Advertisement

Pakistan: ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ʼಮತ್ತೆʼ ವಿದಾಯ ಹೇಳಿದ ಪಾಕಿಸ್ತಾನದ ಆಲ್‌ರೌಂಡರ್‌

06:26 PM Dec 13, 2024 | Team Udayavani |

ಲಾಹೋರ್:‌ ವರ್ಷದ ಹಿಂದೆಯೊಮ್ಮೆ ಅಂತಾರಾಷ್ಟ್ರೀಯ ಕ್ರಿಕೆಟ್‌ (International Cricket) ಗೆ ವಿದಾಯ ಘೋಷಿಸಿ ಮತ್ತೆ ಹಿಂಪಡೆದಿದ್ದ ಪಾಕಿಸ್ತಾನದ ಆಲ್‌ ರೌಂಡರ್‌ ಇಮಾದ್‌ ವಸೀಂ (Imad Wasim) ಅವರು ಇದೀಗ ಮತ್ತೆ ರಿಟೈರ್ ಮೆಂಟ್ ಘೋಷಣೆ ಮಾಡಿದ್ದಾರೆ.

Advertisement

35 ವರ್ಷದ ಆಲ್‌ ರೌಂಡರ್‌ ಇಮಾದ್ ವಸೀಂ ಕಳೆದ ವರ್ಷ ಒಮ್ಮೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು ಆದರೆ ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಅವರ ಅದ್ಭುತ ಆಟದಿಂದ ಅವರು ಮತ್ತೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಗೆ ಮರಳಿದರು. ಪಾಕಿಸ್ತಾನ್ ಸೂಪರ್ ಲೀಗ್‌ ನಲ್ಲಿ ಅವರು ಇಸ್ಲಾಮಾಬಾದ್ ಯುನೈಟೆಡ್‌ ಪರ ಆಡಿ ಎಲ್ಲಾ ಮೂರು ಪ್ಲೇಆಫ್ ಪಂದ್ಯಗಳಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಇಸ್ಲಾಮಾಬಾದ್ ಯುನೈಟೆಡ್‌ ತಂಡವು ಚಾಂಪಿಯನ್‌ ಆಗಿತ್ತು.

75 ಅಂತಾರಾಷ್ಟ್ರೀಯ ಟಿ20 ಪಂದ್ಯವಾಡಿರುವ ಇಮಾದ್‌ ವಸೀಂ 554 ರನ್‌ ಗಳಿಸಿದ್ದು, 73 ವಿಕೆಟ್‌ ಪಡೆದಿದ್ದಾರೆ.

“ಸುಮಾರು ಯೋಚಿಸಿದ ನಂತರ ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ” ಎಂದು ಇಮಾದ್ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದರು. “ವಿಶ್ವ ವೇದಿಕೆಯಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸುವುದು ನನ್ನ ಜೀವನದ ಶ್ರೇಷ್ಠ ಗೌರವವಾಗಿದೆ ಮತ್ತು ಹಸಿರು ಜೆರ್ಸಿ ಧರಿಸಿದ ಪ್ರತಿ ಕ್ಷಣವೂ ಮರೆಯಲಾಗದು” ಎಂದಿದ್ದಾರೆ.

Advertisement

“ಈ ಅಧ್ಯಾಯವು ಕೊನೆಗೊಳ್ಳುತ್ತಿದೆ, ದೇಶೀಯ ಮತ್ತು ಫ್ರಾಂಚೈಸ್ ಕ್ರಿಕೆಟ್ ಮೂಲಕ ಕ್ರಿಕೆಟ್‌ನಲ್ಲಿ ನನ್ನ ಪ್ರಯಾಣವನ್ನು ಮುಂದುವರಿಸಲು ನಾನು ಎದುರು ನೋಡುತ್ತಿದ್ದೇನೆ. ನಿಮ್ಮೆಲ್ಲರಿಗೂ ಹೊಸ ರೀತಿಯಲ್ಲಿ ಮನರಂಜನೆಯನ್ನು ನೀಡಬೇಕೆಂದು ನಾನು ಭಾವಿಸುತ್ತೇನೆ.” ಎಂದು ಇಮಾದ್‌ ವಸೀಂ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next