Advertisement

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ರಥಾರೋಹಣ ಸಂಪನ್ನ

10:01 PM Mar 21, 2023 | Team Udayavani |

ಪಡುಬಿದ್ರಿ: ಇತಿಹಾಸ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವದ ಪ್ರಯುಕ್ತ ಮಾ. 21ರಂದು ಮಧ್ಯಾಹ್ನ ರಥಾರೋಹಣ ಸಂಪನ್ನಗೊಂಡಿತು.

Advertisement

ವರ್ಷಾವಧಿ ಉತ್ಸವದ ಧಾರ್ಮಿಕ ವಿಧಿವಿಧಾನಗಳು ಶ್ರೀ ಕ್ಷೇತ್ರದ ತಂತ್ರಿಗಳಾದ ವೇ|ಮೂ| ಕಂಬ್ಲಕಟ್ಟ ಶ್ರೀ ಶಿವರಾಜ ರಾಧಾಕೃಷ್ಣ ಉಪಾಧ್ಯಾಯರ ನೇತೃತ್ವದಲ್ಲಿ ಜರಗಿದವು.

ನಿತ್ಯಪೂಜೆ, ನಿತ್ಯಬಲಿ, ಪಲ್ಲಪೂಜೆ, ರಥಶುದ್ಧಿಗಳ ಬಳಿಕ ರಥಾರೋಹಣ ನಡೆಯಿತು. ಶ್ರೀ ದೇಗುಲದ ಆನುವಂಶಿಕ ಮೊಕ್ತೇಸರರಾದ ಪಡುಬಿದ್ರಿಬೀಡು ರತ್ನಾಕರ ರಾಜ ಅರಸು ಕಿನ್ಯಕ್ಕ ಬಲ್ಲಾಳ್‌ ಮತ್ತು ಪಿ. ಭವಾನಿಶಂಕರ ಹೆಗ್ಡೆ ಹಾಗೂ ದೇವಸ್ಥಾನದ ಅರ್ಚಕರಾದ ಎಚ್‌. ಪದ್ಮನಾಭ ಭಟ್‌, ವೈ. ಗುರುರಾಜ ಭಟ್‌, ಕೃಷ್ಣಾಪುರ ಶಾಖಾ ಮಠದ ವೇ| ಮೂ| ಶ್ರೀನಿವಾಸ ಉಪಾಧ್ಯಾಯ, ಬ್ರಹ್ಮಸ್ಥಾನದ ಪಾತ್ರಿ ಸುರೇಶ್‌ ರಾವ್‌, ಗುರಿಕಾರ ಮುರುಡಿ ಜಗದೀಶ ರಾವ್‌, ನಡಾÕಲು ಗುತ್ತು ಶ್ರೀನಾಥ್‌ ಹೆಗ್ಡೆ, ಶೇಖರ ಶೆಟ್ಟಿ, ಅನಿಲ್‌ ಕುಮಾರ್‌ ಶೆಟ್ಟಿ ಪೇಟೆಮನೆ, ವಿಜಯ ಹೆಗ್ಡೆ, ಗುತ್ತಿನಾರ್‌ ಕೃಷ್ಣ ಶೆಟ್ಟಿ, ಗುತ್ತಿನಾರ್‌ ವಿಶುಕುಮಾರ್‌ ಶೆಟ್ಟಿಬಾಲ್‌, ಮಿಥುನ್‌ ಹೆಗ್ಡೆ, ನವೀನ್‌ಚಂದ್ರ ಶೆಟ್ಟಿ, ಪ್ರಕಾಶ್‌ ಶೆಟ್ಟಿ ಪಾದೆಬೆಟ್ಟು, ಪ್ರಶಾಂತ್‌ ಶೆಣೈ, ಸಂತೋಷ್‌ ಕುಮಾರ್‌ ಶೆಟ್ಟಿ ಪಲ್ಲವಿ, ಪ್ರಕಾಶ್‌ ಶೆಟ್ಟಿ ಪಡುಹಿತ್ಲು, ಮಾಧವ ಶೆಟ್ಟಿ, ರಮಾಕಾಂತ ರಾವ್‌, ಶಿವಪ್ರಸಾದ ಶೆಟ್ಟಿ ಎಲ್ಲದಡಿ, ಅಶೋಕ್‌ ಸಾಲ್ಯಾನ್‌, ಸುಕುಮಾರ್‌ ಶ್ರೀಯಾನ್‌, ಸದಾಶಿವ ಪಡುಬಿದ್ರಿ, ಶ್ರೀ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್‌ ಕುಮಾರ್‌ ಶೆಟ್ಟಿ, ಮಾಗಣೆಯವರು, ಸೀಮೆಯ, ಊರ ಪರವೂರ ಭಕ್ತರು ಉಪಸ್ಥಿತರಿದ್ದರು.

ಮಧ್ಯಾಹ್ನ ಸಹಸ್ರಾರು ಮಂದಿ ಭಕ್ತರು ಶ್ರೀ ದೇವರ ಅನ್ನ ಪ್ರಸಾದವನ್ನು ಸ್ವೀಕರಿಸಿದರು. ರಾತ್ರಿ ಶ್ರೀಮನ್ಮಹಾರಥೋತ್ಸವ, ಭೂತಬಲಿ, ಕವಾಟಬಂಧನ ಇತ್ಯಾದಿಗಳು ನೆರವೇರಿದವು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next