Advertisement

Pak ಜಿಂದಾಬಾದ್‌ ಘೋಷಣೆ ಪ್ರಕರಣ: ಪರಿಷತ್‌ ನಲ್ಲಿ ಕೋಲಾಹಲ, ರವಿಕುಮಾರ್‌ ಕೆಂಡಾಮಂಡಲ!

12:46 PM Feb 28, 2024 | Team Udayavani |

ಬೆಂಗಳೂರು: ರಾಜ್ಯಸಭೆ ಚುನಾವಣೆ ಗೆಲುವಿನ ನಂತರ ವಿಧಾನಸೌಧದ ಆವರಣದಲ್ಲಿ ಪಾಕ್‌ ಪರ ಘೋಷಣೆ ಕೂಗಿದ ವಿಚಾರ ಬುಧವಾರ (ಫೆ.28) ವಿಧಾನಸಭೆ ಮತ್ತು ವಿಧಾನಪರಿಷತ್‌ ನಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರ ನಡುವೆ ತೀವ್ರ ವಾಕ್ಸಮರ, ಕೋಲಾಹಲಕ್ಕೆ ಎಡೆಮಾಡಿಕೊಟ್ಟಿರುವ ಪ್ರಸಂಗ ನಡೆಯಿತು.

Advertisement

ಇದನ್ನೂ ಓದಿ:PakistanZindabad ಘೋಷಣೆ;ಉಡುಪಿ,ಮಂಗಳೂರಿನಲ್ಲಿ ಕಾಂಗ್ರೆಸ್ ಕಚೇರಿ ಮುತ್ತಿಗೆಗೆ ಬಿಜೆಪಿಯತ್ನ

ವಿಧಾನಪರಿಷತ್‌ ನಲ್ಲಿ ಬಿಜೆಪಿಯ ಎನ್‌ ರವಿಕುಮಾರ್‌ ಅವರು ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಘೋಷಣೆ ಕೂಗಿದ ವಿಚಾರ ಪ್ರಸ್ತಾಪಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್‌, ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ತಾರಕಕ್ಕೇರಿತ್ತು. ಆಗ ಕಾಂಗ್ರೆಸ್‌ ನ ಸೈಯದ್‌ ನಾಸೀರ್ ಹುಸೇನ್, ಏಯ್‌ ಅವನ ಮುಚ್ಚಿಸಿ ಎಂದು ಏಕವಚನ ಪ್ರಯೋಗಿಸಿದ್ದು, ತೀವ್ರ ಕೋಲಾಹಲಕ್ಕೆ ಕಾರಣವಾಯಿತು.

ನಾಸೀರ್ ಹುಸೇನ್ ಏಕವಚನ ಪ್ರಯೋಗಿಸಿದ ಬೆನ್ನಲ್ಲೇ ಆಕ್ರೋಶಗೊಂಡ ರವಿಕುಮಾರ್‌ ಅವರು ಸ್ಥಳದಿಂದ ಎದ್ದು ಜಬ್ಬಾರ್‌ ಸ್ಥಳದತ್ತ ಮುನ್ನುಗ್ಗಲು ಯತ್ನಿಸಿದ್ದರು. ಆಗ ಮಾರ್ಷಲ್ಸ್‌ ಗಳು ಬಂದು ಬಿಜೆಪಿ ಶಾಸಕರನ್ನು ಸುತ್ತುವರಿದಿದ್ದರು. ಆಗ ರವಿಕುಮಾರ್‌ ಅವರು, ಏಕವಚನದಲ್ಲಿ ಮಾತನಾಡಿದ್ರೆ ಸರಿ ಇರಲ್ಲ ಎಂದು ಎಚ್ಚರಿಕೆ ಕೊಟ್ಟು, ವಾಗ್ದಾಳಿ ನಡೆಸಿದ್ದರು.

ಬಿಜೆಪಿ ಶಾಸಕರು ಆಕ್ರೋಶ ವ್ಯಕ್ತಪಡಿಸಿ, ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸೋ ಹಂತಕ್ಕೆ ಹೋಗಿದ್ದು, ಮಾರ್ಷಲ್ಸ್‌ ಗಳು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಡುವಂತಾಗಿತ್ತು. ಈ ಸಂದರ್ಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು ಸಫಲವಾಗಿಲ್ಲವಾಗಿತ್ತು.

Advertisement

ಈ ಸಂದರ್ಭದಲ್ಲಿ ಕಾಂಗ್ರೆಸ್‌ ನ ಎಚ್‌ ಕೆ ಪಾಟೀಲ್‌ ಅವರು, ಕ್ಷಮೆಯಾಚಿಸುವಂತೆ ನಾಸೀರ್‌ ಮತ್ತು ರವಿಕುಮಾರ್‌ ಗೆ ಸಲಹೆ ನೀಡಿದ್ದರು. ಆದರೆ ನಾನೇನು ದೇಶದ್ರೋಹಿ ಮಾತನಾಡಿದ್ದೇನೆಯಾ, ಕ್ಷಮೆ ಕೇಳುವಂತಹ ತಪ್ಪು ಮಾಡಿಲ್ಲ ಎಂದರು. ಏತನ್ಮಧ್ಯೆ, ನಾಸೀರ್‌ ಹುಸೇನ್‌ ಮಾತನಾಡಿ, ನಾನೇನಾದರು ರವಿಕುಮಾರ್‌ ಅವರ ಮನಸ್ಸಿಗೆ ನೋವುಂಟು ಮಾಡುವ ಮಾತನಾಡಿದ್ದರೆ ಕ್ಷಮೆಯಾಚಿಸುವುದಾಗಿ ಹೇಳುವ ಮೂಲಕ ಕೋಲಾಹಲಕ್ಕೆ ತೆರೆಬಿದ್ದಿತ್ತು.

ವಿಧಾನಸಭೆಯಲ್ಲೂ ಕೋಲಾಹಲ:

ಪಾಕ್‌ ಪರ ಘೋಷಣೆ ವಿಚಾರ ವಿಧಾನಸಭೆಯಲ್ಲೂ ಪ್ರತಿಧ್ವನಿಸಿತ್ತು. ಕಲಾಪ ಆರಂಭಕ್ಕೂ ಮುನ್ನ ಬಿಜೆಪಿ ಮುಖಂಡರು ರಾಷ್ಟ್ರಧ್ವಜ ಹಿಡಿದುಕೊಂಡು ವಿಧಾನಸಭೆಗೆ ಪ್ರವೇಶಿಸಿದ್ದರು. ಆದರೆ ಸ್ಪೀಕರ್‌ ಯುಟಿ ಖಾದರ್‌ ಅವರು ಆಕ್ಷೇಪವ್ಯಕ್ತಪಡಿಸಿ, ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರ ನಡುವೆ ವಾಕ್ಸಮರ, ಕೋಲಾಹಲ ನಡೆದ ಪರಿಣಾಮ ಕಲಾಪವನ್ನು ಹತ್ತು ನಿಮಿಷಗಳ ಕಾಲ ಸ್ಪೀಕರ್‌ ಮುಂದೂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next