ಪಡುಬಿದ್ರಿ: ಬಂಟರ ಸಮಾಜವು ಎಲ್ಲ ಕ್ಷೇತ್ರಗಳಲ್ಲಿಯೂ ತನ್ನ ಛಾಪನ್ನು ಮೂಡಿಸಿರುವ ಸಮಾಜವಾಗಿದೆ. ನೂತನ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಅವರ ಆಶಯದಂತೆ ಪಡುಬಿದ್ರಿ ಬಂಟರ ಸಂಘದ ಅಭಿವೃದ್ಧಿ ಕಾರ್ಯಗಳು ನಡೆಯಲಿ ಎಂದು ಬೆಂಗಳೂರಿನ ಎಂಆರ್‌ಜಿ ಗ್ರೂಪ್ಸ್‌ನ ಸಿಎಂಡಿ ಕೆ. ಪ್ರಕಾಶ್ ಶೆಟ್ಟಿ ಹೇಳಿದರು.
ಅವರು ಶನಿವಾರ ಪಡುಬಿದ್ರಿ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ| ದೇವಿಪ್ರಸಾದ್ ಶೆಟ್ಟಿ ಮತ್ತವರ ತಂಡದ ಪದಗ್ರಹಣ ಸಮಾರಂಭವನ್ನು ಪಡುಬಿದ್ರಿ ಬಂಟರ ಭವನದ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ಮಾತೃ ಸಮಾಜ ಮತ್ತು ಜನ್ಮ ನೀಡಿದ ತಾಯಿಯನ್ನು ನಾವೆಂದೂ ಮರೆಯುವಂತಿಲ್ಲ ಎಂಬ ನೆಲೆಯಲ್ಲಿ ತಾನು ಬಂಟ ಸಮಾಜದ ಸೇವೆಗಾಗಿ ಕಂಕಣಬದ್ಧನಾಗಿದ್ದೇನೆ ಎಂದು ಪಡುಬಿದ್ರಿ ಬಂಟರ ಸಂಘದ ನೂತನ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಹೇಳಿದರು.
ಗಣ್ಯರಾದ ಕೃಷ್ಣ ವೈ. ಶೆಟ್ಟಿ, ಉಮಾ ವೈ. ಶೆಟ್ಟಿ, ರವಿ ಸುಂದರ ಶೆಟ್ಟಿ, ಕಿಶೋರ್ ಆಳ್ವ, ವೈ. ಶಶಿಧರ ಶೆಟ್ಟಿ, ಸಾಂತೂರು ಭಾಸ್ಕರ ಶೆಟ್ಟಿ, ರವೀಂದ್ರನಾಥ ಜಿ. ಹೆಗ್ಡೆ, ಸುರೇಶ್ ಶೆಟ್ಟಿ ಹಾಗೂ ನವೀನ್‌ಚಂದ್ರ ಜೆ. ಶೆಟ್ಟಿ, ಶರತ್ ಶೆಟ್ಟಿ, ರವಿ ಶೆಟ್ಟಿ ಗುಂಡ್ಲಾಡಿ, ಅಕ್ಷತಾ ಶೆಟ್ಟಿ, ನೇತ್ರಾವತಿ ಶೆಟ್ಟಿ ಉಪಸ್ಥಿತರಿದ್ದರು.
ವಿಶ್ವ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಡಾ| ದೇವಿಪ್ರಸಾದ್ ಶೆಟ್ಟಿ ಅವರಿಗೆ ಅಧಿಕಾರದ ಪ್ರಮಾಣವಚನ ಬೋಧಿಸಿದರು. ಮಂಗಳೂರಿನ ಬಂಟರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ನೂತನ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು ಮತ್ತು ನೂತನ ಖಜಾಂಚಿ ರವಿ ಶೆಟ್ಟಿ ಗುಂಡ್ಲಾಡಿ ಅವರಿಗೆ ಅಧಿಕಾರದ ಪ್ರಮಾಣವಚನವನ್ನಿತ್ತರು. ಪುಣೆ ಬಂಟರ ಸಂಘದ ಅಧ್ಯಕ್ಷ ಇನ್ನ ಕುರ್ಕಿಲ್‌ಬೆಟ್ಟು ಸಂತೋಷ್ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಪಡುಬಿದ್ರಿ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಮನೋಹರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಬಂಟರ ವಾಹಿನಿ ವಿಶೇಷ ಸಂಚಿಕೆಯನ್ನೂ ಬಿಡುಗಡೆಗೊಳಿಸಲಾಯಿತು.
ನಿಕಟಪೂರ್ವ ಕಾರ್ಯದರ್ಶಿ ಡಾ| ಮನೋಜ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಅರ್ಪಿತಾ ಪಿ. ಶೆಟ್ಟಿ ನಿರ್ವಹಿಸಿದರು. ನೂತನ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು ವಂದಿಸಿದರು.
ಜತೆಯಾಗಿ ಸಾಗೋಣ: ಡಾ| ದೇವಿಪ್ರಸಾದ್ ಶೆಟ್ಟಿ
ಪಡುಬಿದ್ರಿ ಬಂಟರ ಸಂಘದ ಅಭಿವೃದ್ಧಿಗಾಗಿ ಬಂಟರ ಶೈಕ್ಷಣಿಕ ಟ್ರಸ್ಟ್, ಬಂಟರ ಭವನವನ್ನು ಸಂಪೂರ್ಣ ಹವಾನಿಯಂತ್ರಣ, ಬಂಟರ ಯುವ ವಿಭಾಗ ಸ್ಥಾಪನೆೆ, ಅಶಕ್ತರ ನೆರವಿಗಾಗಿ ದಿ| ಜಗನ್ನಾಥ ಶೆಟ್ಟಿ ಕಲ್ಯಾಣ ನಿಧಿ ಸ್ಥಾಪನೆ ಮೊದಲಾದ ಹಲವು ಯೋಜನೆ, ಯೋಚನೆಗಳಿವೆ. ಎಲ್ಲರೂ ಜತೆಯಾಗಿಯೇ ಸಾಗೋಣ ಎಂದು ಡಾ| ದೇವಿಪ್ರಸಾದ್ ಶೆಟ್ಟಿ ಹೇಳಿದರು.