಸನ್‌ ಕಾಲಿನ ಸ್ನಾಯು ಸೆಳೆತದಿಂದಾಗಿ ಟಿ20 ವಿಶ್ವಕಪ್‌ ಪಂದ್ಯಾವಳಿಯಿಂದ ಬೇರ್ಪಟ್ಟಿದ್ದಾರೆ. ಇವರ ಬದಲು ಆಡಮ್​ ಮಿಲ್ನೆ ಅವರನ್ನು ಸೇರಿಸಿಕೊಳ್ಳಲಾಗಿದೆ.

ಪಾಕ್‌ ಗೆಲುವನ್ನು ಸಂಭ್ರಮಿಸಿದ ಶಿಕ್ಷಕಿ ವಜಾ
ಉದಯಪುರ: ರವಿವಾರ ನಡೆದ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ಥಾನ ತಂಡ ಜಯ ಸಾಧಿಸಿದ ಬೆನ್ನಲ್ಲೇ ಹಲವು ಘಟನೆಗಳು ಬೆಳಕಿಗೆ ಬಂದಿವೆ. ರಾಜಸ್ಥಾನದ ಉದಯಪುರದ “ನೀರಜಾ ಮೋದಿ ಶಾಲೆ’ಯಲ್ಲಿ ಕೆಲಸ ಮಾಡುವ ನಫೀಸಾ ಅಟ್ಟಾರಿ ಎನ್ನುವ ಶಿಕ್ಷಕಿ, ಪಾಕಿಸ್ಥಾನವನ್ನು ಬೆಂಬಲಿಸಿ ವಾಟ್ಸ್‌ಆ್ಯಪ್‌ ಸ್ಟೇಟಸ್‌ ಹಾಕಿಕೊಂಡಿದ್ದರು. ಅದರಲ್ಲಿ ಪಾಕ್‌ ಆಟಗಾರರು ಸಂಭ್ರಮಿಸುತ್ತಿರುವ ಚಿತ್ರದೊಂದಿಗೆ, “ಜೀತ್‌ ಗಯೇ, ವೀ ವನ್‌’ ಎಂದು ಬರೆದುಕೊಂಡಿದ್ದರು!

ಇದನ್ನು ಪ್ರಶ್ನಿಸಿದ ಪೋಷಕರೊಬ್ಬರು, ನೀವು ಪಾಕಿಸ್ಥಾನವನ್ನು ಬೆಂಬಲಿಸುತ್ತೀರಾ ಎಂದು ಕೇಳಿದ್ದಾರೆ. ಆಕೆ ಹಿಂದೆ ಮುಂದೆ ಯೋಚಿಸದೆ “ಹೌದು’ ಎಂದು ಉತ್ತರಿಸಿದ್ದಾರೆ. ಕೂಡಲೇ ಆಕೆಯನ್ನು ಶಾಲಾ ಆಡಳಿತ ಮಂಡಳಿ ಕೆಲಸದಿಂದ ಕಿತ್ತು ಹಾಕಿದೆ.

ತಾನು ಭಾರತೀಯಳು, ಪಾಕಿಸ್ಥಾನದ ಬೆಂಬಲಿಗಳಲ್ಲ. ಸ್ನೇಹದಿಂದ ಬೆಟ್‌ ಕಟ್ಟಿಕೊಂಡ ಪರಿಣಾಮ ಹೀಗೆ ಸ್ಟೇಟಸ್‌ ಹಾಕಿದೆ. ಆಮೇಲೆ ತಾನದನ್ನು ಅಳಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next