Advertisement

ಇಂಗ್ಲೆಂಡ್-ಪಾಕ್ ರಾವಲ್ಪಿಂಡಿ ಟೆಸ್ಟ್ :ನಾಲ್ವರು ಶತಕವೀರರು ; ಹಲವು ದಾಖಲೆಗಳ ಪತನ

07:45 PM Dec 01, 2022 | Team Udayavani |

ರಾವಲ್ಪಿಂಡಿ : ಇಲ್ಲಿ ಗುರುವಾರ ಆರಂಭವಾದ ಟೆಸ್ಟ್‌ ಕ್ರಿಕೆಟ್ ಸರಣಿಯ ಮೊದಲ ಪಂದ್ಯದ ಮೊದಲ ದಿನದಂದು ಪ್ರವಾಸಿ ಇಂಗ್ಲೆಂಡ್ ತಂಡ ಆತಿಥೇಯ ಪಾಕಿಸ್ಥಾನದ ಎದುರು ಅಬ್ಬರಿಸಿ ಹಲವು ಹೊಸ ದಾಖಲೆಗಳನ್ನು ಬರೆದಿದೆ.

Advertisement

ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ ಒಂದು ದಿನದಲ್ಲಿ ನಾಲ್ಕು ಬ್ಯಾಟ್ಸ್ ಮ್ಯಾನ್ ಗಳು ಶತಕಗಳನ್ನು ಸಿಡಿಸಿದ್ದು, ಹಲವಾರು ದಾಖಲೆಗಳು ಮುರಿದುಹೋಗಿವೆ. ಪಾಕ್ ಬೌಲರ್‌ಗಳು ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್‌ಗಳನ್ನು ಮಾತ್ರ ಪಡೆಯುವಲ್ಲಿ ಯಶಸ್ವಿಯಾಗಿ ಬ್ಯಾಟ್ಸ್ ಮ್ಯಾನ್ ಗಳ ಕೈಯಲ್ಲಿ ದಂಡಿಸಿಕೊಂಡರು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ಮೊದಲ ದಿನದ ಆಟದ ಅಂತ್ಯಕ್ಕೆ 75 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ ದಾಖಲೆಯ 506 ರನ್ ಕಲೆ ಹಾಕಿದೆ. ಬೆನ್ ಸ್ಟೋಕ್ಸ್ 17 ವರ್ಷಗಳಲ್ಲಿ ಮೊದಲ ಬಾರಿಗೆ ಇಂಗ್ಲೆಂಡ್ ತಂಡವನ್ನು ಮುನ್ನಡೆಸುತ್ತಿದ್ದಾರೆ ಮತ್ತು ಅವರ ತಂಡವು ಅದನ್ನು ಸ್ಮರಣೀಯ ಸಂದರ್ಭವನ್ನಾಗಿ ಮಾಡಿದೆ.

ಡಿಸೆಂಬರ್ 9, 1910 ರಂದು ಸಿಡ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ 494/6 (99 ಓವರ್‌ಗಳಲ್ಲಿ) ಆಗಿತ್ತು. ಇಂದು ಇಂಗ್ಲೆಂಡ್ 1 ನೇ ದಿನದಾಟವನ್ನು 506/4 ರಲ್ಲಿ ಮುಗಿಸಿ ದಾಖಲೆ ಮುರಿದಿದೆ.

ಇಂಗ್ಲೆಂಡ್ ನ ಸ್ಕೋರ್ ಟೆಸ್ಟ್ ಪಂದ್ಯದ ಒಂದು ದಿನದಲ್ಲಿ ದಾಖಲಾದ ಐದನೇ ಗರಿಷ್ಠ ಸ್ಕೋರ್ ಆಗಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್‌ನಲ್ಲಿ 6 ವಿಕೆಟ್ ನಷ್ಟಕ್ಕೆ 588 ರನ್ ಗಳಿಸಿದ್ದು ಟೆಸ್ಟ್‌ನಲ್ಲಿ ಒಂದು ದಿನದಲ್ಲಿ ಗಳಿಸಿದ ಅತಿ ಹೆಚ್ಚು ರನ್ ಆಗಿದೆ.

Advertisement

ಝಾಕ್ ಕ್ರಾಲಿ ಮತ್ತು ಬೆನ್ ಡಕೆಟ್ ಅವರು ಟೆಸ್ಟ್ ಪಂದ್ಯದ ಮೊದಲ ದಿನದಲ್ಲಿ ಆರಂಭಿಕ ಪರ ಗರಿಷ್ಠ ರನ್ ಗಳಿಸಿದ ದಾಖಲೆಯನ್ನು ಮುರಿದರು. ಅವರು ಮೊದಲ ಸೆಷನ್‌ನಲ್ಲಿ 174/0 ಸ್ಕೋರ್ ಮಾಡಿದರು, ಹಿಂದಿನ ಅತ್ಯುತ್ತಮ ಶಿಖರ್ ಧವನ್ ಮತ್ತು ಮುರಳಿ ವಿಜಯ್ (158/0) ಅವರು ಅಫ್ಘಾನಿಸ್ಥಾನ ವಿರುದ್ಧ 27 ಓವರ್‌ಗಳಲ್ಲಿ ದಾಖಲಿಸಿದ್ದರು. ಇಂಗ್ಲೆಂಡ್ ಕೇವಲ 23.3 ಓವರ್‌ಗಳಲ್ಲಿ ಅದೇ ಸ್ಕೋರ್ ಗಳಿಸಿತು.

ಬೆನ್ ಸ್ಟೋಕ್ಸ್ (34) ಮತ್ತು ಹ್ಯಾರಿ ಬ್ರೂಕ್ (101) ರಾವಲ್ಪಿಂಡಿಯಲ್ಲಿ ಮೊದಲ ಟೆಸ್ಟ್‌ನ 2 ನೇ ದಿನದ ಇನ್ನಿಂಗ್ಸನ್ನು ಪುನರಾರಂಭಿಸಲಿದ್ದು ಒಟ್ಟು ಮೊತ್ತವನ್ನು ನಂಬಲಾಗದ ಸಂಖ್ಯೆಗೆ ಕೊಂಡೊಯ್ಯುವ ಗುರಿಯನ್ನು ಹೊಂದಿದ್ದಾರೆ. 1ನೇ ದಿನದಂದು ಇಂಗ್ಲೆಂಡ್ ನಾಲ್ಕು ಶತಕ ವೀರರನ್ನು ಕಂಡಿದ್ದು ಝಾಕ್ ಕ್ರಾಲಿ (122) , ಡಕೆಟ್ (107), ಒಲ್ಲಿ ಪೋಪ್(108) ಮತ್ತು ಬ್ರೂಕ್ (101*) ಶತಕಗಳನ್ನು ಗಳಿಸಿದರು. ಸ್ಟೋಕ್ಸ್ ಎರಡನೇ ದಿನದಲ್ಲಿ ಅದೇ ರೀತಿ ಮಾಡಲು ಸಿದ್ಧರಾಗಿದ್ದಾರೆ.

ಪಾಕ್ ನೆಲದಲ್ಲಿ ಇಂಗ್ಲೆಂಡ್ ಆಡುತ್ತದೆಯೋ ಅನ್ನುವ ಪ್ರಶ್ನೆ ನಿರ್ಮಾಣವಾಗಿತ್ತು.ಮೊದಲ ಟೆಸ್ಟ್‌ನ ಆರಂಭಿಕ ದಿನದಂದು ಅವರು ಇಷ್ಟು ಅಬ್ಬರಿಸಿ ಆಡುತ್ತಾರೆ ಎಂದು ಕ್ರಿಕೆಟ್ ಪ್ರೇಮಿಗಳು ಊಹಿಸಿರಲಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next