Advertisement

ಅತಿ ಹೆಚ್ಚು ಸೋಂಕು ಪತ್ತೆಯಾದ ದೇಶಗಳ ಪಟ್ಟಿಯಲ್ಲಿ ಪಾಕಿಸ್ತಾನಕ್ಕೆ 30ನೇ ಸ್ಥಾನ..!

12:51 PM Jul 19, 2021 | Team Udayavani |

ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ಮತ್ತೊಮ್ಮೆ ಕೋವಿಡ್ 19 ಪ್ರಕರಣಗಳು ಹೆಚ್ಚುತ್ತಿರುವ ನಡುವೆ , ಅತಿ ಹೆಚ್ಚು ಪ್ರಕರಣಗಳು ಪತ್ತೆಯಾದ ದೇಶಗಳ ಜಾಗತಿಕ ಶ್ರೇಯಾಂಕದ ಪಟ್ಟಿಯಲ್ಲಿ ಪಾಕಿಸ್ತಾನ 30 ನೇ ಸ್ಥಾನದಲ್ಲಿದೆ ಎಂದು ಡಾನ್ ವರಿಮಾಡಿರುವುದಾಗಿ ಸುದ್ದಿ ಸಂಸ್ಥೆ ಎಎನ್ ಐ ತಿಳಿಸಿದೆ.

Advertisement

ಕಳೆದ ಒಂದು ವಾರದಲ್ಲಿ 15,000 ಕ್ಕೂ ಹೆಚ್ಚು ಕೋವಿಡ್ ಸೋಂಕಿನ ಹೊಸ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಕೋವಿಡ್ ನಿಂದ ಮೃತರಾದವರ ಸಂಖ್ಯೆ 22,781 ಸೇರಿದಂತೆ ಸುಮಾರು ಒಂದು ಮಿಲಿಯನ್ ಪ್ರಕರಣಗಳನ್ನು (989,275) ಪಾಕಿಸ್ತಾನ ವರದಿ ಮಾಡಿದೆ.

ಇದನ್ನೂ ಓದಿ : ಮುಂಗಾರು ಅಧಿವೇಶನ :  ಕೋವಿಡ್ ಬಗ್ಗೆ ಹೆಚ್ಚಿನ ಚರ್ಚೆಗೆ ಆದ್ಯತೆ : ಪ್ರಧಾನಿ ಮೋದಿ

ಕೋವಿಡ್ ಸೋಂಕು ಮತ್ತೆ ಉಲ್ಬಣಗೊಳ್ಳುತ್ತಿದೆ. ಎಲ್ಟಾ ರೂಪಾಂತರಿ ಸೋಂಕು ಹೆಚ್ಚಾಗಿ ದೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದು, ದೇಶದ ನಾಗರಿಕ ವ್ಯವಸ್ಥೆಯ ಮೇಲೆ ಸಂಪೂರ್ಣ ಪರಿಣಾಮ ಬೀರುತ್ತಿದೆ. ವೈದ್ಯಕೀಯ ಸೌಲಭ್ಯಗಳ ಬಗ್ಗೆಯೂ ಹೆಚ್ಚು ಗಮನ ನೀಡಬೇಕಾಗಿದೆ ಎಂದು ಪಾಕಿಸ್ತಾನ ವೈದ್ಯಕೀಯ ಸಂಘ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಏತನ್ಮಧ್ಯೆ, ಈ ಬಗ್ಗೆ ಪ್ರತಿಕ್ರಿಯಿಸಿದ ಪಿಎಂಎ ಪ್ರಧಾನ ಕಾರ್ಯದರ್ಶಿ ಡಾ. ಕೈಸರ್ ಸಜ್ಜಾದ್,  ಗುಜ್ರಾನ್ವಾಲಾ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಈಗಾಗಲೇ ಸ್ಮಾರ್ಟ್ ಲಾಕ್ ಡೌನ್ ನನ್ನು ವಿಧಿಸಲಾಗಿದೆ, ಅಲ್ಲಿ ಸಂಪೂರ್ಣವಾಗಿ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇಲ್ಲಿಯವರೆಗೆ, ಜಿಲ್ಲೆಯಲ್ಲಿ 390 ಕೋವಿಡ್ ರೋಗಿಗಳು ಸಾವನ್ನಪ್ಪಿದ್ದಾರೆ. ದೇಶವು ಈಗಾಗಲೇ ನಾಲ್ಕನೇ ಅಲೆಯ ಭೀತಿಯನ್ನು ಎದುರಿಸುತ್ತಿದೆ. ದೇಶದ ನಾಗರಿಕರು ಸರಕಾರ ಸೂಚಿಸಿದ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಅವರು ಹೇಳಿದ್ದಾರೆ.

Advertisement

ಕೋವಿಡ್ ಸೋಂಕಿನ ನಿರ್ಲಕ್ಷ್ಯ ಅಪಾಯಕಾರಿ “ಜವಾಬ್ದಾರಿಯುತ ಪ್ರಜೆಯಾಗಿರಿ ಮತ್ತು ನಿಮ್ಮನ್ನು ಮತ್ತು ಇತರರನ್ನು ಸಾಂಕ್ರಾಮಿಕ ರೋಗದಿಂದ ಸುರಕ್ಷಿತವಾಗಿರಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಿ” ಎಂದು ಅವರು ಹೇಳಿದ್ದಾರೆ.

ಲಸಿಕೆ ಅತ್ಯಂತ ರಕ್ಷಣಾತ್ಮಕವಾಗಿದ್ದರಿಂದ ಲಸಿಕೆಗೆ ಸಂಬಂಧಿಸಿದ ವದಂತಿಗಳಿಂದ ತಪ್ಪುದಾರಿಗೆಳೆಯದಂತೆ ಅವರು ಜನಸಾಮಾನ್ಯರಿಗೆ ಸೂಚಿಸಿದರು.

ನ್ಯಾಷನಲ್ ಕಮಾಂಡ್ ಅಂಡ್ ಆಪರೇಶನ್ಸ್ ಸೆಂಟರ್ (ಎನ್‌ ಸಿ ಒ ಸಿ) ಅಂಕಿಅಂಶಗಳ ಪ್ರಕಾರ, ಈ ವರ್ಷ ಮೇ 24 ರಂದು ಪಾಕಿಸ್ತಾನವು ಶೇಕಡಾ 5.21 ರಷ್ಟು ಕೋವಿಡ್ ಪಾಸಿಟಿವ್ ಸೋಂಕಿನ ಅನುಪಾತವನ್ನು ದಾಖಲಿಸಿದೆ. ಪ್ರಸ್ತುತ, ಸೋಂಕಿನ ಪ್ರಮಾಣವು ಶೇಕಡಾ 5.52 ರಷ್ಟಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.

ಇದನ್ನೂ ಓದಿ : 2020-21ರಲ್ಲಿ  ಬಿ ಎಸ್ ಎನ್ ಎಲ್ ನ ಒಟ್ಟು ನಷ್ಟ 7,441 ಕೋಟಿ ರೂ. ಗೆ ಇಳಿಮುಖ

Advertisement

Udayavani is now on Telegram. Click here to join our channel and stay updated with the latest news.

Next