Advertisement

ಪೇಜಾವರ ಶ್ರೀ ಐತಿಹಾಸಿಕ ಸಂದೇಶ; ಟೀಕೆ ಅನಗತ್ಯ

03:45 AM Jun 28, 2017 | Harsha Rao |

ಬೆಳ್ತಂಗಡಿ/ ಸುಬ್ರಹ್ಮಣ್ಯ: ಶ್ರೀಕೃಷ್ಣ ಮಠದಲ್ಲಿ ಇಫ್ತಾರ್‌ ಕೂಟ ವಿವಾದ ಅನಗತ್ಯ. ಉಡುಪಿ ಪೇಜಾವರ ಶ್ರೀಗಳು ಸಮಾಜಕ್ಕೆ ಐತಿಹಾಸಿಕ ಸಂದೇಶ ಸಾರಿದ್ದಾರೆ. ಜಾತಿ – ಧರ್ಮಗಳ ನಡುವೆ ಸಮಾಜಕ್ಕೆ ವಿಶ್ವಾಸ ಮೂಡಿಸುವ ಕೆಲಸ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮತ್ತು ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

Advertisement

ಸಮಾಜದ ಜನರ ನಡುವಿನ ದ್ವೇಷದ ಮನೋ ಭಾವ ಹೋಗಲಾಡಿಸಲು ಇದು ಸಹಕಾರಿ. ಹಿಂದೂ ಸಂಘಟನೆಗಳು ಸಂಕುಚಿತ ಭಾವನೆ ಹೊಂದಿವೆ. ಪೇಜಾವರರ ಕಾರ್ಯಕ್ರಮ ಕುರಿತು ಮುತಾಲಿಕ್‌ ನಿಲುವು ಒಪ್ಪಲು ಸಾಧ್ಯವಿಲ್ಲ ಎಂದರು.

ಲಘು ಮಾತು ಬೇಡ
ಶೂದ್ರರು ಬಹುತೇಕ ಮಾಂಸಾಹಾರಿಗಳು. ಹಾಗಾದರೆ ಅವರಿಗೆ ಕೃಷ್ಣ ಮಠಕ್ಕೆ ಬಹಿಷ್ಕಾರ ಹಾಕುತ್ತಾರೆಯೇ? ಪೇಜಾವರರ ಬಗ್ಗೆ ಲಘುವಾಗಿ ಮಾತನಾಡಬೇಡಿ. ಮುತಾಲಿಕ್‌ಗೆ ದೇಶದ ರಕ್ಷಣೆ ಬೇಕಾಗಿಲ್ಲ. ಅವರಿಗೆ ಹಿಂದೂಗಳ ಬಗ್ಗೆ ಮಾತಾಡಲು ಪೇಟೆಂಟ್‌ ಕೊಟ್ಟದ್ದು ಯಾರು? ಸಮಾಜ ಒಡೆಯುವ ಇಂತಹ ಸಂಘಟನೆಗಳನ್ನು ಬ್ಯಾನ್‌ ಮಾಡಬೇಕು ಎಂದರು. ದ.ಕ.ದಲ್ಲಿ ನಡೆಯುವ ನೈತಿಕ ಪೊಲೀಸ್‌ಗಿರಿ ಖಂಡನೀಯ. ಅದನ್ನು ನಿಲ್ಲಿಸಲು ಸಂಘಟನೆಗಳ ಕೊಡುಗೆ ಏನು? ಎಂದು ಪ್ರಶ್ನಿಸಿದರು.

ಜೂ. 29ರಂದು ಸಭೆ
ಜೂ. 29ರಂದು ಹುಣಸೂರಿನಲ್ಲಿ ಮಹತ್ವದ ಸಭೆ ನಡೆಯಲಿದೆ. ಇದರಲ್ಲಿ ಎಚ್‌. ವಿಶ್ವನಾಥ್‌ ಸೇರ್ಪಡೆ ವಿಚಾರ ಪ್ರಸ್ತಾವ ಮಾಡಲಾಗುವುದು. ದೇವೇಗೌಡರ ಸಮ್ಮುಖದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಜನತಾ ಪರಿವಾರದ ನಾಯಕರು ಮತ್ತೆ ಪಕ್ಷಕ್ಕೆ ಬರುತ್ತಾರೆ. ಸೋಮವಾರ ಕೊಲ್ಲೂರಿನಲ್ಲಿ ಸಿಂಧ್ಯಾ ಅವರು ಭೇಟಿಯಾಗಿದ್ದಾರೆ. ಅವರೂ ಪಕ್ಷ ಸೇರಲು ಸಮ್ಮತಿ ಸೂಚಿಸಿದ್ದಾರೆ. ಅಭಿವೃದ್ಧಿಗೆ ಮಾರಕವಾಗುವುದನ್ನು ತಡೆಯಲು ಪಕ್ಷದ ಬಲವರ್ಧನೆ ಮಾಡಲಾಗುವುದು. ಚೆಲುವರಾಯಸ್ವಾಮಿ ವಿಚಾರ ಮುಗಿದು ಹೋದ ಅಧ್ಯಾಯ. ಅವರನ್ನು ಮತ್ತೆ ಸೇರಿಸುವ ಪ್ರಶ್ನೆಯೇ ಇಲ್ಲ. ಅಭ್ಯರ್ಥಿಗಳ ಪಟ್ಟಿ ಶೀಘ್ರ ಪ್ರಕಟ ಮಾಡ ಲಾಗುವುದು. ಚುನಾವಣೆಗೆ ಪಕ್ಷ ಸರ್ವ ಸನ್ನದ್ಧ ವಾಗಿದ್ದು ಪಕ್ಷದ ಬಲವರ್ಧನೆಗಾಗಿ ಮುಂದಿನ ತಿಂಗಳಿನಿಂದ ಪ್ರವಾಸ ಕೈಗೊಳ್ಳುತ್ತಿದ್ದು ದ.ಕ. ಜಿಲ್ಲೆಗೆ ಕೂಡ ಭೇಟಿ ನೀಡಲಿದ್ದೇನೆ ಎಂದರು.

ಗೆಲುವಿನ ವಿಶ್ವಾಸ
ಹಲವಾರು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ ಮುಂದಿನ ಚುನಾವಣೆಯಲ್ಲಿ ಸರಕಾರ ರಚಿ ಸಲು ಬೇಕಾದ ಸಂಪೂರ್ಣ ಆಶೀರ್ವಾದ ದೊರ ಕಲಿ ಎಂದು ಪ್ರಾರ್ಥಿಸಿದ್ದೇನೆ. ನಾಡಿನ ಆರು ಕೋಟಿ ಜನರ ಆಶೀರ್ವಾದದಿಂದ ಮುಂಬರುವ ಚುನಾ ವಣೆ ಯಲ್ಲಿ ಬಹುಮತ ಸಾಧಿಸಿ ಸರಕಾರ ರಚಿಸು ತ್ತೇನೆ ಎಂಬ ವಿಶ್ವಾಸ ಹೊಂದಿ ದ್ದೇನೆ. 116 ಸೀಟುಗಳನ್ನು ಗೆಲ್ಲುವ ಗುರಿ ಹೊಂದಿ ದ್ದೇನೆ. ಜನತೆಯ ಸಮಸ್ಯೆ ಪರಿಹರಿಸಲು ಬೇಕಾದ ವ್ಯವಸ್ಥೆಗಳನ್ನು ಮಾಡುವ ಸರಕಾರ ರಚಿಸುವ ಗುರಿಯನ್ನು ಹೊಂದಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.

Advertisement

ಕುಮಾರಸ್ವಾಮಿ ಅವರು ಧರ್ಮಸ್ಥಳದಲ್ಲಿ ತುಲಾಭಾರ ಸೇವೆ, ಸುಬ್ರಹ್ಮಣ್ಯದಲ್ಲಿ ಆಶ್ಲೇಷಾಬಲಿ ಸೇವೆ ಸಲ್ಲಿಸಿದರು. ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖೀಲ್‌ ಕುಮಾರಸ್ವಾಮಿ ಜತೆಗಿದ್ದರು.

ಪಕ್ಷದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಎಸ್‌.ಎಲ್‌. ಭೋಜೇ ಗೌಡ, ಜಿಲ್ಲಾ ಯುವ ಜನತಾ ದಳ ಅಧ್ಯಕ್ಷ ಅಕ್ಷಿತ್‌ ಸುವರ್ಣ, ರಾಜ್ಯ ಯುವ ಜನತಾ ದಳ ಮುಖಂಡ ಶ್ರೀನಾಥ್‌ ರೈ, ತಾಲೂಕು ಅಧ್ಯಕ್ಷ ಪ್ರವೀಣcಂದ್ರ ಜೈನ್‌ ಪಡಂಗಡಿ, ಜಿಲ್ಲಾ ಉಪಾಧ್ಯಕ್ಷ ಅಡಾRಡಿ ಜಗನ್ನಾಥ ಗೌಡ ಮೊದಲಾದವರಿದ್ದರು.

ಸುಬ್ರಹ್ಮಣ್ಯದಲ್ಲಿ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಸದಸ್ಯ ರಾದ ಕೇನ್ಯ ರವೀಂದ್ರನಾಥ ಶೆಟ್ಟಿ, ಮಾಧವ ಡಿ. ಸ್ವಾಗತಿಸಿದರು. ದೇಗುಲದ ಆಡಳಿತ ಮಂಡಳಿ ವತಿಯಿಂದ ಶಾಲು ಹೊದೆಸಿ ಗೌರವಿಸಲಾಯಿತು.

ಜೆಡಿಎಸ್‌ ಮುಖಂಡರಾದ ಎಂ.ಬಿ. ಸದಾಶಿವ, ಜಾಕೆ ಮಾಧವ ಗೌಡ, ಸಿ.ಪಿ. ಸೈಮನ್‌, ಸೋಮಸುಂದರ ಕೂಜುಗೋಡು, ಜ್ಯೋತಿ ಪ್ರೇಮಾನಂದ, ಶಿವರಾಮ ಚಿಲ್ತಡ್ಕ, ಹರ್ಷ ಮುಂಡಾಜೆ, ವಿನೂಪ್‌ ಮಲ್ಲಾರ ಮುಂತಾದವರು ಉಪಸ್ಥಿತರಿದ್ದರು.

6 ವರ್ಷ ಹಿಂದೆ…
6 ವರ್ಷಗಳ ಹಿಂದೆ ಇದೇ ದಿನ (2011ರಲ್ಲಿ ಜೂ. 27) ಕುಮಾರಸ್ವಾಮಿ ಅವರು ಅಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಜತೆಗಿನ ಆಣೆ ಪ್ರಮಾಣ ಸಂಘರ್ಷದ ಸಂದರ್ಭ ಭೇಟಿ ನೀಡಿದ್ದರು. ಆ ದಿನ ಆಣೆ ಪ್ರಮಾಣ ಯಾವುದೂ ನಡೆ ದಿರಲಿಲ್ಲ. ಇಬ್ಬರೂ ದೇವರಿಗೆ ಶತರುದ್ರಾಭಿಷೇಕ ಸೇವೆ ಮಾಡಿಸಿ ತೆರಳಿದ್ದರು.

ಸಾಲ ಮನ್ನಾ ಪ್ರಯೋಜನ ಶೂನ್ಯ
ರಾಜ್ಯ ಸರಕಾರ ಯಾವುದೋ ಒತ್ತಡಗಳಿಗೆ ಮಣಿದು ಅಂತಿಮ ವಾಗಿ ಕೃಷಿಕರ ಸಾಲ ಮನ್ನಾ ಘೋಷಣೆ ಮಾಡಿದೆ. ಆದರೆ ಅದಕ್ಕೆ ಸುಮಾರು 14 ಶರತ್ತುಗಳನ್ನು ವಿಧಿ ಸಿದೆ. ಆದ್ದರಿಂದ ಕೃಷಿಕರಿಗೆ ಸಾಲ ಮನ್ನಾದಿಂದ ಯಾವುದೇ ಪ್ರಯೋಜನವಿಲ್ಲ ಎಂದು ಎಚ್‌.ಡಿ. ಕುಮಾರಸ್ವಾಮಿ ಅವರು ಹೇಳಿದರು.

ಸಾಲ ಮನ್ನಾ ಘೋಷಣೆಯ ಬಳಿಕ ರಾಜ್ಯದಲ್ಲಿ ಸುಮಾರು ಐದಾರು ಮಂದಿ ರೈತರು ಆತ್ಮಹತ್ಯೆ ಮಾಡಿ ಕೊಂಡಿ ದ್ದಾರೆ. ಈ ರೀತಿಯ ಸಾಲ ಮನ್ನಾ ಘೋಷಣೆ ಯಿಂದ ರೈತರಿಗೆ ಯಾವುದೇ ಪ್ರಯೋಜನ ಇಲ್ಲ ಎಂಬುದು ಕಂಡುಬರುತ್ತದೆ. ಇದೊಂದು ಪರಿಣಾಮ ಕಾರಿ ಯಲ್ಲದ ಯೋಜನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next