Advertisement

ದಾಖಲೆ ಸುಳ್ಳು ಎಂದು ಡಿಕೆಶಿ ಸಾಬೀತು ಮಾಡಲಿ: ಸಚಿವ ಕಾರಜೋಳ ಸವಾಲು

01:32 PM Mar 02, 2022 | Team Udayavani |

ಬೆಂಗಳೂರು: ಮೇಕೆದಾಟು ಪಾದಯಾತ್ರೆ ಸರ್ವೋಚ್ಚ ನ್ಯಾಯಾಲಯದ ವಿರುದ್ಧವೊ ಅಥವಾ ನಾಯಕತ್ವಕ್ಕಾಗಿ ಹೋರಾಟವೋ ಎನ್ನುವುದನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಅವರನ್ನು ಕೇಳುತ್ತೇನೆ ಎಂದು ಸಚಿವ ಗೋವಿಂದ ಕಾರಜೋಳ ಪ್ರಶ್ನೆ ಮಾಡಿದ್ದಾರೆ.

Advertisement

ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ನವರು ಮೇಕೆದಾಟು ಯೋಜನೆಗೆ ಎರಡನೇ ಹಂತದ ಪಾದಯಾತ್ರೆ ಮಾಡುತ್ತಿದ್ದಾರೆ. ಈ ಬಾರಿ ರಣದೀಪ್ ಸಿಂಗ್ ಸುರ್ಜೆವಾಲಾರಿಂದ ಉದ್ಘಾಟನೆ ಮಾಡಿಸಿರುವುದು ವಿಶೇಷ.ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ 2013-18 ರ ವರೆಗೆ ಅಧಿಕಾರದಲ್ಲಿ ಇದ್ದರು. 2013 ರಲ್ಲಿ ಕಾಂಗ್ರೆಸ್ ನಡಿಗೆ ಕೃಷ್ಣೆ ಯ ಕಡೆಗೆ ಅಂತ ಮಾಡಿ ಐದು ವರ್ಷದಲ್ಲಿ 15 ಲಕ್ಷ ಎಕರೆ ನಿರಾವರಿ ಮಾಡುವುದಾಗಿ ಹೇಳಿದರು. ಯುಕೆಪಿ ಯೋಜನೆಗಳಿಗೆ ಐದು ವರ್ಷದಲ್ಲಿ 7599. ಕೋಟಿ ರೂ. ಖರ್ಚು ಮಾಡಿದ್ದಾರೆ.ಕೃಷ್ಣಾ ನ್ಯಾಯಾಧಿಕರಣದ ವ್ಯಾಜ್ಯ ನಿವಾರಣೆಗೆ 2300 ಕೋಟಿ ಮಾತ್ರ ಖರ್ಚು ಮಾಡಿದ್ದಾರೆ.ಮೇಕೆದಾಟು ಪಾದಯಾತ್ರೆ ಯಾವ ಉದ್ದೇಶಕ್ಕೆ ಎನ್ನುವುದನ್ನು ಸ್ಪಷ್ಟ ಪಡಿಸಬೇಕು ಎಂದರು.

ನಾವು ಅಧಿಕಾರಕ್ಕೆ ಬಂದ.ಮೇಲೆ ಕೃಷ್ಣಾ ಕೊಳ್ಳದ ಮುಳುಗಡೆಯಾಗುವ 20 ಹಳ್ಳಿಗಳ ಸ್ಥಳಾಂತರಕ್ಕೆ ತೀರ್ಮಾನ ಮಾಡಿ 17200 ಕೋಟಿ ರೂ. ಮೀಸಲಿಟ್ಟಿದ್ದೇವು. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಐದು ವರ್ಷ ಏನೂ ಮಾಡದೇ ಇದ್ದುದರಿಂದ ಈಗ ಕೃಷ್ಣಾ ಯೋಜನೆಗಳ ವೆಚ್ಚ 70 ಸಾವಿರ ಕೋಟಿಗೆ ಏರಿದೆ. ಮೇಕೆದಾಟು ಯೋಜನೆಗೆ ಕಾಂಗ್ರೆಸ್ (2018) ಪಿಎಫ್ ಆರ್ ರಿಪೋರ್ಟ್ ಕೊಟ್ಟಿದ್ದಾರೆ. ನಾನು ಸುಳ್ಳು ಹೇಳಿದ್ದೇನೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ನಾನು ಬಿಡುಗಡೆ ಮಾಡಿರುವ ದಾಖಲೆ ಸುಳ್ಳು ಎಂದು ಡಿ.ಕೆ ಶಿವಕುಮಾರ್ ಸಾಬೀತು ಮಾಡಲಿ ಎಂದು ಸವಾಲು ಹಾಕಿದರು.

ಸಿಂಧಗಿ ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ನಾನು ಹೊಟ್ಟೆ ಪಾಡಿಗೆ ಬಿಜೆಪಿ ಸೇರಿದ್ದೇನೆ ಎಂದು ಹೇಳಿದ್ದಾರೆ. ನಾವೂ ನೀವು ಒಂದೇ ಪಕ್ಷದಲ್ಲಿ ಇದ್ದೆವು. ನಾವು ಬಡವರಿರಬಹುದು ಆದರೆ ಸ್ವಾಭಿಮಾನಕ್ಕೆ ಧಕ್ಕೆಯಾಗುವಂತೆ ಮಾತನಾಡುವುದು ಸರಿಯಲ್ಲ ಎಂದರು.

2013 ರಲ್ಲಿ ಕೃಷ್ಣಾ ಕೊಳ್ಳದ ಜನರಿಗೆ ಮೊಸ ಮಾಡಿದ್ದೀರಿ ಈಗ ಕಾವೇರಿ ಕೊಳ್ಳದ ಜನರಿಗೆ ಮೋಸ ಮಾಡಲು ಹೊರಟಿದ್ದೀರಿ. ವೋಟ್ ಬ್ಯಾಂಕ್ ರಾಜಕಾರಣ. ನೀವು ಮಾಡುವ ಗಿಮಿಕ್ ನಿಂದ ಜನರು ನಿಮ್ಮನ್ನು ಇನ್ನಷ್ಟು ದೂರ ತಳ್ಳುತ್ತಾರೆ. ದೇಶದಲ್ಲಿ ಕಾಂಗ್ರೆಸ್ ಬ್ರಿಟೀಷರಿಗಿಂತ ಕೆಟ್ಟ ಆಡಳಿತ. ನೀಡಿದ್ದಾರೆ ಎಂದರು.

Advertisement

ಫೆ 11 ರಂದು ಮೇಕೆದಾಟು ಪ್ರಕರಣದ ಕುರಿತು ಚರ್ಚೆ ನಡೆದಿದೆ. ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡಲಾಗುತ್ತಿದೆ ಆದಷ್ಟು ಬೇಗ ಒಪ್ಪಿಗೆ ನೀಡುವಂತೆ ಆಗ್ರಹಿಸಿದ್ದಾರೆ. ನಮ್ಮ ಸರ್ಕಾರ ನೀರಾವರಿ ಯೋಜನೆಗಳಿಗೆ ಮೊದಲ ಆದ್ಯತೆ ನೀಡಲಿದೆ. ಇನ್ನೆರಡು ದಿನದಲ್ಲಿ ಬಜೆಟ್ ಘೋಷಣೆ ಇದೆ. ಈಗ ಯಾವುದನ್ನೂ ಹೇಳುವುದಿಲ್ಲ ಎಂದರು.

ರಾಜ್ಯದ ನೀರಾವರಿಗೆ ಒಂದು ಲಕ್ಷ ಕೋಟಿ ರೂ. ಖರ್ಚು ಮಾಡುವುದಾಗಿ ಹೇಳಿದ್ದೆವು. ಅದರೆ ಕೋವಿಡ್ ನಮಗೆ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಲು ಅವಕಾಶ ನೀಡಲಿಲ್ಲ.ನದಿ ಜೋಡಣೆ ಯೋಜನೆಗೆ ನಮ್ಮ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಮೇಕೆಡಾಟು ಯೋಜನೆಗೆ 7404 ಎಕರೆ ಪ್ರದೇಶ ಯೋಜನೆ ವ್ಯಾಪ್ತಿಗೆ ಒಳಪಡುತ್ತದೆ. 104 ಎಕರೆ ಅರಣ್ಯ ಪ್ರದೇಶ ಇದೆ. 5257 ಎಕರೆ ಮುಳುಗಡೆಯಾಗಲಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next