ಇಸ್ಲಾಮಾಬಾದ್: ಪಾಕಿಸ್ಥಾನದಲ್ಲಿ ಬಂದಿಯಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ನೀಡಬೇಕಿರುವ ರಾಜತಾಂತ್ರಿಕ ಸೌಕರ್ಯವನ್ನು ಇದೇ ಶುಕ್ರವಾರದಿಂದ ಆರಂಭಿಸುವು ದಾಗಿ ಪಾಕಿಸ್ಥಾನ ಹೇಳಿದೆ.
ಜಾಧವ್‌ಗೆ ರಾಜತಾಂತ್ರಿಕ ನೆರ ವನ್ನು ಕಲ್ಪಿಸುವಂತೆ ಜು. 17ರಂದು ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯ (ಸಿಜೆಐ) ತೀರ್ಪು ನೀಡಿದ್ದ ಹಿನ್ನೆಲೆಯಲ್ಲಿ ಪಾಕಿಸ್ಥಾನ ಈ ಕ್ರಮ ಕೈಗೊಂಡಿದೆ.
ಈ ಹೊಸ ಬೆಳವಣಿಗೆಯಿಂದ, ಜಾಧವ್ ವಿರುದ್ಧ 2017ರ ಎಪ್ರಿಲ್ನಲ್ಲಿ ಪಾಕಿ ಸ್ಥಾನದ ಸೇನಾ ನ್ಯಾಯಾಲಯ ವಿಧಿಸಿರುವ ಗಲ್ಲುಶಿಕ್ಷೆಯ ವಿರುದ್ಧ ನ್ಯಾಯಾಂಗ ಹೋರಾಟ ನಡೆ ಸಲು ಜಾಧವ್‌ಗೆ, ಭಾರತಕ್ಕೆ ಅವಕಾಶ ಸಿಗಲಿದೆ. ಭಾರತದ ಪ್ರತಿಕ್ರಿಯೆ:
ಜಾಧವ್ ಅವರಿಗೆ ರಾಜತಾಂತ್ರಿಕ ಅನುಕೂಲ ಕಲ್ಪಿಸುವ ಬಗ್ಗೆ ಪಾಕ್ ಸಲ್ಲಿಸಿ ರುವ ಪ್ರಸ್ತಾವವನ್ನು ಪರಿಶೀಲಿಸ ಲಾಗುತ್ತಿದ್ದು, ಸದ್ಯದಲ್ಲೇ ಈ ಬಗ್ಗೆ ಪ್ರತ್ಯುತ್ತರ ನೀಡಲಾಗುತ್ತದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.
ಮತ್ತೂಬ್ಬ ಭಾರತೀಯನ ಬಂಧನ
ಜಾಧವ್ ಪ್ರಕರಣ ಸುದ್ದಿಯಲ್ಲಿ ರುವಂತೆಯೇ ಲಾಹೋರ್‌ನಿಂದ 400 ಕಿ.ಮೀ. ದೂರವಿರುವ ಡೇರಾ ಗಾಜಿ ಖಾನ್ ಜಿಲ್ಲೆಯಲ್ಲಿ ಭಾರತದ ಪರ ಗೂಢಚರ್ಯೆ ನಡೆಸುತ್ತಿರುವ ಆರೋಪದ ಮೇರೆಗೆ ರಾಜು ಲಕ್ಷ್ಮಣ್ ಎಂಬ ಭಾರತೀಯ ಪ್ರಜೆಯನ್ನು ಬಂಧಿಸಿರುವುದಾಗಿ ಪಾಕಿಸ್ಥಾನ ಘೋಷಿಸಿದೆ.