Advertisement
1.5 ಕೋ.ರೂ. ವೆಚ್ಚದ ಅಂದಾಜಿನೊಂದಿಗೆ ಕಾಮಗಾರಿ ಶುರುವಾಗಿದ್ದು, ಎರಡು ಮಹಡಿ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಆದರೆ ಇನ್ನೂ ಪೂರ್ಣಗೊಂಡಿಲ್ಲ. ಗ್ರಾಮವಿಕಾಸ ಯೋಜನೆಯಡಿ ಸಿಗಬೇಕಿದ್ದ ಅನುದಾನ ಲಭ್ಯವಾಗದ ಕಾರಣ ಕಾಮಗಾರಿ ಕುಂಟುತ್ತಿದೆ.
ಸದ್ಯ ಪಂಚಾಯತ್ ಬಾಡಿಗೆ ಕಟ್ಟಡದಲ್ಲಿದ್ದು, 18 ಸಾವಿರ ರೂ. ಮಾಸಿಗೆ ಬಾಡಿಗೆ ಭರಿಸುತ್ತಿದೆ. ಆದರೆ 2ನೇ ಮಹಡಿಯಲ್ಲಿ ಕಚೇರಿ ಇರುವುದರಿಂದ ಅಶಕ್ತರು, ಹಿರಿಯ ನಾಗರಿಕರಿಗೆ ಇದು ಸಮಸ್ಯೆಯಾಗಿದೆ. ಈ ಬಗ್ಗೆ ಉದಯವಾಣಿ ಹಿಂದೆಯೇ ವರದಿ ಮಾಡಿತ್ತು. ಪೂರ್ಣಗೊಳಿಸಲು ಹೆಣಗಾಟ
ಗ್ರಾಮ ಸ್ವರಾಜ್ ಯೋಜನೆಯ 10 ಲಕ್ಷ ರೂ. ಅನುದಾನ ಮತ್ತು ಗ್ರಾಮ ವಿಕಾಸ ಯೋಜನೆಯಡಿಯ 10 ಲಕ್ಷ ರೂ. ಗಳನ್ನು ಬಳಸಿಕೊಂಡು ಪಂಚಾಯತ್ ಕಟ್ಟಡದ ನೆಲ ಮಹಡಿಯ ಕೆಲಸ ಮುಗಿಸುವ ಇರಾದೆಯನ್ನು ಆಡಳಿತ ಹೊಂದಿದೆ. ಆದರೆ ಕೆಲಸ ಸಕಾಲದಲ್ಲಿ ಪೂರ್ಣಗೊಳಿಸಲು ಹೆಣಗಾಡ
ಬೇಕಾಗಿದೆ. ನೆಲ ಮಹಡಿ ಮತ್ತು ಮೇಲಿನ ಎರಡಂತಸ್ತುಗಳ ಸಹಿತ ಮೇಲ್ಮಹಡಿಯಲ್ಲಿ ಒಳಾಂಗಣ ಬ್ಯಾಡ್ಮಿಂಟನ್ ಕೋರ್ಟ್ ನಿರ್ಮಾಣಕ್ಕೂ ಕನಸು ಕಂಡಿದ್ದ ಪಂಚಾಯತ್ ಈಗ ಕಟ್ಟಡ ನಿರ್ಮಾಣ ಪೂರ್ಣಗೊಳಿಸಲು ಸಮಸ್ಯೆ ಎದುರಿಸುವಂತಾಗಿದೆ.
Related Articles
ಯುಪಿಸಿಎಲ್ ತನ್ನದೇ ಯೋಜನೆ ಯಂತೆ ಕಟ್ಟಡದ ಕೆಲಸ ಕಾರ್ಯಗಳನ್ನು ಮಾಡಿತ್ತು. ಆದರೆ ಒಳಗಡೆ ಗೋಡೆ ನಿರ್ಮಾಣ ಬೇಡ. ಕಚೇರಿ ಸ್ವರೂಪಕ್ಕೆ ಅನು ಗುಣವಾಗಿ ಗಾಜು-ಫೈಬರ್ ಮೂಲಕ ವಿಭಾಗ ನಿರ್ಮಿಸುವಂತೆ ಪಂಚಾಯತ್ ಗುತ್ತಿಗೆದಾರರನ್ನು ಕೇಳಿಕೊಂಡಿತ್ತು. ಅದರಂತೆ ಒಳಾಂಗಣ ಗೋಡೆ ಕೆಡವಿದರೂ ಸಿಎಸ್‌ಆರ್ ನಿಧಿಯಿಂದ ಕೆಲಸಗಳಿಗೆ ಹಣ ಲಭ್ಯವಾಗದೆ ಇರುವುದರಿಂದ ಕೆಲಸಗಳು ಬಾಕಿಯಾಗಿದ್ದು ಗ್ರಾ.ಪಂ. ಅಸಹಾಯಕವಾಗಿದೆ.
Advertisement
ನೆಲ ಅಂತಸ್ತಿನ ಕಾಮಗಾರಿ ಶೀಘ್ರ ಪೂರ್ಣ ಸಿಎಸ್‌ಆರ್ ನಿಧಿ ಬಿಡುಗಡೆ ಕುರಿತಾಗಿ ಸ್ಪಷ್ಟ ನಿಲುವನ್ನು ಕೇಳುತ್ತೇವೆ. ಗ್ರಾ.ಪಂ. ಅನುದಾನಗಳಡಿ ನೆಲ ಅಂತಸ್ತಿನ ಕಾಮಗಾರಿ ಮುಗಿಸಿಕೊಡುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ
- ದಮಯಂತಿ ಅಮೀನ್, ಗ್ರಾ. ಪಂ. ಅಧ್ಯಕ್ಷೆ