Advertisement
ಹಿರಿಯ ನಾಗರಿಕರೇ ಹೆಚ್ಚಾಗಿ ಬಳಸಿಕೊಳ್ಳುವ ಗ್ರಂಥಾಲಯ ಮಾಳಿಗೆ ಯನ್ನೇರಿದಾಗ ಗ್ರಂಥಾಲಯಕ್ಕೆ ಬಂದು ಹೋಗುವವರ ಮತ್ತು ಓದುವವರ ಸಂಖ್ಯೆ ಕುಂಠಿತವಾಗತೊಡಗಿತು. ವಾರದ ಸಂತೆ ದಿನ, ಮಂಗಳವಾರವಂತೂ ಅಲ್ಲಿನ ಶಬ್ದ ಮಾಲಿನ್ಯದಿಂದಲೇ ಗ್ರಂಥಾಲಯವನ್ನು ಮುಚ್ಚಲೇಬೇಕಾದ ಅನಿವಾರ್ಯತೆ ಹಾಗೂ ಮಳೆಗಾಲದಲ್ಲಿ ಗ್ರಂಥಾಲಯದ ಒಳಗೆ ನೀರು ಸುರಿಯತೊಡಗಿ ಮುಂದೆ ಮಾಡಿನ ಸಿಮೆಂಟ್ ಶೀಟಿಗೆ ಹಾನಿಯಾದಾಗ ಅನಿವಾರ್ಯವಾಗಿ ಇದನ್ನು ಪಂಚಾಯತ್ ಇರುವಲ್ಲಿಗೇ ವಾಪಾಸು ಬರಗೊಡಲಾಯಿತು.
ಗ್ರಂಥಾಲಯಕ್ಕೆ ಕಟ್ಟಡದ ಸಮಸ್ಯೆ ನೀಗುವ ನಿಟ್ಟಿನಲ್ಲಿ ನೂತನ ಪಂಚಾ¿åತ್ ಕಟ್ಟಡದಲ್ಲೇ ಸ್ಥಳಾವಕಾಶ ನೀಡಬೇಕಾದುದು ವಾಸ್ತವ. ಆದರೆ ಗ್ರಂಥಾಲಯಕ್ಕೆ ಗ್ರಾ. ಪಂ. ಕಚೇರಿ ಕಟ್ಟಡದಲ್ಲಿಯೇ ಅವಕಾಶ ಕಲ್ಪಿಸಲು ಒಳಗೊಳಗೆನೇ ಅಪಸ್ವರವೂ ಕಾಣಿಸಹತ್ತಿದೆ.
Related Articles
ದಿನಪತ್ರಿಕೆ (ಉದಯವಾಣಿ) ಯನ್ನಷ್ಟೇ ಕೊಂಡುಕೊಳ್ಳಲಾಗುತ್ತಿದೆ. ಉಳಿದ ದಿನ ಪತ್ರಿಕೆಗಳು, ಪಾಕ್ಷಿಕ, ಮಾಸಿಕಗಳಿಗೂ ಇಲ್ಲಿ ಅವಕಾಶಗಳನ್ನು ಮಾಡಿಕೊಡಬೇಕಿದೆ. ಸದ್ಯ ತಾತ್ಕಾಲಿಕ ನೆಲೆಯನ್ನು ಕಂಡುಕೊಂಡಿರುವ ಪಡುಬಿದ್ರಿ ಗ್ರಂಥಾಲಯಕ್ಕೆ ಶಾಶ್ವತ ವ್ಯವಸ್ಥೆಯಾಗಬೇಕು.
Advertisement
ಈಗಲೂ ಮೂಟೆಗಟ್ಟಲೆ ಪುಸ್ತಕಗಳು ಗ್ರಂಥಾಲಯಕ್ಕೆ ಬಂದಿದ್ದರೂ ಬಿಡಿಸಲಾಗದ ಗಂಟಲ್ಲಿ ಇವುಗಳಿವೆ. ಓದುಗರಿಗೆ ಅನುಕೂಲವಾಗುವ ರೀತಿಯಲ್ಲಿ ಬದಲಾವಣೆಗಳಾ ಗಬೇಕಿರುವುದು ಅನಿವಾರ್ಯ.
ಗ್ರಂಥಾಲಯ ಗ್ರಾ. ಪಂ. ಅಧೀನಕ್ಕೆಗ್ರಾ. ಪಂ. ನ ನೂತನ ಕಟ್ಟಡದಲ್ಲಿ ಗ್ರಂಥಾಲಯ ಕಚೇರಿಗೂ ಗ್ರಾಮಕರಣಿಕರ ಕಚೇರಿಯನ್ನು ವಿಭಾಗಿಸಿ ಅವಕಾಶ ಕಲ್ಪಿಸಲಾಗುತ್ತದೆ. ರಾಜ್ಯ ಸರಕಾರ ಗ್ರಂಥಾಲಯ ಇಲಾಖೆಯ ಸುಪರ್ದಿಯಲ್ಲಿದ್ದ ಗ್ರಂಥಾಲಯಗಳನ್ನು ಗ್ರಾಮೀಣಾಭಿವೃದ್ಧಿ ಇಲಾಖೆಯ ಮೂಲಕ ಈಗಾಗಲೇ ಗ್ರಾ. ಪಂ. ಅಧೀನಕ್ಕೆ ವಹಿಸಿದೆ.
– ಪಂಚಾಕ್ಷರಿ ಸ್ವಾಮಿ ಕೆರಿಮಠ,
ಪಡುಬಿದ್ರಿ ಗ್ರಾ. ಪಂ. ಪಿಡಿಒ. -ಆರಾಮ