ಹಳೆಯಂಗಡಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಪಡುಪಣಂಬೂರು ಪೆಟ್ರೋಲ್ ಪಂಪಿನ ಬಳಿ ನಡೆದ ಅಪಘಾತದಲ್ಲಿ ಇಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ಬುಧವಾರ ಮಧ್ಯರಾತ್ರಿ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳನ್ನು ಮಧ್ಯ ಪ್ರದೇಶದ ಬಬುಲು (23) ಅಚಲ್ ಸಿಂಗ್ (30) ಎಂದು ಗುರುತಿಸಲಾಗಿದೆ. ಮತ್ತೋರ್ವ ಕೇರಳ ನಿವಾಸಿ ಅನಿಶ್ (42) ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮಧ್ಯಪ್ರದೇಶದ ಇಂದೋರ್ನಿಂದ ಕೇರಳಕ್ಕೆ ಪಡುಪಣಂಬೂರು ಹೆದ್ದಾರಿಯಾಗಿ ಸಾಗುತ್ತಿದ್ದಾಗ ಲಾರಿ ಚಕ್ರ ಪಂಕ್ಚರ್ ಆಗಿ ಕೆಟ್ಟು ನಿಂತಿತ್ತು.
ಇದನ್ನ ದುರಸ್ತಿ ಮಾಡಲು ಲಾರಿಯಲ್ಲಿದ್ದ ಮೂವರು ಸೇರಿ ಇಳಿದಿದ್ದು ಟಯರ್ ಬದಲಿ ಮಾಡುವಾಗ ಉಡುಪಿ ಕಡೆಯಿಂದ ಏಕಾಏಕಿ ಬಂದ ಕಾರು ಮೂವರಿಗೂ ಡಿಕ್ಕಿ ಹೊಡೆದಿದೆ ಡಿಕ್ಕಿಯ ರಭಸಕ್ಕೆ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿ ಓರ್ವ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.
ಡಿಕ್ಕಿ ಹೊಡೆದ ಕಾರು ನಿಲ್ಲಿಸದೆ ಪರಾರಿಯಾಗಿದೆ. ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
Related Articles
ಇದನ್ನೂ ಓದಿ: ದಕ್ಷಿಣ ಕನ್ನಡದ ಎಸ್‌ಪಿ ಆಗಿ ಅಮಟೆ ವಿಕ್ರಮ್ ಅಧಿಕಾರ ಸ್ವೀಕಾರ