ಏನು ಕೃಷಿ: ಭತ್ತ
ವಯಸ್ಸು: 75
ಕೃಷಿ ಪ್ರದೇಶ: 5.30 ಎಕ್ರೆ
Advertisement
ನಾವು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್ ದಿನಾಚರಣೆ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿ ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.
Related Articles
ತಾನು ಸಂರಕ್ಷಿಸಿದ ಭತ್ತ ತಳಿಗಳನ್ನು ಅನೇಕರಿಗೆ ನೀಡಿ ಭತ್ತ ಬೇಸಾಯವನ್ನು ಪೋಷಿಸುವಲ್ಲಿ ಇವರ ಕೊಡುಗೆ ಅಪಾರ. ಇಳಿ ವಯಸ್ಸಿನಲ್ಲೂ ಬತ್ತದ ಉತ್ಸಾಹ ಅವರದು, ಅವರ 5 ಎಕ್ರೆ ಗದ್ದೆಯಲ್ಲಿ ಭತ್ತ ಬೇಸಾಯ ನಳನಳಿಸುತ್ತಿದೆ. ಈ ಮೊದಲು 20 ಎಕ್ರೆಯಲ್ಲಿ ಬೆಳೆಯುತ್ತಿದ್ದವರು ಪ್ರಸ್ತುತ ಕಾರ್ಮಿಕರ ಕೊರತೆ, ಕಾಡು ಪ್ರಾಣಿಗಳ ಉಪಟಳದಿಂದ ಸದ್ಯ 5 ಎಕ್ರೆಯಲ್ಲಿ ಭತ್ತ ಬೆಳೆಯುತ್ತಿದ್ದಾರೆ. 75 ವರ್ಷ ವಯಸ್ಸಿನಲ್ಲೂ ಕುಂದದ ಅವರ ಕೃಷಿ ಆಸಕ್ತಿಗೆ ಸಾಥಿಯಾಗಿ ಪುತ್ರ ಬಿ.ಕೆ. ಪರಮೇಶ್ವರ್ ರಾವ್ ಬೆಂಗಳೂರಿನ ಬಿಎಚ್‌ಇಎಲ್‌ನಲ್ಲಿ ಇಲಿಕ್ಟ್ರಿಕಲ್ ಎಂಜಿನಿಯರ್ ಹುದ್ದೆಗೆ ರಾಜೀನಾಮೆ ನೀಡಿ ತಂದೆಯೊಂದಿಗೆ ಸೇರಿಕೊಂಡಿದ್ದಾರೆ. ತಾನು ಭತ್ತ ಮಾತ್ರವಲ್ಲದೆ ಅಡಿಕೆ, ತೆಂಗು, ಸೇರಿದಂತೆ ಸಾವಯವ ಕೃಷಿ, ತರಕಾರಿ ಬೆಳೆಯುತ್ತಿದ್ದಾರೆ.
Advertisement
ಅಭಿವೃದ್ಧಿ ಪಡಿಸಿದ ತಳಿಗಳುಅಮೈ 1, 2,3,4, ಅಜಿಪ್ಪ, ಅಜ್ಜಿಗ, ಕಳಮೆ, ಗಂಧಸಾಲೆ, ಡಾಂಬರ್ ಸಾಲೆ, ಕುರುವ, ಅತಿಕ ರಯ, ಬಾಸ್ಮತಿ ಗಿಡ್ಡ, ಬಂಗಾರ ಕಡ್ಡಿ, ಅಂದನೂರು ಸಣ್ಣ, ಎಲಿcರ್, ಕಾಗಿಸಾಲೆ, ಕಜೆ ಜಯ, ಕಳಮೆ, ಕಯಮೆ, ಕೊಯಮತ್ತೂರು ಸಣ್ಣ, ಕುಟ್ಟಿ ಕಯಮೆ, ಮನಿಲಾ, ಮೀಟರ್, ಮೈಸೂರು ಮಲ್ಲಿಗೆ, ಪದ್ಮರೇಖ, ರತನ್ ಸಾಲೆ, ಸಬಿತ, ಪಿಂಗಾರ, ಸಿಂಧೂರ, ರಾಂಗಲ್ಲಿ, ಶ್ರೀನಿಧಿ, ತನು, ತುಲಸೀವೋಗ್, ಸೋಮಸಾಲೆ, ಸೇಲಂ ಸಣ್ಣ, ನೀರಬಂಡೆ, Mಟ4, ಕಖ20, ಏಒಕ 20, ಅ1, ಅ2, ಅ3, ಕರಿಯ ಜೇಬಿ, ಕರಿದಡಿ ಸೇರಿದಂತೆ 170 ತಳಿಗಳಿವೆ. ಪ್ರಶಸ್ತಿ ಸಮ್ಮಾನ
2002ರಲ್ಲಿ ಭಾರತೀಯ ಕಿಸಾನ್ ಸಂಘದಿಂದ ಪುರುಷೋತ್ತಮ ಪುರಸ್ಕಾರದ ಮೂಲಕ ಆರಂಭಗೊಂಡು, 2017ರಲ್ಲಿ ಅಂದಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಂದ ಮತ್ತು 2004ರಲ್ಲಿ ಸೃಷ್ಟಿ ಸಮ್ಮಾನ್, ಒಡಿಯೂರು ಪ್ರಶಸ್ತಿ, ಬಸ್ರೂರು ಪ್ರಶಸ್ತಿ, ಮಂಗಳೂರು ವಿ.ವಿ. ಸೇರಿದಂತೆ ಸಂಘ ಸಂಸ್ಥೆಗಳಿಂದ ನೂರಾರು ಪ್ರಶಸ್ತಿ ಸಂದಿವೆ. ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಜಿಲ್ಲೆಗೆ ಹೆಮ್ಮೆ ತಂದಿದೆ. 35 ವರ್ಷದಿಂದ ಭತ್ತ ತಳಿ ಸಂಶೋಧನೆ
5.30 ಎಕ್ರೆಯಲ್ಲಿ ಭತ್ತ ಬೆಳೆ
170 ಭತ್ತ ತಳಿ ಸಂರಕ್ಷಣೆ
2018-19ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ
ಏಣಿಲು-ಸುಗ್ಗಿ ಬೆಳೆ
ಮೊಬೈಲ್ ಸಂಖ್ಯೆ- 9945976620 ಕೃಷಿಕರಿಗೆ ವರದಾನವಾಗಲಿ
ಭತ್ತ ಕೃಷಿಯಿಂದ ಎಂದಿಗೂ ಭೂಮಿಗೆ ಸಂಕಷ್ಟವಿಲ್ಲ. ಪಾರಂಪರಿಕ ಕೃಷಿ ಬೆಳೆಸುವುದರಿಂದ ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ. ವಾಣಿಜ್ಯ ಬೆಳೆ ಆದಾಯಕ್ಕಷ್ಟೆ, ಹೊಟ್ಟೆ ತುಂಬದು. ಮತ್ತೂಂದೆಡೆ ವೈಜ್ಞಾನಿಕವಾಗಿ ಗದ್ದೆಗಳಿಂದ ಒರತೆ ಹೆಚ್ಚಾಗಿ ಅಂತರ್ಜಲ ಸಮೃದ್ಧಿಯಾಗುತ್ತದೆ. ಈ ಉದ್ದೇಶದಿಂದಲೇ ಭತ್ತ ತಳಿ ಸಂರಕ್ಷಿಸುತ್ತಾ ಬಂದಿದ್ದೇನೆ. ನಾನು ಸಂರಕ್ಷಿಸಿದ ತಳಿಗಳು ನಿತ್ಯನಿರಂತರವಾಗಿ ಯುವ ಕೃಷಿಕ ವರ್ಗವನ್ನು ಉತ್ತೇಜಿಸಲಿ ಮತ್ತು ರಾಜ್ಯವ್ಯಾಪಿ ಭತ್ತದ ಕೃಷಿಕರಿಗೆ ವರದಾನವಾಗಲಿ ಎಂಬುದೇ ನನ್ನ ಉದ್ದೇಶ.
-ಬಿ.ಕೆ. ದೇವರಾವ್, ಭತ್ತ ತಳಿ ತಪಸ್ವಿ, ಬೆಳ್ತಂಗಡಿ, ಮಿತ್ತಬಾಗಿಲು