Advertisement

ಚಿತ್ರಕಲಾ ಪರಿಷತ್‌ನಲ್ಲಿ ಕೌತುಕ ಪ್ರಪಂಚ ಅನಾವರಣ

11:49 AM Feb 04, 2017 | Team Udayavani |

ಬೆಂಗಳೂರು: ವಿಶ್ವದ ಮೊದಲ ಅಪಘಾತ ಪ್ರಕರಣ ಯಾವುದು? ಜಗತ್ತಿನ ಮೊದಲ ರೇಡಿಯೋ ಹೇಗಿರಬಹುದು? ಈಸ್ಟ್‌ ಇಂಡಿಯಾ ಕಂಪೆನಿಯಲ್ಲಿ ಚಲಾವಣೆಯಲ್ಲಿದ್ದ ನಾಣ್ಯಗಳ ರೂಪ ಹೇಗಿತ್ತು ? 500 ವರ್ಷಗಳ ಕ್ಯಾಲೆಂಡರ್‌ ಕಂಡಿದ್ದೀರಾ? – ಇಂತಹ ಹತ್ತಾರು ಕುತೂಹಲಕಾರಿ ಸಂಗತಿಗಳಿಗೆ ಚಿತ್ರಕಲಾ ಪರಿಷತ್ತಿನಲ್ಲಿರುವ ದಶರಥ್‌ ಸಿಂಗ್‌ ಅವರ “ವಿಸ್ಮಯ ಪ್ರಪಂಚ’ದಲ್ಲಿ ಉತ್ತರ ಸಿಗಲಿದೆ.

Advertisement

ನಿವೃತ್ತ ಔಷಧ ನಿಯಂತ್ರಕ ದಶರಥ್‌ ಸಿಂಗ್‌ ಕಳೆದ 50 ವರ್ಷಗಳಲ್ಲಿ ತಾವು ಸಂಗ್ರಹಿಸಿರುವ ವಿನೂತನ ಮತ್ತು ವೈವಿಧ್ಯಮಯ ವಸ್ತುಗಳನ್ನು ಚಿತ್ರಕ
ಲಾ ಪರಿಷತ್ತಿನಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಮೂರು ದಿನಗಳ ಈ ಪ್ರದರ್ಶನದಲ್ಲಿ ಕಂಡು ಕೇಳಿರದ ಹತ್ತು ಹಲವು ಕುತೂಹಲಕಾರಿ ಸಂಗತಿಗಳನ್ನು ಕಾಣಬಹುದು. 

ಮೊಟ್ಟಮೊದಲ ಚುನಾವಣೆಯಲ್ಲಿ ಬಳಸಿದ ಮತಪೆಟ್ಟಿಗೆ, ಎಂಟು ಸಾವಿರಕ್ಕೂ ಹೆಚ್ಚು ವಿವಿಧ ಪ್ರಕಾರದ ಆಮಂತ್ರಣಗಳು, ಪಾರಂಪರಿಕ ವಸ್ತುಗಳು, ಬ್ರಿಟಿಷರು ಬಳಸುತ್ತಿದ್ದ ಸಿಗರೇಟ್‌ ಪೆಟ್ಟಿಗೆ ಸೇರಿದಂತೆ ದೈನಂದಿನ ವಸ್ತುಗಳು, ಪಿಂಗಾಣಿ ಬೊಂಬೆಗಳು, ಹಿತ್ತಾಳೆ ತಕ್ಕಡಿ, ಟಾರ್ಚ್‌ಗಳು, ವೃತ್ತಪತ್ರಿಕೆಯ ಕಟಿಂಗ್‌ಗಳು, ಗ್ರಾಮಾಫೋನ್‌, ಹಳೆಯ ರೇಡಿಯೊ, ಮೈಸೂರು ಅರಸರ ವಂಶಾವಳಿಯ ಮೇಲೆ ಬೆಳಕುಚೆಲ್ಲುವ ಲೇಖನಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ.  

ಗಿನ್ನೀಸ್‌ ದಾಖಲೆಯ ಲಂಬೂ, ವಿಶ್ವದ ಅತಿ ಕುಳ್ಳ ವ್ಯಕ್ತಿ, ದಪ್ಪ ಮನುಷ್ಯ, ಅತಿ ಚಿಕ್ಕ ಕರಡಿ, ಕೆಆರ್‌ಎಸ್‌ ಕಥನ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ನಡೆದುಬಂದ ಹಾದಿಯ ಪರಿಚಯವೂ ಈ “ವಿಸ್ಮಯ ಪ್ರಪಂಚ’ದಲ್ಲಿದೆ.  ಶುಕ್ರವಾರ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್‌. ಶಂಕರ್‌ ಈ ಪ್ರದರ್ಶನಕ್ಕೆ ಚಾಲನೆ ನೀಡಿದರು.  ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಪ್ರೊ.ಎಂ.ಜೆ. ಕಮಲಾಕ್ಷಿ, ಮಾಜಿ ಸಚಿವ ಕೃಷ್ಣಪ್ಪ, ಪ್ರಭಾಕರ್‌ ಉಪಸ್ಥಿತರಿದ್ದರು.

ಪ್ರದರ್ಶನ: ಶುಕ್ರವಾರದಿಂದ ಭಾನುವಾರದವರೆಗೆ ನಿತ್ಯ ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ.

Advertisement

ನನ್ನ ಅಜ್ಜ ಹಲವು ಹಳೆಯ ನಾಣ್ಯಗಳನ್ನು ನನಗೆ ನೀಡಿದ್ದರು. ಅದೇ ನನಗೆ ಸ್ಫೂರ್ತಿಯಾಯಿತು. ಈ ಸಾಧನೆಯಲ್ಲಿ ಕುಟುಂಬದ ಸದಸ್ಯರು ಸೇರಿದಂತೆ ಅನೇಕರ ಸಹಕಾರವಿದೆ. 
-ದಶರಥ್‌ ಸಿಂಗ್‌, ಪರದರ್ಶನ ಆಯೋಜಕ 

Advertisement

Udayavani is now on Telegram. Click here to join our channel and stay updated with the latest news.

Next