Advertisement

ಇಮ್ರಾನ್‌ ಖಾನ್‌- ಸ್ಪೀಕರ್‌ ನಡುವೆ ಮೂಡಿತ್ತು ವಿರಸ

01:23 AM Apr 06, 2022 | Team Udayavani |

ಇಸ್ಲಾಮಾಬಾದ್‌: ಪಾಕಿಸ್ಥಾನ ನ್ಯಾಶನಲ್‌ ಅಸೆಂಬ್ಲಿ ಸ್ಪೀಕರ್‌ ಅಸಾದ್‌ ಕೈಸರ್‌ ಮತ್ತು ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ನಡುವೆ ಭಿನ್ನಾಭಿಪ್ರಾಯಗಳು ಇದ್ದ ಬಗ್ಗೆ ಮಾಹಿತಿ ಬೆಳಕಿಗೆ ಬಂದಿವೆ.

Advertisement

ಪ್ರತಿಪಕ್ಷಗಳು ಮಂಡಿಸಲು ಉದ್ದೇಶಿಸಿದ್ದ ಅವಿಶ್ವಾಸ ಗೊತ್ತುವಳಿ ತಿರಸ್ಕರಿಸಲು ಇಮ್ರಾನ್‌ ಅವರ ಕಾನೂನು ತಂಡ ಸ್ಪೀಕರ್‌ಗೆ ಒತ್ತಡ ಹೇರಿತ್ತು. ಆದರೆ, ಸಾಂವಿಧಾನಿಕ ಮಾರ್ಗ ಬಿಡಲು ತಯಾರಿಲ್ಲ ಮತ್ತು ಅದು ಸಾಧ್ಯವಾಗದ ಅಂಶ ವೆಂದು ಅಸಾದ್‌ ಕೈಸರ್‌ ಖಾನ್‌ ತಂಡಕ್ಕೆ ಮನವರಿಕೆ ಮಾಡಿದ್ದರೂ, ಫ‌ಲ ನೀಡಲಿಲ್ಲ. ಹೀಗಾಗಿಯೇ ಡೆಪ್ಯುಟಿ ಸ್ಪೀಕರ್‌ ರವಿವಾರ ಕಲಾಪ ನಡೆಸಲು ಆಗಮಿಸಿ ದ್ದರು ಎಂಬ ಅಂಶ ಈಗ ಬಯಲಾಗಿದೆ.

ಚುನಾವಣೆಗೆ ಸಿದ್ಧ: ದೇಶದಲ್ಲಿ ಚುನಾವಣೆ ನಡೆಸುವ ಅಗತ್ಯ ಬಿದ್ದರೆ ಅದನ್ನು ನಿರ್ವ ಹಿಸಲು ಸಿದ್ಧವೆಂದು ಪಾಕಿಸ್ಥಾನದ ಚುನಾ ವಣ ಆಯೋಗ ಹೇಳಿದೆ. ಅದಕ್ಕೆ ಪೂರಕ  ವಾಗಿ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ತಮ್ಮ ಪಕ್ಷ ಪಾಕಿಸ್ಥಾನ್‌ ತೆಹ್ರಿಕ್‌-ಇ- ಇನ್ಸಾಫ್ನ ಕಾರ್ಯಕರ್ತರಿಗೆ ಸೂಚನೆ ನೀಡಿ, ಚುನಾವಣೆಗೆ ಸಿದ್ಧರಾಗುವಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:ಸಮನ್ಸ್‌ ಪ್ರಶ್ನಿಸಿ ಹೈ ಕೋರ್ಟ್‌ ಮೆಟ್ಟಿಲೇರಿದ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌

ದಾಖಲೆ ಸಲ್ಲಿಸಲು ಸೂಚನೆ: ಇನ್ನೊಂದೆಡೆ, ಭಾನುವಾರ ನ್ಯಾಷನಲ್‌ ಅಸೆಂಬ್ಲಿಯಲ್ಲಿ ನಡೆದ ಕಲಾಪಗಳ ವಿವರ ನೀಡುವಂತೆ ಸುಪ್ರೀಂಕೋರ್ಟ್‌ ಆದೇಶ ನೀಡಿದೆ.ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.

Advertisement

ಸಾಕ್ಷ್ಯವಿಲ್ಲ: ಅಮೆರಿಕ ಸರಕಾರ ತಮ್ಮ ಸರಕಾರ ಉರುಳಿಸಲು ಸಂಚು ರೂಪಿಸಿದೆ ಎಂದು ಮಾಜಿ ಪ್ರಧಾನಿ ಇಮ್ರಾನ್‌ ಆರೋಪಿಸಿದ್ದರು. ಆದರೆ, ಈ ಬಗ್ಗೆ ಮಾಹಿತಿಯಿಲ್ಲ ಅಮೆರಿಕ ಪಾಕಿಸ್ಥಾನದ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಿದ ಬಗ್ಗೆ ಸಾಕ್ಷ್ಯವಿಲ್ಲ ಎಂದು ಸೇನೆ ಸ್ಪಷ್ಟವಾಗಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next