Advertisement

ಕೆ. ಮಂಜು ಮಗ ಈಗಪಡ್ಡೆ ಹುಲಿ; ಗುರು ದೇಶಪಾಂಡೆ ನಿರ್ದೇಶನ

03:16 PM Jan 18, 2018 | Sharanya Alva |

ನಿರ್ಮಾಪಕ ಕೆ. ಮಂಜು ತಮ್ಮ ಮಗ ಶ್ರೇಯಸ್‌ನನ್ನು ಹೀರೋ ಮಾಡುತ್ತಾರೆ, ಆ ಚಿತ್ರವನ್ನು ಇಮ್ರಾನ್‌ ಸರ್ದಾರಿಯಾ ನಿರ್ದೇಶಿಸುತ್ತಿದ್ದಾರೆ ಎಂಬಂತಹ ಸುದ್ದಿಗಳು ಕೇಳಿ ಬರುತ್ತಲೇ ಇದ್ದವು. ಈಗ ಅದು ಪಕ್ಕಾ ಆಗಿದೆ. ಶ್ರೇಯಸ್‌ ಹೀರೋ ಆಗಿ ಚಿತ್ರರಂಗಕ್ಕೆ ಬರಲು ತಯಾರಾಗಿದ್ದು, “ಪಡ್ಡೆ ಹುಲಿ’ ಎಂಬ ಚಿತ್ರದ ಮೂಲಕ ಹೀರೋ ಆಗುತ್ತಿದ್ದಾರೆ. ಗುರು ದೇಶಪಾಂಡೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಫೆಬ್ರವರಿ 9ರಂದು ಕೆ. ಮಂಜು ಹುಟ್ಟುಹಬ್ಬದ ಅಂಗವಾಗಿ ಪ್ರಾರಂಭವಾಗಲಿದೆ.

Advertisement

“ಪಡ್ಡೆ ಹುಲಿ’ ಚಿತ್ರವು ಇವತ್ತಿನ ಟ್ರೆಂಡ್‌ಗೆ ಇರುವ ಒಂದು ಕಾಲೇಜ್‌ ಲವ್‌ ಸ್ಟೋರಿ ಚಿತ್ರವಾಗಿರುತ್ತದೆ ಎನ್ನುತ್ತಾರೆ ನಿರ್ದೇಶಕ ಗುರು ದೇಶಪಾಂಡೆ. “ಇಲ್ಲೊಂದು ಯೂಥ್‌ ಸ್ಟೋರಿ ಇರಲಿದ್ದು, ಈಗಿನ ಕಾಲದ “ಪ್ರೇಮ ಲೋಕ’ ಎನ್ನಬಹುದು. ಶ್ರೇಯಸ್‌ ಎದುರು ಹೊಸ ನಾಯಕಿಯನ್ನು ಪರಿಚಯಿಸುತ್ತಿದ್ದೇವೆ. ಉಳಿದ ತಾರಾಗಣದ ಆಯ್ಕೆ ನಡೆಯುತ್ತಿದ್ದು, ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಅವರ ಸಂಗೀತ ಮತ್ತು ಕೆ.ಎಸ್‌. ಚಂದ್ರಶೇಖರ್‌ ಅವರ ಛಾಯಾಗ್ರಹಣ ಇರಲಿದೆ’ ಎನ್ನುತ್ತಾರೆ ಗುರು ದೇಶಪಾಂಡೆ.

ಇದಕ್ಕೂ ಮುನ್ನ ಶ್ರೇಯಸ್‌ ಮೊದಲ ಚಿತ್ರವನ್ನು ಇಮ್ರಾನ್‌ ನಿರ್ದೇಶಿಸುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ಅವರ ಚಿತ್ರದ ಬಜೆಟ್‌ ಹೆಚ್ಚಾಗಿರುವುದರಿಂದ ಆ ಚಿತ್ರವನ್ನು ಸದ್ಯಕ್ಕೆ ಪಕ್ಕಕ್ಕೆ ಇಡಲಾಗಿದೆ. “ಇಮ್ರಾನ್‌ ಚಿತ್ರದ ಬಜೆಟ್‌ ಸ್ವಲ್ಪ ಜಾಸ್ತಿಯಾಗಲಿದೆ. ಒಬ್ಬ ಹೊಸ ಹುಡುಗನ ಚಿತ್ರಕ್ಕೆ ಅಷ್ಟು ದೊಡ್ಡ ಬಜೆಟ್‌ ಕಷ್ಟ. ಈ ಮಧ್ಯೆ ಇನ್ನೂ ಒಂದೊಳ್ಳೆಯ ಕಥೆ ಸಿಕ್ಕಿದೆ. ಕಳೆದ ಐದಾರು ತಿಂಗಳಿಂದ ಕೂತು ವರ್ಕ್‌ ಮಾಡಿದ್ದೇವೆ’ ಎನ್ನುತ್ತಾರೆ ಮಂಜು.

ಇನ್ನು ಈ ಚಿತ್ರದ ನಿರ್ಮಾಪಕರು ಯಾರು ಎಂಬದು ಇನ್ನೂ ಪಕ್ಕಾ ಆಗಿಲ್ಲ. ಶ್ರೇಯಸ್‌ನನ್ನು ತಮ್ಮ ಬ್ಯಾನರ್‌ನ ಮೂಲಕ ಹೀರೋ ಮಾಡಬೇಕು ಎಂಬುದು ಮಂಜು ಆಸೆಯಾದರೂ, ಹೀರೋ ಮಾಡುವುದಕ್ಕೆ “ಕಾಲೇಜ್‌ ಕುಮಾರ’ ನಿರ್ಮಾಪಕ ಪದ್ಮನಾಭ ಗೌಡ ಹಾಗೂ “ಉಪ್ಪು ಹುಳಿ ಖಾರ’ ನಿರ್ಮಾಪಕ ರಮೇಶ್‌ ರೆಡ್ಡಿ ಸಹ ಮುಂದೆ ಬಂದಿದ್ದಾರಂತೆ. ಹಾಗಾಗಿ ಈ ಮೂವರಲ್ಲಿ ಒಬ್ಬರು ಚಿತ್ರವನ್ನು ನಿರ್ಮಿಸುವ ಸಾಧ್ಯತೆ ಇದೆ.

 “ಪದ್ಮನಾಭ್‌ ಮತ್ತು ರಮೇಶ್‌ ಇಬ್ಬರೂ ನನಗಿಂಥ ದೊಡ್ಡದಾಗಿ ಪರಿಚಯ ಮಾಡುವುದಕ್ಕೆ ಮುಂದೆ ಬಂದಿದ್ದಾರೆ. ಚಿತ್ರಕ್ಕೆ ಹೊಸ ನಾಯಕಿಯ ಹುಡುಕಾಟ ನಡೆದಿದ್ದು, ಚಿತ್ರೀಕರಣವು ಬೆಂಗಳೂರು, ಚಿತ್ರದುರ್ಗ ಮುಂತಾದ ಕಡೆ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next