ಕುಂಬಳೆ: ಪೈವಳಿಕೆ ಕಳಾಯಿಯಲ್ಲಿ ಜೂ. 2ರರಂದು ಸಹೋದರನಿಂದ ಹತ್ಯೆಗೈದ ಪ್ರಕರಣವು ಸ್ಥಳದ ಆಸ್ತಿಗಾಗಿ ಎಂಬುದಾಗಿ ತಿಳಿದು ಬಂದಿದೆ.
ಕಳಾಯಿ ನಾರಾಯಣ ನೋಂಡ ಮತ್ತು ಬೇಬಿ ಅವರ ಮೂವರು ಪುತ್ರರು ಒಂದೇ ಮನೆಯಲ್ಲಿದ್ದು ಅವಿವಾಹಿತರಾಗಿಯೇ ಉಳಿದಿದ್ದರು. ಇವರಿಗೆ ಕಳಾಯಿಯಲ್ಲಿ ಮತ್ತು ಪುತ್ತೂರಿನಲ್ಲಿ ಎರಡು ಎಕ್ರೆಗೂ ಮಿಕ್ಕಿ ಸ್ಥಳವಿದ್ದು ಸಹೋದರರು ಪರಸ್ಪರ ಜಾಗದ ಪಾಲು ಹಂಚಿಕೊಳ್ಳಲು ಆಗಾಗ ತಗಾದೆ ಎತ್ತುತ್ತಿದ್ದರು. ಆದರೆ ಪ್ರಭಾಕರ ನೋಂಡ (42) ಅವರು ಸ್ಥಳದ ಪಾಲು ಮಾಡಲು ಒಪ್ಪದ ಕಾರಣ ಸಹೋದರ ಜಯರಾಮ ನೋಂಡ ನ್ನು ಪ್ರಭಾಕರ ನೋಂಡನನ್ನು ಇರಿದು ಹತ್ಯೆ ಮಾಡಿದ್ದ. ಕಳೆದ 1994ರಲ್ಲಿ ಹಿರಿಯ ಸಹೋದರ ಬಾಲಕೃಷ್ಣ ನೋಂಡ ಅವರನ್ನು ಕೊಲೆಗೈದ ಪ್ರಕರಣದಲ್ಲಿಯೂ ಜಯರಾಮ ನೋಂಡ ಆರೋಪಿಯಾಗಿದ್ದನು.