Advertisement

ಕೂಡಲ ಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ

04:24 PM Dec 30, 2020 | Team Udayavani |

ಕಲಬುರಗಿ: ರಾಜ್ಯ ಸರ್ಕಾರ ಲಿಂಗಾಯತ ದೀಕ್ಷ-ಪಂಚಮಸಾಲಿ ಸಮಾಜದವರಿಗೆ “2-ಎ’ ಮೀಸಲಾತಿಕಲ್ಪಿಸಬೇಕು ಹಾಗೂ ಎಲ್ಲ ಉಪಪಂಗಡಗಳನ್ನು ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿ ಜ.14 ರಿಂದ ಕೂಡಲ ಸಂಗಮದಿಂದ ಬೆಂಗಳೂರಿನ ವಿಧಾನಸೌಧದ ವರೆಗೆ ಪಾದಯಾತ್ರೆ ಪ್ರಾರಂಭವಾಗಲಿದೆ ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

Advertisement

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಪಾದಯಾತ್ರೆಯಪೂರ್ವಭಾವಿ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತಸಮುದಾಯದಲ್ಲಿ 104 ಉಪ ಪಂಡಗಗಳುಇವೆ. ಹೀಗಾಗಿ ಸರ್ಕಾರಿ ಉದ್ಯೋಗ, ಉನ್ನತಶಿಕ್ಷಣಕ್ಕೆ ಮೀಸಲಾತಿ ಸೌಲಭ್ಯ ಸಿಗದೆ ಪ್ರತಿಭಾವಂತ ಯುವಕರು ವಂಚಿತರಾಗುವಂತೆ ಆಗಿದೆ ಎಂದರು. ರಾಜ್ಯದಲ್ಲಿ ದೀಕ್ಷ-ಪಂಚಮಸಾಲಿ ಸಮಾಜವನ್ನು ಸಾಮಾನ್ಯ ವರ್ಗದಿಂದ “2-ಎ’ ವರ್ಗಕ್ಕೆ ಸೇರಿಸಿ ಮೀಸಲಾತಿ ಕಲ್ಪಿಸಬೇಕು. ರಾಜ್ಯದಲ್ಲಿ ಬಿ.ಎಸ್‌. ಯಡಿಯೂರಪ್ಪ ಸೇರಿ ಇದುವರೆಗೆ ಲಿಂಗಾಯತ ಸಮುದಾಯದ ಎಂಟು ಜನಮುಖ್ಯಮಂತ್ರಿ ಆಗಿದ್ದಾರೆ. ಯಡಿಯೂರಪ್ಪನವರು ಅಧಿಕಾರಕ್ಕೆ ಬರುವಲ್ಲಿ ಲಿಂಗಾಯತರ ಕೊಡುಗೆ ಅಪಾರವಾಗಿದೆ. ಅವರು ದೀಕ್ಷ-ಪಂಚಮಸಾಲಿ ಸಮಾಜವನ್ನು “2-ಎ’ ಪಟ್ಟಿಗೆ ಸೇರಿಸಲೇಬೇಕು. ದೇವರಾಜು ಅರಸು ಅವರು ಹಿಂದುಳಿದ ಅನೇಕವರ್ಗಗಳಿಗೆ ಮೀಸಲಾತಿ ಕಲ್ಪಿಸಿದಂತೆ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಮೀಸಲಾತಿಗೆ ಆಗ್ರಹಿಸಿ ಅಕ್ಟೋಬರ್‌ನಲ್ಲಿ ಬೆಳಗಾವಿಯ ಸುವರ್ಣಸೌಧ ಎದುರು ಉಪವಾಸಸತ್ಯಾಗ್ರಹ ನಡೆಸಲಾಗಿತ್ತು. ಆಗ ಸಿಎಂ ಸಂಪುಟದಲ್ಲಿ ಈ ವಿಷಯ ಮಂಡಿಸುವುದಾಗಿ ಭರವಸೆ ನೀಡಿದ್ದರು.ಆದರೆ, ಚರ್ಚೆಗೆ ಬಂದಿಲ್ಲ. ಹೀಗಾಗಿ ಕೂಡಲಸಂಗಮದಿಂದ ಬೆಂಗಳೂರಿನ ವಿಧಾನಸೌಧದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.ಕಲ್ಯಾಣಪ್ಪ ಪಾಟೀಲ ಮಳಖೇಡ, ಅರುಣಕುಮಾರಪಾಟೀಲ ಕೊಡಲಹಂಗರಗಾ, ಡಾ| ಎಸ್‌.ಎಸ್‌.ಪಾಟೀಲ, ಗಣೇಶ ಅಣಕಲ್‌, ಮಚ್ಛೇಂದ್ರನಾಥ ಮೂಲಗೆ ಇದ್ದರು.

ಸಂಕ್ರಾತಿ ದಿನದಿಂದ ಕೂಡಲ ಸಂಗಮದಿಂದ ಬೆಂಗಳೂರಿನವರೆಗೆಪಾದಯಾತ್ರೆ ಆರಂಭವಾಗಲಿದೆ.ಮೊದಲ ದಿನ ಎರಡು ಲಕ್ಷಜನರು ಸೇರಿಸುವ ಉದ್ದೇಶಇದೆ. ಈ ನಡುವೆ ಪಾದಯಾತ್ರೆ ಆರಂಭಿಸಬೇಡಿ ಎಂದು ಮುಖ್ಯಮಂತ್ರಿಯಡಿಯೂರಪ್ಪ ಸೋಮವಾರ ಕರೆ ಮಾಡಿ ಮನವಿ ಮಾಡಿದ್ದಾರೆ. ಸಚಿವ ಸಿ.ಸಿ.ಪಾಟೀಲನೇತೃತ್ವದಲ್ಲಿ ನಿಯೋಗವನ್ನು ಪೀಠಕ್ಕೆಕಳುಹಿಸುತ್ತೇವೆ ಎಂದಿದ್ದಾರೆ. -ಬಸವಜಯ ಮೃತ್ಯುಂಜಯ ಸ್ವಾಮೀಜಿ, ಕೂಡಲಸಂಗಮ

Advertisement

Udayavani is now on Telegram. Click here to join our channel and stay updated with the latest news.

Next