Advertisement

Pak Parliament: ಇಲಿ ಕಾಟ, ಪಾಕಿಸ್ಥಾನದ ಸಂಸತ್‌ ಭವನದಲ್ಲಿ ಬೆಕ್ಕು ಸಾಕಲು 12 ಲಕ್ಷ ವೆಚ್ಚ!

09:26 AM Aug 22, 2024 | Team Udayavani |

ಇಸ್ಲಾಮಾಬಾದ್‌: ಪಾಕಿಸ್ಥಾನದ ಸಂಸತ್‌ ಭವನದಲ್ಲಿ ಇಲಿಗಳ ಕಾಟ ಹೆಚ್ಚಾಗಿದ್ದು, ಇದರಿಂದ ತಪ್ಪಿಸಿಕೊಳ್ಳಲು ಬೆಕ್ಕುಗಳನ್ನು ಸಾಕಲು ನಿರ್ಧರಿಸಲಾಗಿದೆ.

Advertisement

ಬೆಕ್ಕುಗಳನ್ನು ಸಾಕಲು ಮತ್ತು ಬಲೆಗಳನ್ನು ಅಳವಡಿಸುವುದಕ್ಕಾಗಿ ಸರಕಾರ 12 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದೆ. ಇಲಿಗಳ ಕಾಟ ಹೆಚ್ಚಾದ ಕಾರಣ ಪ್ರಮುಖ ಫೈಲ್‌ಗ‌ಳು ಮತ್ತು ವೈರ್‌ಗಳು ಪದೇ ಪದೆ ಹಾನಿಗೊಳಗಾಗು­ತ್ತಿದ್ದವು. ಇದನ್ನು ತಪ್ಪಿಸುವುದ­ಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಮಾಧ್ಯಮವೊಂದರ ಜತೆ ಮಾತನಾಡಿದ ಸಂಸದರೊಬ್ಬರು, ಸಾಯಂಕಾಲವಾ­ಗು­ತ್ತಿದ್ದಂತೆ ಸಂಸದರು ಭವನ ತೊರೆಯುತ್ತಾರೆ. ಇದಾದ ಬಳಿಕ ಇಲಿಗಳ ಕಾಟ ಹೆಚ್ಚಾಗುತ್ತದೆ. ರಾತ್ರಿಯಿಡೀ ಫೈಲ್‌ಗ‌ಳನ್ನು ತಿಂದು ಹಾಳು ಮಾಡುತ್ತಿವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Mangaluru: ಸಾಲ ತೀರಿಸಲು ನಕಲಿ ನೋಟು ಮುದ್ರಣ, ಪ್ರೆಸ್ ಮಾಲೀಕ ಸೇರಿ ನಾಲ್ವರ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next