ಪಡುಬಿದ್ರಿ: ಬೆಳ್ಮಣ್ ನಿವಾಸಿ ಸದಾನಂದ ದೇವಾಡಿಗ(48) ಪಡುಬಿದ್ರಿಯಲ್ಲಿ ಜ. 21ರಂದು ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿದ್ದ ವೇಳೆ ಮಂಗಳೂರು ಕಡೆಯಿಂದ ಉಡುಪಿಯತ್ತ ಹೋಗುತ್ತಿದ್ದ ಬೈಕ್ ಸವಾರನು ನಿರ್ಲಕ್ಷ್ಯತೆಯಿಂದ ಬೈಕನ್ನು ಢಿಕ್ಕಿ ಹೊಡೆದಾಗ ರಸ್ತೆಗೆ ಬಿದ್ದು ತಲೆಯ ಹಿಂಭಾಗಕ್ಕೆ ತೀವ್ರತರ ಗಾಯಗೊಂಡಿದ್ದಾರೆ.
ಪಡುಬಿದ್ರಿಯಲ್ಲಿ ಪ್ರಥಮ ಚಿಕಿತ್ಸೆಯನ್ನು ಕೊಡಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಲಾಗಿದೆ.
ಆರೋಪಿ ಬೈಕ್ ಸವಾರ ಯಶವಂತ್ ಕೂಡಾ ಅವರ ಬಲಭುಜ ಹಾಗೂ ತುಟಿಗಳಿಗೆ ಗಾಯಗೊಂಡಿದ್ದು ಪಡುಬಿದ್ರಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.