Advertisement

Drone: ಪಾಕ್‌ ಡ್ರೋನ್‌ಗಳ ಭಾರತ ಪ್ರವೇಶಕ್ಕೆ ಸದ್ಯದಲ್ಲೇ ಬ್ರೇಕ್‌?

11:57 PM Jan 03, 2024 | Team Udayavani |

ಹೊಸದಿಲ್ಲಿ: ಗಡಿಯಾಚೆ­ಯಿಂದ ಉಗ್ರ ರನ್ನು ಭಾರತಕ್ಕೆ ಕಳುಹಿಸು­ತ್ತಿದ್ದ ಪಾಕಿ ಸ್ಥಾನ, ಈಗ ತನ್ನ ಉಗ್ರಕೃತ್ಯ­ಗಳನ್ನು ನಡೆ ಸಲು ಬೇರೆ ಮಾರ್ಗ ಹಿಡಿದಿದೆ. ಅದನ್ನು ತಡೆಯಲು ಭಾರತವೂ ಅಷ್ಟೇ ಪ್ರಬಲ ವಾಗಿ ಸಿದ್ಧವಾಗಿದೆ. ಪ್ರಸ್ತುತ ಗಡಿಭಾಗ ಗಳಿಂದ ಡ್ರೋನ್‌ ಮೂಲಕ ಉದ್ದೀಪನ ದ್ರವ್ಯ­ಗಳು, ಶಸ್ತ್ರಾಸ್ತ್ರಗಳನ್ನು ಪಾಕ್‌ ಕಳುಹಿ ಸುತ್ತಿದೆ. ಅದನ್ನು ತಡೆಯಲು ಕೇಂದ್ರ ಸರ್ಕಾರ, ಡ್ರೋನ್‌ ನಿಗ್ರಹ ವ್ಯವಸ್ಥೆಯೊಂ ದನ್ನು ದೇಶೀಯ­ವಾಗಿಯೇ ಸಿದ್ಧಪಡಿಸಿದೆ. ಇನ್ನಾರು ತಿಂಗಳೊಳಗೆ ಗುಜರಾತ್‌- ಪಂಜಾಬ್‌ನಿಂದ ಹಿಡಿದು ಜಮ್ಮು ಕಾಶ್ಮೀರ ದವರೆಗೆ ಭಾರತ-ಪಾಕ್‌ ಗಡಿಯುದ್ದಕ್ಕೂ ಈ ವ್ಯವಸ್ಥೆ ಪೂರ್ಣಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಲಿದೆ.

Advertisement

ಪ್ರಸ್ತುತ ಪಾಕಿಸ್ಥಾನದ ಡ್ರೋನ್‌ಗಳನ್ನು ಆಗಾಗ ಭಾರತೀಯ ಯೋಧರು ಹೊಡೆದು ಉರುಳಿಸುತ್ತಲೇ ಇದ್ದಾರೆ. ಕೆಲವು ಕಣ್ತಪ್ಪಿಸಿ ಶಸ್ತ್ರಾಸ್ತ್ರಗಳನ್ನು ಇಳಿಸಿ, ಹಿಂತಿರುಗುತ್ತಿವೆ. ಇದನ್ನು ತಪ್ಪಿಸುವುದು ಈ ಡ್ರೋನ್‌ ನಿಗ್ರಹ ವ್ಯವಸ್ಥೆಯ ಉದ್ದೇಶ. ಇದರ ಮೂಲಕ ಶತ್ರುದೇಶದ ಡ್ರೋನ್‌ಗಳ ಮೇಲೆ ನಿಗಾ ಇಟ್ಟು, ಕ್ಷಣಮಾತ್ರದಲ್ಲಿ ಹೊಡೆದುರುಳಿಸಲು ಸಾಧ್ಯ­ವಾಗಲಿದೆ. ಸೇನೆಗೂ ಅಪರಿಚಿತ ಡ್ರೋನ್‌ ಚಲನೆಯ ಬಗ್ಗೆ ಮಾಹಿತಿ ರವಾನೆಯಾಗಲಿದೆ. ಭಾರತದ 3 ಕಂಪೆನಿಗಳು ಈ ವ್ಯವಸ್ಥೆಯನ್ನು ಸಿದ್ಧಪಡಿಸಿವೆ. ದೇಶದ ಆಯ್ದಭಾಗಗಳಲ್ಲಿ ಅವನ್ನು ಅಳವಡಿಸಿ, ಪ್ರಸ್ತುತ ಪರೀಕ್ಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next