Advertisement

Padubidri: ತಂಡದಿಂದ ಹಲ್ಲೆ… ದೂರು-ಪ್ರತಿದೂರು

09:56 PM Jun 19, 2024 | Team Udayavani |

ಪಡುಬಿದ್ರಿ: ಎಲ್ಲೂರು ದೇವಸ್ಥಾನದ ಎದುರಿನ ರಸ್ತೆಯಲ್ಲಿ ತೆರಳುತ್ತಿದ್ದಾಗ ತಂಡವೊಂದು ಅಡ್ಡಗಟ್ಟಿ ಹಲ್ಲೆ ನಡೆಸಿರುವುದಾಗಿ ಜಯಂತ್‌ ಟಿ. ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಜೂ. 18ರಂದು ನಾನು ಪರಿಚಯದವರಾದ ಮರ್ದಾಳ ಸಂತೋಷ್‌, ಮುಡಿಪು ರವಿ ಶೆಟ್ಟಿ ಹಾಗೂ ಜಯರಾಮ್‌ ಅವರೊಂದಿಗೆ ಕಾರಿನಲ್ಲಿ ಎಲ್ಲೂರು ಗ್ರಾಮದ ಸಂತೋಷ್‌ ಆಚಾರ್ಯ ಅವರ ಮನೆಗೆ ಹೋಗಿ ವಾಪಸಾಗುತ್ತಿದ್ದ ಸಂದರ್ಭ ಬೈಕಿನಲ್ಲಿ ಬಂದಿದ್ದ ಸುನಿಲ್‌ ಹಾಗೂ 11 ಮಂದಿ ಹಲ್ಲೆ ನಡೆಸಿದ್ದಾರೆ. ಸಂತೋಷ್‌ ಅವರ 3 ಲಕ್ಷ ರೂ. ಬೆಲೆಬಾಳುವ ಕೆಮರಾವೊಂದನ್ನೂ ಹಾನಿಗೈದು ನನ್ನ ಮೊಬೈಲ್‌ ಕಸಿದಿರುವ ಆರೋಪಿಗಳು ಸ್ಥಳಕ್ಕೆ ಬಂದಿದ್ದ ಸಂತೋಷ್‌ ಆಚಾರ್ಯ ಮತ್ತು ಅವರ ಪತ್ನಿ ಆರತಿ ಅವರನ್ನು ದೂಡಿ ಹೊಡೆದಿದ್ದಾರೆ. ಬಳಿಕ ಎಲ್ಲರಿಗೂ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸಾಲ ಮರುಪಾವತಿಸದೆ ಹಲ್ಲೆ:
ಈ ಕುರಿತಾಗಿ ಕಡಬದ ರವೀಂದ್ರ ಶೆಟ್ಟಿ ಹಾಗೂ ಇತರ ಮೂವರ ವಿರುದ್ಧ ಸಾಣಿಂಜೆ ನಿವಾಸಿ ಸುಜಾತಾ ಪ್ರತಿದೂರನ್ನು ಪಡುಬಿದ್ರಿ ಪೊಲೀಸ್‌ ಠಾಣೆಗೆ ನೀಡಿದ್ದಾರೆ. ಜೂ. 18ರಂದು ಸಂಜೆ ಸಂತೋಷ್‌ ಆಚಾರ್ಯ ಮನೆಗೆ ತೆರಳಿ ಆತ ಹಾಗೂ ಆತನ ಪತ್ನಿ ಆರತಿಯವರು ಎರಡು ಸಹಾಯ ಸಂಘಗಳಿಂದ ಪಡೆದುಕೊಂಡಿರುವ ಸುಮಾರು 4.5 ಲಕ್ಷ ರೂ. ಸಾಲವನ್ನು ಮರುಪಾವತಿ ಮಾಡಲು ತಿಳಿಸುತ್ತಿದ್ದೆ. ಈ ಸಂದರ್ಭದಲ್ಲಿ ಬಿಳಿ ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಬಂದ ನಾಲ್ವರು ವ್ಯಕ್ತಿಗಳು ಸಾಲವನ್ನು ಹೇಗೆ ವಸೂಲಿ ಮಾಡಿಕೊಳ್ಳುವಿರಿ ಎಂದು ಹೇಳುತ್ತಾ, ಮಾತಿಗೆ ಮಾತು ಬೆಳೆಸಿ ಆರೋಪಿ ರವೀಂದ್ರ ಶೆಟ್ಟಿ ನನ್ನ ಮೈಗೆ ಕೈ ಹಾಕಿ ದೂಡಿ ಬೀಳಿಸಿದ್ದಾನೆ. ತಡೆಯಲು ಬಂದ ಕವಿತಾ ಅವರನ್ನೂ ದೂಡಿದ್ದು, ಈ ಪರಿಣಾಮ ನಾನು ಮತ್ತು ಕವಿತಾ ಚಿಕಿತ್ಸೆಗಾಗಿ ಉಡುಪಿಯ ಸರಕಾರಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಾಗಿದ್ದೇವೆ ಎಂದು ಪ್ರತಿದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದ ಎರಡೆರಡು ಆಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next