Advertisement

ಕಂಟೈನರ್‌ ಅಡಿಗೆ ಸಿಲುಕಿ ಪಾಕ್‌ ಪತ್ರಕರ್ತೆ ಸಾವು

07:40 PM Oct 31, 2022 | Team Udayavani |

ಇಸ್ಲಾಮಾಬಾದ್‌: ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನಾ ನಡಿಗೆಯಲ್ಲಿ ಸುದ್ದಿ ಮಾಡಲು ಹೋಗಿದ್ದ ಪತ್ರಕರ್ತೆಯೊಬ್ಬರು ಕಂಟೈನರ್‌ ಅಡಿಗೆ ಸಿಲುಕಿ ಭಾನುವಾರ ಮೃತಪಟ್ಟಿದ್ದಾರೆ.

Advertisement

ಮೃತ ಪತ್ರಕರ್ತೆಯನ್ನು ಪಾಕಿಸ್ತಾನದ ಚಾನಲ್‌ 5 ವರದಿಗಾರ್ತಿ ಸದಾಫ್ ನದೀಮ್‌ ಎಂದು ಗುರುತಿಸಲಾಗಿದೆ. ಘಟನೆ ಹಿನ್ನೆಯಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ಭಾನುವಾರದ ಮಟ್ಟಿಗೆ ಪಾಕಿಸ್ತಾನ ತೆಹ್ರಿಕ್‌-ಇನ್ಸಾಫ್ (ಪಿಟಿಐ)ನ ಅಧ್ಯಕ್ಷ ಇಮ್ರಾನ್‌ ಖಾನ್‌ ಮೊಟಕುಗೊಳಿಸಿದರು.

ಅಪಘಾತಗೊಂಡ ಕಂಟೈನರ್‌ನಲ್ಲಿ ಖಾನ್‌ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.ಆದರೆ ಇದು ಖಚಿತವಾಗಿಲ್ಲ. ಪತ್ರಕರ್ತೆಯ ಸಾವಿಗೆ ಪಾಕ್‌ ಪ್ರಧಾನಿ ಶಹಬಾಜ್‌ ಷರೀಫ್, ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌, ಪಾಕ್‌ ಮಾಹಿತಿ ಸಚಿವ ಮೇರಿಯಮ್‌ ಔರಂಗಜೇಬ್‌ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next