Advertisement

ಎನ್‌ಐಎ ವಾಂಟೆಡ್‌ ಲಿಸ್ಟಲ್ಲಿ ಪಾಕ್‌ ರಾಜತಾಂತ್ರಿಕ ಅಧಿಕಾರಿ

07:00 AM Apr 10, 2018 | Team Udayavani |

ನವದೆಹಲಿ: ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮೊದಲ ಬಾರಿಗೆ ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿಯ ಹೆಸರು, ವಿವರವನ್ನು “ಮೋಸ್ಟ್‌ ವಾಂಟೆಡ್‌’ ಅಪರಾಧಿಗಳ ಪಟ್ಟಿಗೆ ಸೇರಿಸಿದೆ. ಜತೆಗೆ ಅವರ ಫೋಟೋ ಮತ್ತು ಇತರ ವಿವರಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಶ್ರೀಲಂಕಾ ರಾಜಧಾನಿ ಕೊಲೊಂಬೋದಲ್ಲಿರುವ ಪಾಕಿಸ್ತಾನ ಹೈಕಮಿಷನ್‌ ಕಚೇರಿಯಲ್ಲಿ ವೀಸಾ ಅಧಿಕಾರಿಯಾಗಿರುವ ಅಮೀರ್‌ ಜುಬೈರ್‌ ಸಿದ್ಧಿಕಿ ಅವರ ವಿವರಗಳನ್ನು ಪ್ರಕಟಿಸಲಾಗಿದೆ. ಜತೆಗೆ ಇನ್ನೂ ಇಬ್ಬರು ಪಾಕಿಸ್ತಾನಿ ಅಧಿಕಾರಿಗಳ ವಿವರಗಳನ್ನು ಅಪ್‌ಲೋಡ್‌ ಮಾಡಲಾಗಿದೆ. 

Advertisement

2014ರಲ್ಲಿ 26/11 ಮಾದರಿಯ ದಾಳಿಯನ್ನು ಚೆನ್ನೈನ ಅಮೆರಿಕ ಮತ್ತು ಬೆಂಗಳೂರಿನಲ್ಲಿರುವ ಇಸ್ರೇಲ್‌ ದೂತವಾಸಗಳ ಮೇಲೆ ಮಾಡಲು ಸಿದ್ಧಿಕಿ ಸಂಚು ರೂಪಿಸಿದ್ದರು. ಅದಕ್ಕೆ ದ.ಭಾರತದಲ್ಲಿರುವ ವಾಯುಸೇನೆ ಮತ್ತು ನೌಕಾಸೇನೆ ಕಮಾಂಡೋಗಳನ್ನು ಓಲೈಸಿಕೊಂಡು ಕೃತ್ಯವೆಸಗುವ ಉದ್ದೇಶ ಹೊಂದಿದ್ದರು ಎಂದು ಆರೋಪಿಸಲಾಗಿದೆ. ಈ ಬೆಳವಣಿಗೆಯ ಬೆನ್ನಿಗೇ ಎನ್‌ಐಎ ಮೂವರು ಪಾಕ್‌ ಅಧಿಕಾರಿಗಳ ವಿರುದ್ಧ ರೆಡ್‌ಕಾರ್ನರ್‌ ನೋಟಿಸ್‌ ನೀಡುವ ಬಗ್ಗೆ ಇಂಟರ್‌ಪೋಲ್‌ಗೆ ಮನವಿ ಸಲ್ಲಿಸಿದೆ.

ಎನ್‌ಐಎ ಮೂಲಗಳ ಪ್ರಕಾರ ಪಾಕಿಸ್ತಾನಿ ಅಧಿಕಾರಿಗಳು ಕೊಲಂಬೋದಲ್ಲಿ 2009ರಿಂದ 2016ರ ತನಕ ಸೇವೆ ಸಲ್ಲಿಸಿದ್ದಾರೆ. ಅರುಣ್‌ ಸೆಲ್ವರಾಜ್‌, ಶಿವಬಾಲನ್‌ ಮತ್ತು ತಮೀಮ್‌ ಅನ್ಸಾರಿ ಎಂಬ ಮೂವರ ಬಂಧನದ ಬಳಿಕ ಸಿದ್ದಿಕಿ ಲಂಕಾ ಮೂಲದ ಮುಹಮ್ಮದ್‌ ಸಾಕಿರ್‌ ಹುಸೈನ್‌ ಹಾಗೂ ಇತರರ ಬಗ್ಗೆಯೂ ಮಾಹಿತಿ ನೀಡಿದ್ದ ಎನ್ನಲಾಗಿದೆ. ಭಾರತದಲ್ಲಿ ಕಳ್ಳನೋಟು ಜಾಲದ ಜತೆಯೂ ಸಂಪರ್ಕ ಹೊಂದಿದ್ದರು ಎನ್ನುವುದನ್ನೂ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next